- ಆಂಧ್ರದಲ್ಲಿ ಈಗ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಬಿಸಿ ಜೋರಾಗಿದೆ.
- ಸ್ಟಾರ್ ನಟರು ಅಭ್ಯರ್ಥಿಗಳ ಪರ ಭರ್ಜರಿ ಚುನಾವಣೆ ಪ್ರಚಾರ ಮಾಡಿ ಮತಯಾಚನೆ
- ನಿನ್ನೆ ನಡೆದ ಭರ್ಜರಿ ರೋಡ್ ಶೋನಲ್ಲಿ ಪವನ್ ಪರ ಚಿರು ಪುತ್ರ ರಾಮ್ಚರಣ್ ಮತಯಾಚಿಸಿದರು.
- ನಂದ್ಯಾಲ ಕ್ಷೇತ್ರದಲ್ಲಿ ಅಲ್ಲು ಅರ್ಜುನ್ ವೈಸಿಪಿ ಅಭ್ಯರ್ಥಿಯ ಪರ ಮತಯಾಚಿಸಿದರು.
ಆಂಧ್ರದಲ್ಲಿ ಈಗ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಬಿಸಿ ಜೋರಾಗಿದೆ. ನಾಳೆ ಆಂಧ್ರದಲ್ಲಿ ಮತದಾನ ನಡೆಯಲಿದೆ. ತೆಲುಗಿನ ಸ್ಟಾರ್ಸ್ ಚುನಾವಣಾ ಕಣದಲ್ಲಿ ಇರುವುದರಿಂದ ಎಲೆಕ್ಷನ್ ಭರಾಟೆ ಜೋರಾಗಿದೆ. ಈಗ ಸ್ಟಾರ್ ನಟರು ಅಭ್ಯರ್ಥಿಗಳ ಪರ ಭರ್ಜರಿ ಚುನಾವಣೆ ಪ್ರಚಾರ ಮಾಡಿ ಮತಯಾಚನೆ ಮಾಡಿದ್ದಾರೆ.
ಕೊನೆ ಕ್ಷಣದಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ರಾಮ್ಚರಣ್ ಚುನಾವಣೆ ಅಖಾಡಕ್ಕೆ ಎಂಟ್ರಿಯಾಗಿದ್ದರಿಂದ ಚುನಾವಣೆ ಪ್ರಚಾರ ಮತ್ತಷ್ಟು ರಂಗೇರಿತ್ತು.. ಜನಸೇನಾ ಪಕ್ಷದಿಂದ ಪವರ್ ಸ್ಟಾರ್ ಪವನ್ ಕಲ್ಯಾಣ್ ಈ ಬಾರಿ ಭರ್ಜರಿಯಾಗಿ ಜಯಗಳಿಸುವ ಉತ್ಸಾಹದಲ್ಲಿದ್ದಾರೆ.
ನಿನ್ನೆ ನಡೆದ ಭರ್ಜರಿ ರೋಡ್ ಶೋನಲ್ಲಿ ಪವನ್ ಪರ ಚಿರು ಪುತ್ರ ರಾಮ್ಚರಣ್ ಮತಯಾಚಿಸಿದರು. ಜೊತೆಗೆ ಮೆಗಾ ಫ್ಯಾಮಿಲಿ ಕುಡಿ ಅಲ್ಲು ಅರ್ಜುನ್ ಕೂಡ ಚುನಾವಣೆ ಪ್ರಚಾರಕ್ಕೆ ಎಂಟ್ರಿಯಾಗಿದ್ದಾರೆ. ಆದರೆ ಅಲ್ಲು ಮಾವನ ಪರ ಪ್ರಚಾರ ನಡೆಸಿಲ್ಲ. ಬದಲಾಗಿ ಎದುರಾಳಿ ಪಕ್ಷದ ಅಭ್ಯರ್ಥಿ ಪರ ಸ್ಟೈಲಿಶ್ ಸ್ಟಾರ್ ಮತಯಾಚನೆ ಮಾಡಿದ್ದಾರೆ. ಈ ವಿಚಾರ ಈಗ ಟಾಲಿವುಡ್ನಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಪವನ್ ಕಲ್ಯಾಣ್ ಅಭಿಮಾನಿಗಳು ಐಕಾನ್ ಸ್ಟಾರ್ ಅಲ್ಲು ಅರ್ಜುನ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಆಂಧ್ರ ಚುನಾವಣಾ ಪ್ರಚಾರದ ಕೊನೆಯ ದಿನದಂದು ಅಲ್ಲು ಅರ್ಜುನ್ , ಸ್ನೇಹಿತ ಹಾಗೂ ವೈಸಿಪಿ ಶಾಸಕ ಶಿಲ್ಪಾ ರವಿಚಂದ್ರ ಕಿಶೋರ್ ರೆಡ್ಡಿ ಅವರ ಪರ ಪ್ರಚಾರ ಮಾಡಿದ್ದಾರೆ.
ನಂದ್ಯಾಲ ಕ್ಷೇತ್ರದಲ್ಲಿ ಅಲ್ಲು ಅರ್ಜುನ್ ವೈಸಿಪಿ ಅಭ್ಯರ್ಥಿಯ ಪರ ಮತಯಾಚಿಸಿದರು. ಪಿಠಾಪುರದಲ್ಲಿ ಪವನ್ ಕಲ್ಯಾಣ್ ಪರ ರಾಮ್ಚರಣ್ ಪ್ರಚಾರದಲ್ಲಿ ಭಾಗಿ ಆಗಿದ್ದ ಟೈಮ್ ನಲ್ಲೇ ಅಲ್ಲು ಅರ್ಜುನ್ ಎದುರಾಳಿ ಪಕ್ಷದ ಅಭ್ಯರ್ಥಿ ಪರ ನಿಂತಿದ್ದು, ಮೆಗಾ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಮೆಗಾ ಫ್ಯಾಮಿಲಿ ಹಾಗೂ ಅಲ್ಲು ಫ್ಯಾಮಿಲಿ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಮಾತುಗಳು ಆಗಾಗ ಕೇಳಿಬರುತ್ತದೆ. ಸದ್ಯ ಈ ಘಟನೆಯಿಂದ ಮತ್ತೆ ಆ ಚರ್ಚೆ ಟಾಲಿವುಡ್ ನಲ್ಲಿ ಶುರುವಾಗಿದೆ.