ಟಾಲಿವುಡ್ನ ಸೂಪರ್ ಸ್ಟಾರ್, ಪುಷ್ಪ ಸಿನಿಮಾ ಮೂಲಕ ದೇಶದ ಸಿನಿಮಾರಂಗದಲ್ಲಿ ತನ್ನದೇ ಆದ ಚಾಪು ಮೂಡಿಸಿರುವ ನಟ ಅಲ್ಲು ಅರ್ಜುನ್ ಅವರ ಪತ್ನಿ ಸ್ನೇಹ ರೆಡ್ಡಿಯವರು ಎಲ್ಲಿಯವರೆಗೂ ಓದಿದ್ದಾರೆ, ಅವರ ಆಸ್ತಿ ಮೌಲ್ಯವೇನು ಯಾವ ಉದ್ಯಮದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರ ಧರ್ಮಪತ್ನಿ ಸ್ನೇಹಾ ರೆಡ್ಡಿ ಅವರು ಪ್ರಮುಖ ಮಹಿಳಾ ಉದ್ಯಮಿಯಾಗಿದ್ದು. ಅವರ ಅಂದಾಜು ನಿವ್ವಳ ಮೌಲ್ಯದ ಎಷ್ಟು ಎಂದು ನಾವಿಲ್ಲಿ ನೋಡೋಣ.
ಸ್ನೇಹಾ ರೆಡ್ಡಿ ಹೈದರಾಬಾದಿನ ಶ್ರೀಮಂತ ಕುಟುಂಬದಿಂದ ಬಂದವರು. ಅವರ ತಂದೆ, ಕಂಚರ್ಲ ಚಂದ್ರಶೇಖರ್ ರೆಡ್ಡಿ, ಉದ್ಯಮಿ ಮತ್ತು SCIENT ನ ಅಧ್ಯಕ್ಷರು. ಸ್ನೇಹಾ ರೆಡ್ಡಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ ಇದರ ಜೊತೆಗೆ ಯುಎಸ್ನಿಂದ ಕಂಪ್ಯೂಟರ್ ಸೈನ್ಸ್ನಲ್ಲಿ ಸ್ನಾತಕೋತ್ತರ ಪದವಿಧರೆಯಾಗಿದ್ದಾರೆ.
ಸ್ನೇಹಾ ರೆಡ್ಡಿ ವೈವಿಧ್ಯಮಯವಾದ ವ್ಯಾಪಾರ ಉದ್ಯಮಗಳನ್ನು ಹೊಂದಿದ್ದಾರೆ, ಇದರಲ್ಲಿ ಆನ್ಲೈನ್ ಫೋಟೋ ಸ್ಟುಡಿಯೊ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಆದ ಅಭಿರುಚಿಯನ್ನು ಹೊಂದಿದ್ದು, ಅವರ ನಿವ್ವಳ ಮೌಲ್ಯ ₹42 ಕೋಟಿ ಎಂದು ತಿಳಿದುಬಂದಿದೆ.