ಯುಎಸ್ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಕೋವಿಡ್-19 ಪಾಸಿಟಿವ್ ಇರುವುದು ದೃಢಪಟ್ಟಿದೆ. ರೋಗನಿರ್ಣಯದ ನಂತರ ಲಾಸ್ ವೇಗಾಸ್ಗೆ ಪ್ರಚಾರ ಪ್ರವಾಸವನ್ನು ಕಡಿತಗೊಳಿಸಿದ್ದಾರೆ.
ಜೋ ಬೈಡನ್ಗೆ ಕೊರೊನಾ ಸೋಂಕು ತಗುಲಿದೆ ಎಂದು ಶ್ವೇತ ಭವನ ಮಾಹಿತಿ ನೀಡಿದ್ದು, ಬೈಡನ್ಗೆ ಕೊರೊನಾದ ಸೌಮ್ಯ ಲಕ್ಷಣಗಳು ಕಂಡುಬಂದಿವೆ. ಅವರು ಪ್ರತ್ಯೇಕವಾಗಿರಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಶೀತ, ಕೆಮ್ಮು, ಅಸ್ವಸ್ಥತೆಯಿಂದ ಬೈಡೆನ್ ಬಳಲುತ್ತಿದ್ದಾರೆ. ಕೋವಿಡ್ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ.