ಸಂಧ್ಯಾ ಚಿತ್ರಮಂದಿರಕ್ಕೆ ಅಲ್ಲು ಅರ್ಜುನ್ ಭೇಟಿ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಮಹಿಳೆಯರೊಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಬಂಧನವಾಗಿತ್ತು. ಮೃತ ಮಹಿಳೆಯ ಪತಿಯ ದೂರು ಆಧರಿಸಿ ಅಲ್ಲು ಅರ್ಜುನ್ ಅನ್ನು ಬಂಧಿಸಲಾಗಿತ್ತು. ಆದರೆ ಇದೀಗ ಘಟನೆಗೆ ಸಂಬಂಧಿಸಿದಂತೆ ಬಂಧಿತರಾಗಿದ್ದ ತೆಲುಗು ಖ್ಯಾತ ನಟ ಅಲ್ಲು ಅರ್ಜುನ್ ಗೆ ತೆಲಂಗಾಣ ಹೈಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಜಾಮೀನು ಮಂಜೂರು ಮಾಡಿತ್ತು. ನಿನ್ನೆ ರಾತ್ರಿಯಿಡೀ ಜೈಲಿನಲ್ಲಿ ಕಾಲ ಕಳೆದ ನಟ ಅಲ್ಲು ಅರ್ಜುನ್ ಜಾಮೀನು ಪ್ರಕ್ರಿಯ ಪೂರ್ತಿಗೊಳಿಸಿ ಇದೀಗ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಪೊಲೀಸ್ ಭದ್ರತೆಯೊಂದಿಗೆ ಜೈಲಿನ ಹಿಂದಿನ ಗೇಟ್ ನಿಂದ ಅಲ್ಲು ಅರ್ಜುನ್ ರಿಲೀಸ್ ಆಗಿದ್ದಾರೆ.
ಅಲ್ಲು ಅರ್ಜುನ್ ಬಂಧನ ರಾಜಕೀಯ ತಿರುವು ಪಡೆದುಕೊಂಡಿದ್ದು, ತೆಲುಗು ಸ್ಟಾರ್ ಅಲ್ಲು ಅರ್ಜುನ್ಗೆ ಪ್ರಧಾನಿ ಮೋದಿ ಟೀಂ ಸಫೋರ್ಟ್ ಮಾಡಿದೆ. ಅರೆಸ್ಟ್ ಕೇಸ್ನಲ್ಲಿ ಅಲ್ಲು ಅರ್ಜುನ್ ಪರ ಮೋದಿ ಟೀಂ ನಿಂತಿದೆ. ತೆಲಂಗಾಣ ಕಾಂಗ್ರೆಸ್ ಸರ್ಕಾರದ ವಿರುದ್ಧ ಮೋದಿ ಟೀಂ ಆಕ್ರೋಶ ವ್ಯಕ್ತಪಡಿಸುತ್ತಿದೆ. ಅಲ್ಲು ಅರ್ಜುನ್ ಬಂಧಿಸಿದ್ದಕ್ಕೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತೆಲಂಗಾಣದ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ತಮ್ಮ ಎಕ್ಸ್ ಹ್ಯಾಂಡಲ್ನಲ್ಲಿ ನೇರವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ʻಕಾಂಗ್ರೆಸ್ ಸರ್ಕಾರ ನಟರಿಗೆ ಯಾವತ್ತೂ ಗೌರವ ಕೊಡೋದಿಲ್ಲʼ, ಕಾಂಗ್ರೆಸ್ಗೆ ಸಿನಿಮಾ ಉದ್ಯಮದ ಬಗ್ಗೆ ಗೌರವವಿಲ್ಲ, ಇದಕ್ಕೆ ಅಲ್ಲು ಕೇಸ್ ಸಾಕ್ಷಿ ಎಂದು ಗುಡುಗಿದ್ದಾರೆ. ಕಾಂಗ್ರೆಸ್ ನೇತೃತ್ವದ ತೆಲಂಗಾಣ ಸರ್ಕಾರವು ಪ್ರಚಾರದ ಸಾಹಸಗಳಲ್ಲಿ ತೊಡಗಿದೆ. ಥಿಯೇಟರ್ ದುರಂತಕ್ಕೆ ರಾಜ್ಯ, ಸ್ಥಳೀಯ ಆಡಳಿತಗಳೇ ನೇರ ಹೊಣೆಯಾಗುತ್ತದೆ. ಈ ಆರೋಪವನ್ನು ತಿರುಗಿಸಲು ಇಂತಹ ಸ್ಟಂಟ್ಗಳಲ್ಲಿ ತೊಡಗಿದ್ದಾರೆ ಎಂದು ತೆಲಂಗಾಣ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಶ್ವಿನಿ ವೈಷ್ಣವ್ ಅವರು ಟ್ವೀಟ್ ವಾರ್ ಶುರು ಮಾಡಿದ್ದಾರೆ.