ಆಂಧ್ರಪ್ರದೇಶದಲ್ಲಿ ನಡೆದ ಅಮರಾವತಿ ಡ್ರೋನ್ ಸಮ್ಮೇಳನ 2024 ರಲ್ಲಿ ಪ್ರದರ್ಶನಗೊಂಡ ಡ್ರೋನ್ ಶೋ ಬರೋಬ್ಬರಿ ಐದು ಗಿನ್ನೀಸ್ ವಿಶ್ವ ದಾಖಲೆಗಳನ್ನು ನಿರ್ಮಿಸಿದೆ. ಕೃಷ್ಣಾ ನದಿ ತಟದ ಪೂರ್ಣಿಮಾ ಘಾಟ್ನಲ್ಲಿ ನಡೆದ ಶೋನಲ್ಲಿ ಭಾರತದ ಧ್ವಜ, ಬುದ್ಧ, ವಿಮಾನ ಹೀಗೆ ಹಲವು ಮಾದರಿಗಳನ್ನು ಡೋನ್ಗಳ ಮೂಲಕ ಸೃಷ್ಟಿಸಲಾಗಿತ್ತು.
ಈ ಡೋನ್ ಪ್ರದರ್ಶನದಲ್ಲಿ, ‘ಅತಿದೊಡ್ಡ ಸೌರ ಮಂಡಲ, ಅತಿ ದೊಡ್ಡ ಭಾರತದ ಪ್ರಮುಖ ಮೈಲಿಗಲ್ಲುಗಳ ಪ್ರದರ್ಶನ, ಅತಿದೊಡ್ಡ ವಿಮಾನದ ವಿನ್ಯಾಸ, ಅತಿದೊಡ್ಡ ಧ್ವಜ ಪ್ರದರ್ಶನ ಮತ್ತು ಅತಿದೊಡ್ಡ ವೈಮಾನಿಕ ಲಾಂಛನ ಪ್ರದರ್ಶನದ ಮೂಲಕ ಗಿನ್ನೀಸ್ ವಿಶ್ವ ದಾಖಲೆ ನಿರ್ಮಿಸಿತು.
ಸಾವಿರಾರು ಜನರು ಕಣ್ಣರಳಿಸಿ ನಿಂತು ಡೋನ್ ಶೋ ಕಣ್ಣುಂಬಿಕೊಂಡರು. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡೋನ್ ಪ್ರದರ್ಶನ ವೀಕ್ಷಿಸಿದರು. ಬಳಿಕ ಮಾತನಾಡಿದ ಅವರು, ಅಮರಾವತಿಯನ್ನು ಡೋನ್ಗಳ ರಾಜಧಾನಿ ಮತ್ತು ಇಡೀ ಆಂಧ್ರಪ್ರದೇಶವನ್ನು ನವೀನ ಡೋನ್ಗಳ ಕೇಂದ್ರವನ್ನಾಗಿಸುವ ಗುರಿಯಿದೆ ಎಂದರು.