ಜಗತ್ತನ್ನು ಕಾಡುತ್ತಿರುವ ಮಹಾಮಾರಿ ಎಚ್ಐವಿ ಏಡ್ಸ್ ಕೊನೆ ಗೊಳ್ಳುವ ಕಾಲ ಬಂದಿದೆ ಎಂದು ಔಷಧ ಕಂಪನಿಯೊಂದು ಹೇಳಿಕೊಂಡಿದೆ. ಇದಕ್ಕಾಗಿ ತಾನು ಲಸಿಕೆ ಸಿದ್ದಪಡಿಸಿರುವುದಾಗಿ ಘೋಷಿಸಿದೆ. ‘ಗಿಲಿ ಯಾಡ್’ ಎಂಬ ಅಮೆರಿಕದ ಫಾರ್ಮಾ ಸುಟಿಕಲ್ ಕಂಪನಿಯು ಲಸಿಕೆ ಸಿದ್ದಪಡಿಸಿದೆ. ಅಧ್ಯಯನದ ವೇಳೆ ವರ್ಷಕ್ಕೆ 2 ಡೋಸ್ ಲಸಿಕೆಗಳನ್ನು ತೆಗೆದುಕೊಂಡ ಮಹಿಳೆಯರು ಏಡ್ ಸೋಂಕು ತಗುಲುವುದರಿಂದ ಬಚಾವಾಗಿದ್ದಾರೆ ಎಂದು ತಿಳಿದು ಬಂದಿದೆ. ಪುರುಷರಲ್ಲೂ ಇದೇ ರೀತಿಯ ಫಲಿತಾಂಶಗಳು ಲಭಿಸಿವೆ ಎಂದು ಕಂಪನಿ ಹೇಳಿಕೊಂಡಿದೆ.
‘ಲೆನಾಕಾಪವಿರ್’ ಹೆಸರಿನ ಔಷಧಿಯನ್ನು ಅಮೆರಿಕ, ಕೆನಡಾ ಹಾಗೂ ಯುರೋಪ್ನಲ್ಲಿ ಎಚ್ಐವಿ ಸೋಂಕಿತರಿಗೆ ‘ಸುನೆಲೆಂಕಾ’ಬ್ರಾಂಡ್ ನೇಮ್ನಲ್ಲಿ ಔಷಧವನ್ನಾಗಿ ನೀಡಲಾಗುತ್ತಿದೆ. ಇದು ಎಚ್ಐವಿ ನಿರೋಧಕವಾಗಿಯೂ ಪ್ರಯೋಗದ ವೇಳೆ ಸಾಬೀತಾಗಿರುವುದರಿಂದ ಇದನ್ನು ಈಗ ಲಸಿಕೆಯ ರೂಪದಲ್ಲೂ ನೀಡಲು ಕಂಪನಿ ಯೋಚಿಸಿದ್ದು, ಇದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮತಿ ನಿರ್ಧರಿಸಿದೆ. ಏಡ್ಸ್ ಸೋಂಕು ಹೆಚ್ಚಿರುವ ಆಫ್ರಿಕಾ, ಆಗೇಯ ಏಷ್ಯಾ ಹಾಗೂ ಕೆರಿಬಿಯನ್ನಲ್ಲಿ ಮೊದಲು ಇದನ್ನು ನೀಡಲು ಉದ್ದೇಶಿಸಿದೆ ಎಂದು ವರದಿಯಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿಶ್ವಸಂಸ್ಥೆಯ ಏಡ್ಸ್ ವಿರೋಧಿ ವಿಭಾಗವಾದ ‘ಯುಎನ್ ಏಡ್’, ‘ಇದುವರೆಗೆ ಲಭ್ಯ ಇರುವ ಏಡ್ಸ್ ತಡೆಗಟ್ಟುವಿಕೆಯ ಎಲ್ಲ ವಿಧಾನಗಳಲ್ಲಿ ಇದು ಅತ್ಯುತ್ತಮ. ವಿಧಾನವಾಗಿದೆ’ ಎಂದಿದೆ.