ಆಂಧ್ರ ಪ್ರದೇಶದಲ್ಲಿ ಅರ್ಹ ಮಹಿಳೆಯರಿಗೆ ಉಚಿತ ಅಡುಗೆ ಅನಿಲ ಸಿಲಿಂಡರ್ ವಿತರಿಸುವ ‘ದೀಪಂ’ ಯೋಜನೆಗೆ ದೀಪಾವಳಿಯಂದು ಚಾಲನೆ ನೀಡಲಾಗುತ್ತದೆ. ಚುನಾವಣೆ ಸಂದರ್ಭದಲ್ಲಿ ಟಿಡಿಪಿ ನೀಡಿದ್ದ ಆರು ಪ್ರಮುಖ ಭರವಸೆಗಳಲ್ಲಿ, ವರ್ಷಕ್ಕೆ ಮೂರು ಅಡುಗೆ ಅನಿಲ ಸಿಲಿಂಡರ್ಗಳನ್ನು ಉಚಿತವಾಗಿ ವಿತರಿಸುವುದು ಪ್ರಮುಖವಾದುದು.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಅಮರಾವತಿಯ ಸಿಬ್ಬಂದಿ ಸಚಿವಾಲಯದಲ್ಲಿ ಸೋಮವಾರ ಸಭೆ ನಡೆಸಿ, ಯೋಜನೆ ಚಾಲನೆಗೆ ಸಂಬಂಧಿಸಿದ ಸಿದ್ಧತೆಯನ್ನು ಪರಿಶೀಲಿಸಿದರು. ನಾಗರಿಕ ಪೂರೈಕೆ ಸಚಿವ ಮತ್ತು ಅಧಿಕಾರಿಗಳು ಹಾಗೂ ಭಾರತೀಯ ಅನಿಲ ನಿಗಮ, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ನಿಗಮದ ಪ್ರತಿನಿಧಿಗಳೊಂದಿಗೆ ಚರ್ಚಿಸಿದರು.
ಇದನ್ನೂ ಓದಿ: ಸಿಲಿಂಡರ್ ಸ್ಫೋಟ: ಆರು ಮಂದಿ ಸಾವು