- ಇಂದು ದೇಶದಲ್ಲಿ ನಾಲ್ಕನೇ ಹಂತದ ಲೋಕಸಭೆ ಚುನಾವಣೆ
- ತೆಲುಗಿನ ಸ್ಟಾರ್ ನಟರು ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ.
- ತಮ್ಮ ಅಭಿಮಾನಿಗಳಿಗೂ ಕೂಡ ಮತದಾನ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಇಂದು ದೇಶದಲ್ಲಿ ನಾಲ್ಕನೇ ಹಂತದ ಲೋಕಸಭೆ ಚುನಾವಣೆ ನಡೆಯುತ್ತಿದೆ. ಇದರ ಜೊತೆಗೆ ಆಂಧ್ರದಲ್ಲಿ ವಿಧಾನಸಭೆ ಚುನಾವಣೆ ಕೂಡ ನಡೆಯುತ್ತಿದೆ. ತೆಲುಗಿನ ಸ್ಟಾರ್ ನಟರು ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ. ಜೊತೆಗೆ ತಮ್ಮ ಅಭಿಮಾನಿಗಳಿಗೂ ಕೂಡ ಮತದಾನ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಜೂನಿಯರ್ ಎನ್ಟಿಆರ್ ವೋಟ್ ಹಾಕಿದ ಬಳಿಕ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಜೊತೆಗೆ ವೋಟ್ ಮಾಡುವಂತೆ ಅಭಿಮಾನಿಗಳ ಬಳಿ ಮನವಿ ಮಾಡಿದ್ದಾರೆ.
ಅಲ್ಲು ಅರ್ಜುನ್ ಕೂಡ ಸರತಿ ಸಾಲಿನಲ್ಲಿ ಜನಸಾಮಾನ್ಯರಂತೆ ನಿಂತು ಮತದಾನ ಮಾಡಿದ್ದನ್ನು ನೋಡಿ ಅಲ್ಲಿದ್ದವರಿಗೆ ಅಚ್ಚರಿ ಆಗಿದೆ.
ರಾಜಮೌಳಿ ಹಾಗೂ ಅವರ ಪತ್ನಿ ರಮಾ ಒಟ್ಟಾಗಿ ಬಂದು ಮತದಾನ ಮಾಡಿದ್ದಾರೆ. ಮತದಾನ ಮಾಡಿದ ನಂತರದ ಫೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಪ್ರಭಾಸ್ ಕೂಡ ಮತದಾನ ಮಾಡಲು ಮತಗಟ್ಟೆಗೆ ಆಗಮಿಸಿದ್ದರು. ಅವರನ್ನ ನೋಡಿ ಅನೇಕರಿಗೆ ಗುರುತೇ ಸಿಗದಂತೆ ಆಗಿದೆ. ಅಷ್ಟರಮಟ್ಟಿಗೆ ಪ್ರಭಾಸ್ ಬದಲಾಗಿದ್ದಾರೆ.
ಮೆಗಾ ಸ್ಟಾರ್ ಚಿರಂಜೀವಿ ಕೂಡ ವೋಟ್ ಮಾಡಿದ್ದಾರೆ. ಚುರು ಐಷಾರಾಮಿ ಕಾರಲ್ಲಿ ಮತದಾನ ಕೇಂದ್ರಕ್ಕೆ ಬಂದಿದ್ದರು.
ಜನಸೇನಾ ಮುಖ್ಯಸ್ಥ, ನಟ ಪವನ್ ಕಲ್ಯಾಣ್ ಕೂಡ ತಮ್ಮ ವೋಟ್ನ ಚಲಾಯಿಸಿದ್ದಾರೆ. ಅವರು ಕೂಡ ಈ ಬಾರಿ ಎಲೆಕ್ಷನ್ನಲ್ಲಿ ಸ್ಪರ್ಧಿಸಿದ್ದಾರೆ..