ಅಸ್ಸಾಂನಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಭೀಕರ ಪ್ರವಾಹದಲ್ಲಿ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಜಲಾವೃತವಾಗಿದ್ದು 131 ಕಾಡು ಪ್ರಾಣಿಗಳು ಸಾವನ್ನಪ್ಪಿದ್ದು, 96 ಪ್ರಾಣಿಗಳನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸತ್ತ ಪ್ರಾಣಿಗಳಲ್ಲಿ 6 ಘೇಂಡಾಮೃಗಗಳು, 117 ಜಿಂಕೆಗಳು ಸೇರಿವೆ. ಈ ಪೈಕಿ 98 ಪ್ರಾಣಿಗಳು ನೀರಿನಲ್ಲಿ ಮುಳುಗಿಸಾವನ್ನಪ್ಪಿದರೆ, ಎರಡು ಪ್ರಾಣಿಗಳು ವಾಹನದಲ್ಲಿ ಸಾಗಿಸುವಾಗ, ಚಿಕಿತ್ಸೆಯ ಸಮಯದಲ್ಲಿ 17 ಪ್ರಾಣಿಗಳು, ಎರಡು ಕಡವೆ, ಒಂದು ಮಕಾಕ್ ಮತ್ತು ನೀರುನಾಯಿ ಸಾವನ್ನಪ್ಪಿದೆ ಎನ್ನಲಾಗಿದೆ.