- ಅಂಜಲಿ ಕೊಲೆ ಹಂತಕ ಗಿರೀಶ್ ಕಿಮ್ಸ್ ಆಸ್ಪತ್ರೆಗೆ ದಾಖಲು
- ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಭೇಟಿ
ಹುಬ್ಬಳ್ಳಿ: ಅಂಜಲಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಹಂತಕ ಗಿರೀಶ ಸಾವಂತ್ ಆರೋಪಿಯನ್ನು ನಿನ್ನೆ ರಾತ್ರಿ ಪೊಲೀಸರು ಅರೆಸ್ಟ್ ಮಾಡಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಇಂದು ಬೆಳಗ್ಗೆ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಭೇಟಿ ನೀಡಿದ್ದಾರೆ.
ಅಂಜಲಿ ಕೊಲೆ ಮಾಡಿದ ಗಿರೀಶ ಹುಬ್ಬಳ್ಳಿ ಹೊಸ ಬಸ್ ನಿಲ್ದಾಣದ ಮೂಲಕ ದಾವಣಗೆರೆ, ಹಾವೇರಿ, ಮೈಸೂರಿಗೆ ಹೋಗಿದ್ದ, ನಂತರ ಹಂತಕ ಗಿರೀಶ ವಿಶ್ವಮಾನ ರೈಲು ಮೂಲಕ ಮಹಾರಾಷ್ಟ್ರ ಮತ್ತು ಗೋವಾ ಕಡೆ ಹೋಗುತ್ತಿದ್ದ ವೇಳೆಯಲ್ಲಿ, ರೈಲಿನಲ್ಲಿ ಕಳ್ಳತನ ಮಾಡುತ್ತಿರುವ ವೇಳೆ ಪ್ರಯಾಣಿಕರು ಆತನನ್ನು ಥಳಸಿದ್ದರು. ನಂತರ ಹಂತಕ ಗಿರೀಶ ರೈಲಿನಿಂದ ಹೊರಗೆ ಹಾರಿದ್ದು, ಇದರಿಂದ ಆತ ಗಾಯಗೊಂಡಿದ್ದಾನೆ. ರೈಲ್ವೆ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿ, ಸ್ಥಳೀಯ ದಾವಣಗೆರೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಆತ ಯಾರು ಎಂದು ಗುರುತಿಸುವಾಗ ಆರೋಪಿ ಎಂದು ತಿಳಿದು ಬಂದಾಗ ಹುಬ್ಬಳ್ಳಿ ಧಾರವಾಡ ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಆತನನ್ನು ನಿನ್ನೆ ರಾತ್ರಿ ಪೊಲೀಸರು ವಶಕ್ಕೆ ಪಡೆದು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಂದು ಬೆಳಗ್ಗೆ ಪೊಲೀಸ್ ಕಮೀಷನರ್ ರೇಣುಕಾ ಸುಮಾರು ಭೇಟಿ ವಿಚಾರಣೆ ಮಾಡಿದ್ದಾರೆ.