ತಿರುಪತಿಯ ಇಸ್ಕಾನ್ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಇದೇ 27, ಭಾನುವಾರದಂದು ಇಮೇಲ್ ಮೂಲಕ ಇಸ್ಕಾನ್ ದೇವಾಲಯಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ. ಇಮೇಲ್ ನೋಡಿದ ತಕ್ಷಣ ದೇವಸ್ಥಾನದ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದೆ.
ಇದನ್ನು ಓದಿ: ಇಡಿ ದಾಳಿಗೆ ಮುಡಾ ಮಾಜಿ ಆಯುಕ್ತ ಎಸ್ಕೇಪ್..!
ತಿರುಪತಿ ಇಸ್ಕಾನ್ ದೇವಾಲಯಕ್ಕೆ ಬಾಂಬ್ ಬೆದರಿಕೆ ಬಂದಿರುವುದು ಇದೀಗ ಬೆಳಕಿಗೆ ಬಂದಿದೆ. ಈ ಮಧ್ಯೆ ಇಸ್ಕಾನ್ ಸುತ್ತಮುತ್ತಲಿನ ಜನರು ಅಲರ್ಟ್ ಆಗಿದ್ದಾರೆ. ಈಗಾಗಲೇ ತಿರುಪತಿ ಇಸ್ಕಾನ್ ದೇವಾಲಯಕ್ಕೆ ಬಾಂಬ್ ಬೆದರಿಕೆ ಬಂದಿರುವುದನ್ನ ಪೊಲೀಸರಿಗೆ ತಿಳಿಸಿದ್ದು, ಇದರಲ್ಲಿ ಐಸಿಸ್ ಭಯೋತ್ಪಾದಕರು ದೇವಾಲಯವನ್ನು ಸ್ಫೋಟಿಸುವುದಾಗಿ ಇಮೇಲ್ ಕಳುಹಿಸಿರುವವರು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನು ಓದಿ: ಆ ತಪ್ಪು ಮಾಡಬಾರದಿತ್ತು ಅಂತ ಐಶ್ವರ್ಯಾ ಹೇಳಿದ್ದೇಕೆ?
ಮಾಹಿತಿ ಪಡೆದ ತಕ್ಷಣ ತಿರುಪತಿ ಪೊಲೀಸರು ಕ್ರಮ ಕೈಗೊಂಡು ದೇವಸ್ಥಾನಕ್ಕೆ ಆಗಮಿಸಿ ಶೋಧ ನಡೆಸಿದ್ದಾರೆ. ಇನ್ನು ಬಾಂಬ್ ಏನಾದ್ರೂ ಇದ್ಯಾ, ಇಲ್ವಾ ಎಂಬುದರ ಬಗ್ಗೆ ತನಿಖೆ ನಡೆಸಲು ಸ್ಥಳೀಯ ಪೊಲೀಸರು ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳವನ್ನೂ ಕರೆಸಿದ್ದಾರೆ. ಆದರೆ, ದೇವಸ್ಥಾನದ ಆವರಣದಿಂದ ಯಾವುದೇ ಸ್ಫೋಟಕ ಅಥವಾ ಇತರ ಯಾವುದೇ ಆಕ್ಷೇಪಾರ್ಹ ವಸ್ತು ಇದುವರೆಗೆ ಪತ್ತೆಯಾಗಿಲ್ಲ.