ಗುವಾಹಟಿ : ಮಳೆಯಿಂದ ಉಂಟಾದ ಭಾರೀ ಭೂಕುಸಿತದಿಂದ ಅರುಣಾಚಲ ಪ್ರದೇಶದ ಹೆದ್ದಾರಿಯ ಪ್ರಮುಖ ಭಾಗ ಕೊಚ್ಚಿ ಹೋಗಿದ್ದು, ಚೀನಾ ಗಡಿಗೆ ಹೊಂದಿಕೊಂಡಿರುವ ಜಿಲ್ಲೆ ದಿಬಾಂಗ್ ಕಣಿವೆಯೊಂದಿಗೆ ರಸ್ತೆ ಸಂಪರ್ಕವೇ ಇಲ್ಲದಂತಾಗಿದೆ.
ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನಿನ್ನೆ ರಾಷ್ಟ್ರೀಯ ಹೆದ್ದಾರಿ ಹುನ್ಲಿ ಮತ್ತು ಅನಿನಿ ನಡುವೆ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಸ್ತೆಯ ಮೂಲಕ ಪ್ರವಾಹ ಹರಿಯುತ್ತಿರುವ ಹಲವು ವೀಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.