ಟಾಲಿವುಡ್ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಗೆ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಕಳೆದ ವರ್ಷ ರಿಲೀಸ್ ಆಗಿದ್ದ ಅವರ ನಟನೆಯ ‘ಪುಷ್ಪ’ ಸಿನಿಮಾ ದೇಶಾದ್ಯಂತ ಭಾರಿ ಸದ್ದನ್ನು ಮಾಡಿತ್ತು. ಈ ವರ್ಷ ತೆರೆ ಕಾಣಲಿರುವ ಅದರ ಮುಂದುವರೆದ ಭಾಗ ‘ಪುಷ್ಪ-2’ ಸಿನಿಮಾ ರಿಲೀಸ್ಗೂ ಮೊದಲೇ 1000 ಕೋಟಿ ಗಳಿಸಿದೆ. ಎಲ್ಲವೂ ಚೆನ್ನಾಗಿದ್ದ ಈ ವೇಳೆಯಲ್ಲಿ ಅಲ್ಲುಅರ್ಜುನ್ ಗೆ ಸಂಕಷ್ಟವೊಂದು ಎದುರಾಗಿದೆ. ಹೌದು… ನಟ ಅಲ್ಲೂ ಅರ್ಜುನ್ ಅವರು ತಮ್ಮ ಹಳೆ ಕೇಸ್ ಇತ್ಯರ್ಥಕ್ಕಾಗಿ ಇಂದು ಆಂಧ್ರದ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
2024ರ ಆರಂಭದಲ್ಲಿ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ ನಡೆದಿತ್ತು. ತೆಲುಗು ಚಿತ್ರರಂಗದ ಹಲವು ನಟ-ನಟಿಯರು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು. ಆದರೆ ನಟ ಅಲ್ಲು ಅರ್ಜುನ್, ಚುನಾವಣಾ ಪ್ರಚಾರದ ನಿಯಮ ಪಾಲಿಸದೆ ವೈಸಿಆರ್ಪಿ ಅಭ್ಯರ್ಥಿ ಶಿಲ್ಪಾ ರವಿಚಂದರ್ ಕಿಶೋರ್ ರೆಡ್ಡಿ ಅವರ ಪರವಾಗಿ ಪ್ರಚಾರ ಮಾಡಿದ್ದರು. ಏಕಾ-ಏಕಿ ನಂದ್ಯಾಲ್ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಅಲ್ಲು ಅರ್ಜುನ್, ಶಿಲ್ಪಾ ರವಿಚಂದರ್ ಕಿಶೋರ್ ರೆಡ್ಡಿ ಅವರ ಮನೆಗೆ ತೆರಳಿದ್ದರು.
ಇದನ್ನೂ ಓದಿ:ದೀಪಾವಳಿ ಹಬ್ಬಕ್ಕೆ ದರ್ಶನ್ ರಿಲೀಸ್ ಆಗ್ತಾರ..?
ಅಲ್ಲು ಅರ್ಜುನ್ ಆಗಮಿಸಿರುವ ವಿಷಯ ತಿಳಿದು ಶಿಲ್ಪಾ ರವಿಚಂದರ್ ಕಿಶೋರ್ ರೆಡ್ಡಿ ಅವರ ಮನೆಯ ಬಳಿ ಭಾರಿ ಸಂಖ್ಯೆಯ ಜನ ಸೇರಿದ್ದರು. ಆ ಸಮಯದಲ್ಲಿ ಅಲ್ಲು ಅರ್ಜುನ್, ಶಿಲ್ಪಾ ರವಿಚಂದರ್ ಕಿಶೋರ್ ರೆಡ್ಡಿಯನ್ನು ಗೆಲ್ಲಿಸುವಂತೆ ಸಂಜ್ಞೆ ಮಾಡಿದ್ದರು. ಶಿಲ್ಪಾ ರವಿಚಂದರ್ ಕಿಶೋರ್ ರೆಡ್ಡಿಯ ಕೈ ಹಿಡಿದು ಎತ್ತಿ ಬೆಂಬಲ ತೋರ್ಪಡಿಸಿದ್ದರು.
ಇದನ್ನೂ ಓದಿ: Jr NTR ಜೊತೆ ಶಾರುಕ್ ನಟಿಸಲಿದ್ದಾರಾ?
ಅಲ್ಲು ಅರ್ಜುನ್, ಶಿಲ್ಪಾ ರವಿಚಂದರ್ ಕಿಶೋರ್ ರೆಡ್ಡಿ ಗೆ ಬೆಂಬಲ ಸೂಚಿಸಿ ಅವರ ಪರ ಪ್ರಚಾರ ಮಾಡಿದ್ದು ಭಾರಿ ಸುದ್ದಿಯಾಗಿತ್ತು. ಆ ಸಮಯದಲ್ಲಿ ಅಲ್ಲು ಅರ್ಜುನ್ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿತ್ತು. ಸೆಕ್ಷನ್ 144, ಪೊಲೀಸ್ ಕಾಯ್ದೆ 30 ಅಡಿಯಲ್ಲಿ ಅಲ್ಲು ಅರ್ಜುನ್ ವಿರುದ್ಧ ಪ್ರಕರಣ ದಾಖಲಾಗಿತ್ತು. ತಮ್ಮ ವಿರುದ್ಧ ದಾಖಲಾದ ಪ್ರಕರಣಗಳನ್ನು ರದ್ದು ಮಾಡುವಂತೆ ಅಲ್ಲು ಅರ್ಜುನ್, ಆಂಧ್ರ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದಾರೆ.
ಅಲ್ಲು ಅರ್ಜುನ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಆಂಧ್ರ ಹೈಕೋರ್ಟ್ ಇಂದು ನಡೆಸಲಿದೆ. ಅಲ್ಲು ಅರ್ಜುನ್ ವಿರುದ್ಧ ಪ್ರಕರಣವನ್ನು ಕೈಬಿಡುವಂತೆ ನ್ಯಾಯಾಲಯ ಸೂಚಿಸಲಿದೆಯೇ ಅಥವಾ ಪ್ರಕರಣದ ವಿಚಾರಣೆ ಮುಂದುವರೆಯಲಿದೆಯೇ ಕಾದು ನೋಡಬೇಕಿದೆ.