ರಾಮೋಜಿ ಫಿಲ್ಮ್ ಸಿಟಿಯ ಮುಖ್ಯಸ್ಥ ರಾಮೋಜಿ ರಾವ್ ನಿಧನರಾಗಿದ್ದಾರೆ. ಅಧಿಕ ರಕ್ತದೊತ್ತಡ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗಿನ ಜಾವ 4.30ಕ್ಕೆ ಹೈದರಾಬಾದ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ರಾಮೋಜಿ ರಾವ್ ನಿಧನಕ್ಕೆ ರಾಜಕೀಯ ನಾಯಜರು ಸೇರಿದಂತೆ ಚಿತ್ರರಂಗದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಮೋಜಿ ರಾವ್ ಅವರ ಪೂರ್ತಿ ಹೆಸರು ಚೆರಕುರಿ ರಾಮೋಜಿ ರಾವ್. 16 ನವೆಂಬರ್ 1936ರಲ್ಲಿ ಆಂಧ್ರಪ್ರದೇಶ ಕೃಷ್ಣಾ ಜಿಲ್ಲೆಯ ಪೆದಪುರಿಯಲ್ಲಿ ಜನಿಸಿದರು. ಕೃಷಿ ಕುಟುಂಬದಿಂದ ಬಂದ ಇವರು ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮೆರೆದರು. ಭಾರತೀಯ ಚಿತ್ರರಂಗಕ್ಕೆ ಇವರ ಕೊಡುಗೆ ಅಪಾರ.