ಘಜಿನಿ.. ಸೌತ್ ಸಿನಿದುನಿಯಾದ ಆಲ್ ಟೈಂ ಬ್ಲಾಕ್ ಬಸ್ಟರ್ ಹಿಟ್ ಮೂವಿ. 2005ರಲ್ಲಿ ತಮಿಳಿನಲ್ಲಿ ತೆರೆಕಂಡ ಈ ಸಿನಿಮಾಗೆ ಸ್ಟಾರ್ ಡೈರೆಕ್ಟರ್ ಎ.ಆರ್.ಮುರುಗದಾಸ್ ಆಕ್ಷನ್ ಕಟ್ ಹೇಳಿದ್ರು. ಕೇವಲ 7 ಕೋಟಿಯಲ್ಲಿ ತಯಾರಾದ ಈ ಸಿನಿಮಾ ಆ ಕಾಲದಲ್ಲೇ ಬಾಕ್ಸ್ ಆಫೀಸ್ ಬ್ಯಾಂಗ್ ಮಾಡಿತ್ತು. ಗಲ್ಲಾ ಪೆಟ್ಟಿಗೆಯಲ್ಲಿ ಬರೋಬ್ಬರಿ 50ಕೋಟಿಗೂ ಅಧಿಕ ಮೊತ್ತ ಕಲೆ ಹಾಕುವ ಮೂಲಕ ಎಲ್ಲರ ಹುಬ್ಬೇರಿಸಿತ್ತು. ಸೂರ್ಯ, ಆಸಿನ್, ನಯನತಾರಾ ಹಾಗೂ ಪ್ರದೀಪ್ ರಾವತ್ ಮುಖ್ಯಭೂಮಿಕೆಯಲ್ಲಿದ್ದ ಈ ಸಿನಿಮಾ ತೆಲುಗಿನಲ್ಲೂ ದೊಡ್ಡ ಮಟ್ಟಕ್ಕೆ ಕಮಾಲ್ ಮಾಡಿತ್ತು.
ಅದೇ ತಮಿಳಿನ ಘಜಿನಿ ಸಿನಿಮಾನ 2008ರಲ್ಲಿ ಮತ್ತದೇ ಮುರುಗದಾಸ್ ಹಿಂದಿಯಲ್ಲಿ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ರನ್ನ ಇಟ್ಕೊಂಡು ಡೈರೆಕ್ಟ್ ಮಾಡಿದ್ರು. ಆಮೀರ್ ಅಬ್ಬರಕ್ಕೆ ಬಾಲಿವುಡ್ನಲ್ಲೂ ಸಂಚಲನ ಮೂಡಿಸಿತ್ತು ಘಜಿನಿ. 65 ಕೋಟಿಯಲ್ಲಿ ತಯಾರಾದ ಹಿಂದಿ ಘಜಿನಿ, ಬಾಕ್ಸ್ ಆಫೀಸ್ನಲ್ಲಿ ಲೂಟಿ ಮಾಡಿದ್ದು 250 ಕೋಟಿ ಅಂದ್ರೆ ನೀವು ನಂಬಲೇಬೇಕು.
ಬಾಲಿವುಡ್ನಲ್ಲಿ ಘಜಿನಿ ಸಿನಿಮಾನ ನಿರ್ಮಾಣ ಮಾಡಿದ್ದ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಅವರೇ ಘಜಿನಿ-2 ಸಿನಿಮಾ ಮಾಡೋಕ್ಕೆ ಮುಂದಾಗಿದ್ದಾರೆ ಅನ್ನೋದು ಲೇಟೆಸ್ಟ್ ನ್ಯೂಸ್. ಈ ಕುರಿತು ನಟ ಸೂರ್ಯ ಜೊತೆ ನಿರ್ಮಾಪಕರು ಮಾತುಕತೆ ಕೂಡ ನಡೆಸಿದ್ದಾರಂತೆ. ಆ ಬಗ್ಗೆ ಖಾಸಗಿ ಸಂದರ್ಶನವೊಂದರಲ್ಲಿ ಸ್ವತಃ ಸೂರ್ಯ ಅವರೇ ಬಹಿರಂಗಪಡಿಸಿದ್ದರು. ಅಲ್ಲು ಅರವಿಂದ್ ಜೊತೆ ಮಧು ಮಂಟೇನಾ ಕೂಡ ಕೈ ಜೋಡಿಸಲಿದ್ದು, ಈಗಿನ ಪ್ಯಾನ್ ಇಂಡಿಯಾ ಟ್ರೆಂಡ್ಗೆ ತಕ್ಕನಾಗಿ ಈ ಬಾರಿಯ ಘಜಿನಿ-2ನ ಸೂರ್ಯ ಹಾಗೂ ಆಮೀರ್ಖಾನ್ನ ಇಬ್ಬರನ್ನೂ ಇಟ್ಕೊಂಡು ತೆರೆಗೆ ತರೋಕೆ ಸಜ್ಜಾಗಿದ್ದಾರೆ.
ಆಮೀರ್ ಖಾನ್ ಕೂಡ ಇತ್ತೀಚೆಗೆ ಚಿತ್ರರಂಗದಿಂದ ಕೊಂಚ ದೂರ ಉಳಿದು, ಮಂಕಾಗಿಯೇ ಇದ್ದರು. ಯಾವಾಗ ನಿರ್ಮಾಪಕರು ಘಜಿನಿ ಸೀಕ್ವೆಲ್ ಪ್ರಸ್ತಾಪ ಮಾಡಿದ್ರೋ, ಕೂಡಲೇ ಆಮೀರ್ ಕೂಡ ಐ ಆ್ಯಮ್ ರೆಡಿ ಅಂತ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ಅಲ್ಲಿಗೆ ಸೌತ್ ಘಜಿನಿ ಹಾಗೂ ಬಾಲಿವುಡ್ ಘಜಿನಿ ಒಂದಾಗಿ ಘಜಿನಿ-2 ಆಗೋದು ಪಕ್ಕಾ ಆಗಿದೆ. ಇದು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲಿದ್ದು, ಬಾಹುಬಲಿ, ತ್ರಿಬಲ್ ಆರ್, ಕೆಜಿಎಫ್ ರೀತಿ ಸಿಕ್ಕಾಪಟ್ಟೆ ಸಂಚಲನ ಮೂಡಿಸೋ ಸುದ್ದಿಯಾಗಿ ಹೊರಹೊಮ್ಮಿದೆ.
ಇದನ್ನೂ ಓದಿ: ನಾನು ಯಾರ ಮಾತೂ ಕೇಳಲ್ಲ.. ರಿಹರ್ಸಲ್ ಮಾಡಲ್ಲ.. ಟಾಕ್ಸಿಕ್ 30 ದಿನ ಶೂಟ್ ಮುಗಿದಿದೆ- ಯಶ್