ವಿಶ್ವದ ಅತೀ ದುಬಾರಿ ಮದುವೆಗೆ ಹೋಗಿದ್ದ ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್ ದಂಪತಿಗೆ ಅಂಬಾನಿ ಫ್ಯಾಮಿಲಿ ಬರೊಬ್ಬರಿ 2 ಕೋಟಿ ರುಪಾಯಿ ಮೊತ್ತದ ವಾಚ್ ಗಿಫ್ಟ್ ನೀಡಿದ್ದಾರೆ.
ಸಾಮಾನ್ಯವಾಗಿ ಮದುವೆ ಸಮಾರಂಭ ಅಂದ್ರೆ ನವ ವಧು-ವರರಿಗೆ ಅತಿಥಿಗಳು ಉಡುಗೊರೆ ನೀಡಿ ಶುಭ ಕೋರುತ್ತಾರೆ. ಆದರೆ ಮುಖೇಶ್ ಅಂಬಾನಿ ತಮ್ಮ ಮಗನ ಮದುವೆಗೆ ಬಂದ ಅತಿಥಿಗಳಿಗೆ ರಿಟರ್ನ್ ಗಿಫ್ಟ್ ನೀಡಿ ಹುಬ್ಬೇರಿಸುವಂತೆ ಮಾಡಿದ್ದಾರೆ. ಅದು ಸಾವಿರ ಅಥವಾ ಲಕ್ಷ ರೂಪಾಯಿ ಉಡುಗೊರೆ ಅಲ್ಲ. ಕೋಟಿ ಕೋಟಿ ರೂಪಾಯಿ ಉಡುಗೊರೆಗಳು. ನಟ ಯಶ್ ಸೇರಿದಂತೆ ಹಲವರಿಗೆ 2 ಕೋಟಿ ರೂ. ಮೌಲ್ಯದ ಆಡೆಮಾರ್ಸ್ ಪಿಗೆಟ್ ವಾಚ್ಗಳು ಉಡುಗೊರೆಯಾಗಿ ಸಿಕ್ಕಿದೆ ಎನ್ನಲಾಗ್ತಿದೆ.
ಸ್ಯಾಂಡಲ್ವುಡ್ನಿಂದ ಯಶ್ ದಂಪತಿಗೆ ಮಾತ್ರ ಆಹ್ವಾನ ನೀಡಲಾಗಿತ್ತು ಎನ್ನಲಾಗ್ತಿದೆ. ಇನ್ನು ನಟ ಯಶ್ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ಕಾಣಿಸಿಕೊಂಡ ಫೋಟೊ, ವೀಡಿಯೋಗಳು ಸಖತ್ ವೈರಲ್ ಆಗುತ್ತಿದೆ. ಹೊಸ ಹೇರ್ಸ್ಟೈಲ್ನಲ್ಲಿ ರಾಕಿಂಗ್ ಸ್ಟಾರ್ ಫುಲ್ ಮಿಂಚಿದ್ದಾರೆ. ಇದು ‘ಟಾಕ್ಸಿಕ್’ ಚಿತ್ರಕ್ಕಾಗಿ ಮಾಡಿಕೊಂಡಿರುವ ಹೇರ್ ಸ್ಟೈಲ್ ಎನ್ನಲಾಗ್ತಿದೆ. ಯಶ್ ಅವತಾರ ಕಂಡು ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ.
ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಮಗನ ಮದುವೆ ಅದ್ಧೂರಿಯಾಗಿ ನೆರವೇರಿದೆ. ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ 3 ದಿನಗಳ ಕಾಲ ವಿವಾಹ ಮಹೋತ್ಸವ ಆಯೋಜನೆಗೊಂಡಿದೆ. ದೇಶ ವಿದೇಶದ ತಾರೆಯರು, ಉದ್ಯಮಿಗಳು ಈ ಅದ್ಧೂರಿ ಕಲ್ಯಾಣಕ್ಕೆ ಹಾಜರಾಗಿ ವಧು-ವರರನ್ನು ಹಾರೈಸುತ್ತಿದ್ದಾರೆ. ನಟ ಯಶ್-ರಾಧಿಕಾ ಪಂಡಿತ್ ಮದುವೆಯಲ್ಲಿ ಭಾಗಿಯಾಗಿರುವ ಫೊಟೋಸ್, ವಿಡಿಯೋಗಳು ಸಖತ್ ವೈರಲ್ ಆಗಿವೆ