- ಆನಂತ್ ಮತ್ತು ರಾಧಿಕಾ ವಿವಾಹ ಜುಲೈ 12 ರಂದು ನಡೆಯಲಿದೆ
- ಆನಂತ್ ಮತ್ತು ರಾಧಿಕಾ ಮದುವೆ ಆಮಂತ್ರಣ.. ಫುಲ್ ವೈರಲ್
ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಸಮಾರಂಭ ಜೋರಾಗಿ ನಡೆಯುತ್ತಿದೆ. ಇನ್ನು ಜುಲೈ 12 ರಂದು ಅಂಬಾನಿ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ತಯಾರಿ ನಡೆಸುತ್ತಿದ್ದಾರೆ.
ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹಕ್ಕೆ ದಿನಾಂಕ ನಿಗದಿಯಾಗಿದೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿರುವ ಜಿಯೋ ವರ್ಲ್ಡ್ ಕನ್ಷೆಷನ್ ಸೆಂಟರ್ನಲ್ಲಿ ವಿವಾಹ ಸಮಾರಂಭ ಜರುಗಲಿದೆ. ಹಿಂದೂ ವೈದಿಕ ಸಂಪ್ರದಾಯದ ಪ್ರಕಾರ ನಡೆಯುವ ವಿವಾಹ ಸಮಾರಂಭ ಇದಾಗಿದೆ.
ಜುಲೈ 12 ರಂದು ಶುಭ ವಿವಾಹ ಸಮಾರಂಭ ನಡೆಯಲಿದ್ದು, 13 ರಂದು ಶುಭ ಆಶೀರ್ವಾದ ಸಮಾರಂಭ ಜರುಗಲಿದೆ. ಜುಲೈ 14 ರಂದು ವಿವಾಹ ಆರತಕ್ಷತೆಯ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಮೊದಲ ದಿನ ಭಾರತದ ಸಂಪ್ರದಾಯಿಕ ಡ್ರೆಸ್ ಕೋಡ್ನಲ್ಲಿ ಬರುವಂತೆ ಅತಿಥಿಗಳಿಗೆ ಆಹ್ವಾನ ನೀಡಲಾಗಿದೆ. 2 ನೇ ದಿನ ಇಂಡಿಯನ್ ಫಾರ್ಮಾಲ್ ಡ್ರೆಸ್ನಲ್ಲಿ ಬರುವಂತೆ ಎಲ್ಲಾ ಅತಿಥಿಗಳಿಗೆ ಆಹ್ವಾನ ಕೋರಲಾಗಿದೆ.
ಆನಂತ್ ಮತ್ತು ರಾಧಿಕಾ ಮದುವೆ ಜುಲೈನಲ್ಲಿ ನಡೆಯಲಿರುವ ಆಮಂತ್ರಣ ಪತ್ರಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಂಪು ಬಣ್ಣದ ಪಟ್ಟಿಗೆಯಲ್ಲಿ ಬಾಗಿಲು ತೆರೆಯುತ್ತಿದ್ದಂತೆ ಮುಭಾಗದಲ್ಲಿ ಬೆಳ್ಳಿಯ ದೇವಾಲಯವು ಗೋಚರಿಸುತ್ತದೆ. ಈ ದೇವಾಲಯ ತೆಲಂಗಾಣದ ಕರೀಂನಗರದ ಬೆಳ್ಳಿಯ ಫಿಲಿಗ್ರೀಯ ಕಲಾಕೃತಿಯಾಗಿದೆ. ಈ ದೇವಾಲಯವನ್ನು ಹೊರ ತೆಗೆದಾಗ ಅದರ ಕೆಲಗಿನ ಪೆಟ್ಟಿಗೆಯು ತೆರೆಯುತ್ತದೆ. ಮದುವೆ ಕಾರ್ಡ್ ಮತ್ತು ಅತಿಥಿಗಳ ಉಡುಗೊರೆಗಳು ಅದರಲ್ಲಿವೆ.
ಮದುವೆಯ ಆಮಂತ್ರಣ ಪತ್ರಿಕೆಯ ಜೊತೆಗೆ ಅತಿಥಿಗಳು ಅನೇಕ ಉಡುಗೊರೆಗಳನ್ನು ಪಡೆದಿದ್ದಾರೆ. ಮದುವೆ ಕಾರ್ಡ್ ಒಂದು ಬುಕ್ ರೀತಿಯಿದ್ದು, ಕೈ ಯಿಂದ ಬರೆಯಲಾದ ಕೆಲವು ಬರಹಗಳನ್ನ ಒಳಗೊಂಡಿವೆ. ಇದಲ್ಲದೇ ಪ್ರತ್ಯೇಕ ಬೆಳ್ಳಿಯ ಪೆಟ್ಟಿಗೆಯೊಂದಿದೆ. ಅದರೊಳಗೆ ಬಟ್ಟೆಯ ತುಂಡಿನ ಮೇಲೆ A & R ಎಂದು ಬರೆಯಲಾಗಿದೆ. ಬೆಳ್ಳಿ ಪೆಟ್ಟಿಗೆಯಲ್ಲಿ 5 ದೇವರ ವಿಗ್ರಹಗಳು, ಕೈಯಿಂದ ಮಾಡಿದ ಚುನರಿ ಮತ್ತು ಸಿಹಿತಿಂಡಿಗಳನ್ನು ಇಡಲಾಗಿದೆ. ಈ ಮದುವೆಯ ಆಮಂತ್ರಣವನ್ನು ಭಾರತೀಯ ಸಂಪ್ರದಾಯದ ಪ್ರಕಾರ ಅಲಂಕರಿಸಲಾಗಿದೆ.