ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗು ರಾಧಿಕ ಮರ್ಚೆಂಟ್ ಪೂರ್ವ ವಿವಾಹದ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಸದ್ಯ ಜುಲೈ 3ರಂದು ಅನಂತ್ ಅಂಬಾನಿ ಮತ್ತು ರಾಧಿಕ ಮರ್ಚೆಂಟ್ ಅವರ ಮಾಮೇರು ಕಾರ್ಯಕ್ರಮ ನಡೆದಿದ್ದು ಈ ಮಾಮೇರು ಕಾರ್ಯಕ್ರಮ ವರನ ತಾಯಿಯ ಕುಟುಂಬದ ಸಾಂಪ್ರದಾಯಿಕ ಆಚರಣೆ ಇದಾಗಿದೆ.
ಈ ಮಾಮೇರು ಕಾರ್ಯಕ್ರಮದಲ್ಲಿ ರಾಧಿಕ ಮರ್ಚೆಂಟ್ ಅವರು ದುರ್ಗಾ ಶ್ಲೋಕವಿರುವ ಬಲು ದುಬಾರಿಯ ಲೆಹೆಂಗಾ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ನೀತಾ ಅಂಬಾನಿ ಅವರ ತವರು ಕುಟುಂಬದವರು ಉಡುಗೊರೆ ಮತ್ತು ಕೊಡುಗಳೊಂದಿಗೆ ದಂಪತಿಗಳನ್ನು ಆಶೀರ್ವದಿಸಿದ್ದಾರೆ ಮತ್ತು ಈ ಮಾಮೇರು ಕಾರ್ಯಕ್ರಮದಲ್ಲಿ ರಾಧಿಕ ಮರ್ಚೆಂಟ್ ಸಹ ತನ್ನ ತಾಯಿಯ ಆಭರಣಗಳನ್ನು ಧರಿಸಿದ್ದರು. ಮನೀಷ್ ಮಲ್ಹೋತ್ರ ಅವರು ತಯಾರಿಸಿದ ಕಸ್ಟಮ್ ಮೇಡ್ ಲೆಹೆಂಗಾ ಇದಾಗಿತ್ತು.