ಹೈದರಾಬಾದ್ : ಭಾರತದಲ್ಲಿ ಅತಿ ಹೆಚ್ಚು ಕಾಂಡೋಮ್ಗಳನ್ನು ಬಳಸುವುದು ಮುಸ್ಲಿಂಮರು ಎಂದು ಎಐಎಂಐಎಂ ಸಂಸದ ಅಸಾದುದೀನ್ ಓವೈಸಿ ಹೇಳಿದ್ದಾರೆ. ಮುಸ್ಲಿಂ ಹಾಗೂ ಸಮುದಾಯದ ನಡುವೆ ದ್ವೇಷವನ್ನು ಹರಡಲು ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ ಎಂದು ಓವೈಸಿ ಆರೋಪಿಸಿದ್ದಾರೆ.
ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಆಸ್ತಿ ಹಂಚುತ್ತಾರೆ ಎಂದು ಪರೋಕ್ಷವಾಗಿ ಮುಸ್ಲಿಂ ಸಮುದಾಯಕ್ಕೆ ಹಿಂದೂಗಳ ಆಸ್ತಿಯನ್ನು ಕಾಂಗ್ರೆಸ್ ಹಂಚುತ್ತದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ದೇಶದಲ್ಲಿ ಮುಸ್ಲಿಮರು ಅತಿ ಹೆಚ್ಚು ಕಾಂಡೋಮ್ ಬಳಸುತ್ತಿದ್ದಾರೆ. ಹೀಗಂತ ಸರ್ಕಾರದ ದತ್ತಾಂಶಗಳು ಹೇಳುತ್ತಿವೆ. ಆದರೂ ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೆರುತ್ತಾರೆ ಎಂಬ ಹೇಳಿಕೆ ಮೂಲಕ ಒಂದು ಸಮುದಾಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದ್ವೇಷ ಭಾವನೆ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.