- ಅಮೆರಿಕದಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್ಗಳ ಬಳಕೆ ನಿಲ್ಲಿಸಬೇಕು
- ಇವಿಎಂಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಇದೆ – ಎಲಾನ್ ಮಸ್ಕ್
- ಇವಿಎಂ ಹ್ಯಾಕ್ ಮಾಡಲು ಆಗುವುದಿಲ್ಲ ಎಂದ ರಾಜೀವ್ ಚಂದ್ರಶೇಖರ್
ಚುನಾವಣೆ ಹೊತ್ತಲ್ಲಿ EVM ದಕ್ಷತೆ ಬಗ್ಗೆ ಆರೋಪ ಮಾಡುವುದು ಸಾಮಾನ್ಯ ಎಂಬಂತಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲು EVM ಕುರಿತಂತೆ ಸಾಕಷ್ಟು ಅಪಸ್ವರ ಕೇಳಿಬಂದಿತ್ತು. ಆದರೆ, ಜಾಗತಿಕ ಎಲೆಕ್ಟ್ರಿಕ್ ಕಾರು ಉತ್ಪಾದನಾ ದೈತ್ಯ ಟೆಸ್ಲಾ ಕಂಪನಿಯ ಸಿಇಒ, ವಿಶ್ವದ ನಂ 1 ಶ್ರೀಮಂತ ಎಲಾನ್ ಮಸ್ಕ್ ಅವರು ಇವಿಎಂಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಇತ್ತ ಎಲಾನ್ ಮಸ್ಕ್ ಅವರು ಭಾರತದ ಇವಿಎಂಗಳ ಬಗ್ಗೆ ನೇರವಾಗಿ ಧ್ವನಿ ಎತ್ತಿಲ್ಲ . ಬದಲಾಗಿ, ಅಮೆರಿಕದ ಚುನಾವಣೆಯಲ್ಲಿ ಬಳಸುವ ಇವಿಎಂಗಳ ಬಗ್ಗೆ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. “ಅಮೆರಿಕದಲ್ಲಿ ನಾವು ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್ಗಳ ಬಳಕೆಯನ್ನು ನಿಲ್ಲಿಸಬೇಕು. ಹ್ಯಾಕರ್ಗಳು ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಬಳಕೆ ಮಾಡುವ ಮೂಲಕ ಇವಿಎಂಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಇದೆ. ಇದು ಸಣ್ಣ ಸಂಗತಿಯಾದರೂ, ದೊಡ್ಡ ಸಮಸ್ಯೆಯಾಗಿದೆ” ಎಂದು ಎಲಾನ್ ಮಸ್ಕ್ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಅಮೆರಿಕದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ , ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಎಲಾನ್ ಮಸ್ಕ್ ಹೇಳಿಕೆಗೆ ಬೆಂಬಲ ಸೂಚಿಸಿದ್ದಾರೆ .
ಪ್ರತಿಕ್ರಿಯೆ ನೀಡಿದ ಬಿಜೆಪಿ ನಾಯಕ
ಎಲಾನ್ ಮಸ್ಕ್ ಮಾಡಿರುವ ಆರೋಪಕ್ಕೆ ಬಿಜೆಪಿ ನಾಯಕ, ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ಅವರು ತಿರುಗೇಟು ನೀಡಿದ್ದಾರೆ. “ಸುರಕ್ಷಿತವಾಗಿರುವ ಡಿಜಿಟಲ್ ಹಾರ್ಡ್ವೇರ್ ಅನ್ನು ಯಾರೂ ತಯಾರಿಸಲು ಆಗುವುದಿಲ್ಲ ರೀತಿಯಲ್ಲಿ ನೀವು ಇವಿಎಂ ಕುರಿತು ಸಾಮಾನ್ಯವಾದ ಹೇಳಿಕೆ ನೀಡಿದ್ದೀರಿ. ಇವಿಎಂಗೆ ಇಂಟರ್ನೆಟ್, ಬ್ಲ್ಯೂಟ್, ವೈಫೈ ಸಂಪರ್ಕ ಕೂಡ ಇಲ್ಲ. ಕಾರ್ಖಾನೆಯಲ್ಲಿ ತಯಾರಾದ ಇವಿಎಂಗಳನ್ನು, ಯಾವುದೇ ಕನೆಕ್ಟಿವಿಲ್ಲದ ಇವಿಎಂಗಳನ್ನು ಹ್ಯಾಕ್ ಮಾಡಲು ಆಗುವುದಿಲ್ಲ. ಭಾರತದಲ್ಲಿ ಇದು ಸಾಬೀತಾಗಿದೆ. ನಾವು ಈ ಕುರಿತು ಒಂದು ಟ್ಯುಟೋರಿಯಲ್ ತೆರೆಯೋಣ” ಎಂದು ಟಾಂಗ ಕೊಟ್ಟಿದ್ದಾರೆ .