- ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದ ಅಮಿತ್ ಶಾ
- ವೈದಿಕ ಸ್ತೋತ್ರ ಪಠಣದ ನಡುವೆ ಅಮಿತ್ ಶಾಗೆ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು
ಲೋಕಸಭಾ ಚುನಾವಣೆಗೆ ಕೊನೆಯ ಹಂತದ ಪ್ರಚಾರ ಮುಗಿದ ನಂತರ ಗೃಹ ಸಚಿವ ಅಮಿತ್ ಶಾ ಇಂದು ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಅಮಿತ್ ಶಾ ಕುಟುಂಬ ಸಮೇತರಾಗಿ ಆಗಮಿಸಿದ್ದರು, ಮೊದಲು ರೇಣುಗುಂಟ ವಿಮಾನ ನಿಲ್ದಾಣಕ್ಕೆ ಬಂದಿಳಿದರು ರಸ್ತೆಯ ಮೂಲಕ ತಿರುಪತಿ ತಲುಪಿದರು. ಪ್ರಧಾನ ಅರ್ಚಕರು ವೈದಿಕ ಸ್ತೋತ್ರ ಪಠಣದ ನಡುವೆ ಅವರಿಗೆ ಸಾಂಪ್ರದಾಯಿಕ ಸ್ವಾಗತವನ್ನು ನೀಡಲಾಯಿತು.
ದೇವಸ್ಥಾನಕ್ಕೆ ಬೆಳಗ್ಗೆ 8 ಗಂಟೆ ಸುಮಾರಿಗೆ ಅಮಿತ್ ಶಾ ದಂಪತಿ ಬಂದು ಅರ್ಧ ಗಂಟೆ ಕಾಲ ವಿಸೇಷ ಪೂಜಾ ಕಾರ್ಯಗಳನ್ನು ನೆರವೇರಿಸಿದ್ದಾರೆ. ದೇಗುಲದ ಅರ್ಚಕರು ಅಮಿತ್ ಶಾ ದಂಪತಿಯನನು ಆಶೀರ್ವಾದಿಸಿ, ಡೈರಿ ಆಯುರ್ವೇದ ಉತ್ಪನ್ನಗಳು, ಇತರೆ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.