ಇಸ್ಲಾಂ ಧರ್ಮವನ್ನು ಅನುಸರಿಸುವವರು ಲಿವ್-ಇನ್ ಸಂಬಂಧದಲ್ಲಿ ಇರುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅದರಲ್ಲೂ ವಿಶೇಷವಾಗಿ ಸಂಗಾತಿಯ ಜೀವಂತವಾಗಿರುವಾಗ ಬೇರೆ ಮಹಿಳೆಯ ಜತೆ ಲಿವ್-ಇನ್ ಸಂಬಂಧದಲ್ಲಿ ಇರುವಂತಿಲ್ಲ ಎಂದು ತಿಳಿಸಿದೆ.
ಇಂತಹ ಲಿವ್-ಇನ್ ಸಂಬಂಧಗಳು ಇಸ್ಲಾಮಿಕ್ ತತ್ವಗಳಿಗೆ ವಿರುದ್ಧವಾಗಿದೆ. ಹೀಗಾಗಿ ಅಂತಹ ಸಂಬಂಧದಲ್ಲಿ ಇರುವಂತಿಲ್ಲ. ಸ್ನೇಹಾ ದೇವೆ ಮತ್ತು ಮೊಹಮ್ಮದ್ ಶಾದಾಬ್ ಖಾನ್ ಅವರು ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಎಆರ್ ಮಸೂದಿ ಮತ್ತು ಎಕೆ ಶ್ರೀವಾಸ್ತವ -1 ಅವರ ಲಕ್ನೋ ಪೀಠವು ಈ ಹೇಳಿಯನ್ನು ನೀಡಿದೆ.