ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ಈ ನಾಲ್ಕು ವಸ್ತುಗಳು ಇಲ್ಲದಿದ್ದರೆ ಎಂತಹ ಶ್ರೀಮಂತನು ಸಹ ಬಡವನಾಗಿ ಬಿಡುತ್ತಾನಂತೆ. ಮನೆಯಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿ ನೆಲೆಸಲು ಕೆಲವೊಂದು ವಸ್ತುಗಳು ಮನೆಯಲ್ಲಿ ಇರಬೇಕಂತೆ. ಬನ್ನಿ ಹಾಗಾದ್ರೆ ಆ ನಾಲ್ಕು ವಸ್ತುಗಳು ಯಾವುದು ಎಂಬುದನ್ನು ತಿಳಿದುಕೊಳ್ಳೋಣ.
1.ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ದಿನನಿತ್ಯ ಅಡುಗೆಗೆ ಬಳಸುವ ಯಾವುದೇ ಪದಾರ್ಥ ಖಾಲಿಯಾಗಲು ಬಿಡಬಾರದಂತೆ. ಅಡುಗೆ ಮನೆಯಲ್ಲಿ ಮುಖ್ಯವಾಗಿ ಬಳಸುವ ಪದಾರ್ಥ ಖಾಲಿ ಆದ ನಂತರ ತಕ್ಷಣ ಅದನ್ನು ಮನೆಗೆ ತರುವುದರಿಂದ ಮನೆಯಲ್ಲಿ ಹಸಿವಿನ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಆಹಾರದ ಕೊರತೆ ಇದ್ದರೆ ಅನ್ನಪೂರ್ಣೆಶ್ವರಿಯ ವಾಸ ಇರುವುದಿಲ್ಲ ಮತ್ತು ಸುಖ ಸಂಪತ್ತಿನ ಕೊರತೆ ಉಂಟಾಗುತ್ತದೆ.
2.ಮನೆಯ ಸ್ನಾನಗೃಹದಲ್ಲಿರುವ ಬಕೆಟ್ ಖಾಲಿಯಾಗಿರಲು ಬಿಡದೆ ಸ್ವಲ್ಪನಾದರೂ ನೀರು ತುಂಬಿಸಿ ಇಡಿ. ಇಲ್ಲದಿದ್ದರೆ ಬೆಕಟ್ ಆನ್ನು ತಿರುಗಿಸಿ ಉಲ್ಟಾ ಮಾಡಿರಿ.
3.ವಾಸ್ತು ಪ್ರಕಾರ ನಮ್ಮ ಜೇಬಿನಲ್ಲಿ ಇಟ್ಟುಕೊಳ್ಳುವ ಪರ್ಸ್ ಎಂದಿಗೂ ಖಾಲಿಯಾಗಿರಲು ಬಿಡಬಾರದು. ಅದರಲ್ಲಿ ಕನಿಷ್ಟ ಒಂದು ರೂಪಾಯಿ ನಾಣ್ಯವನ್ನಾದರೂ ಇಡಿ. ಎಂದಿಗೂ ಅದು ಖಾಲಿ ಇರದಂತೆ ನೋಡಿಕೊಳ್ಳಿ.
4.ಮನೆಯ ದೇವರ ಕೋಣೆಯಲ್ಲಿ ಇಟ್ಟಿರುವ ಕಳಸವನ್ನು ಎಂದಿಗೂ ನೀರಿನಿಂದ ತುಂಬಿಡಿ. ಅದು ಯಾವತ್ತು ಖಾಲಿಯಾಗಿರಬಾರದು. ನೀವು ಅದರಲ್ಲಿ ನೀರಿನ ಬದಲು ಗಂಗಾಜಲವನ್ನಾದರು ಇಡಬಹುದು.
5.ಯಾವ ಮನೆಯಲ್ಲಿ ಈ ನಾಲ್ಕು ವಸ್ತುಗಳು ಇರುವುದಿಲ್ಲವೋ ಆ ಮನೆಯಲ್ಲಿ ಲಕ್ಷ್ಮಿಯ ಕೃಪೆ ಇರುವುದಿಲ್ಲ ಮತ್ತು ಇವರಿಗೆ ಸುಖ ಸಂಪತ್ತು ಸಿಗುವುದು ತುಂಬಾ ಕಷ್ಟಕರವಾಗಿರುತ್ತದೆ.