ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ನವಮೀ, ನಿತ್ಯನಕ್ಷತ್ರ: ಮೂಲಾ, ಯೋಗ: ಆಯುಷ್ಮಾನ್, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:35 ಗಂಟೆ, ರಾಹು ಕಾಲ ಮಧ್ಯಾನ್ನ 02:00 ರಿಂದ 03:32, ಯಮಘಂಡ ಕಾಲ ಬೆಳಿಗ್ಗೆ 06:22 ರಿಂದ 07:54ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:26 ರಿಂದ 10:57ರ ವರೆಗೆ.
ಮೇಷ ರಾಶಿ : ನಿಮ್ಮದಲ್ಲದ ಕಾರ್ಯವನ್ನು ಮಾಡಲು ಒಪ್ಪುಕೊಳ್ಳಲಾರಿರಿ. ನಿಮ್ಮ ವೇಗದ ಮಾತು ಇತರರಿಗೆ ಅರ್ಥವಾಗದೇ ಇರಬಹುದು. ವಿದ್ಯಾರ್ಥಿಗಳಿಗೆ ಆಭ್ಯಾಸಕ್ಕೆ ಸಮಯವನ್ನು ಹೊಂದಿಸುವುದು ಕಷ್ಟವಾದೀತು. ಪೂರಕ ವಾತಾವರಣ ಕೊರತೆ ಕಾಣುವುದು. ಹೂಡಿಕೆಯನ್ನು ಇನ್ನೊಬ್ಬರ ಒತ್ತಾಯಕ್ಕೆ ಮಾಡುವಿರಿ. ಸಮಾಧಾನವಿಲ್ಲಸಿದ್ದರೂ ಸಮಾಧಾನದಂತೆ ತೋರುವುದು. ಪುಣ್ಯದ ಫಲವನ್ನು ನೀವು ಪಡೆಯುವಿರಿ. ಕೆಲವು ಕಾರ್ಯಗಳು ನಿಮಗೆ ನಿಷ್ಪ್ರಯೋಜಕ ಎಂದು ಕಾಣಿಸುವುದು. ಕೆಲಸವನ್ನು ಬಿಡಬೇಕಾದ ಸಂದರ್ಭವು ಬರಬಹುದು. ನಿಮ್ಮ ಆತ್ಮವಿಶ್ವಾಸಕ್ಕೆ ತೊಂದರೆ ಬರಬಹುದು. ಪೂರ್ಣಮಾಹಿತಿಯ ಕೊರತೆಯನ್ನು ಇಟ್ಟುಕೊಂಡು ನೀವು ಕೆಲಸವನ್ನು ಮಾಡಬೇಕಾದೀತು. ಅನಾಹುತಗಳು ಸಣ್ಣದರಲ್ಲಿಯೇ ಆಗುವ ಸಂದರ್ಭವಿದೆ. ನಿಮ್ಮ ನಿಜವಾದ ಸಾಮರ್ಥ್ಯದಿಂದ ಯಶಸ್ಸು ಗಳಿಸುವಿರಿ. ಸಿಟ್ಟು ಮಾಡಿಕೊಂಡು ಆಗಬೇಕಾದ ಕೆಲಸವನ್ನು ಮಾಡಿ ಮುಗಿಸುವಿರಿ.
ವೃಷಭ ರಾಶಿ : ನೀವು ಕೆಲಸ ಮಾಡುವ ಸಂಸ್ಥೆಯ ರಹಸ್ಯವನ್ನು ನೀವು ಬಿಟ್ಟುಕೊಡಲಾರಿರಿ. ಒತ್ತಡ ಮಾಡಿಕೊಂಡು ಕಾರ್ಯವನ್ನು ಮಾಡುವುದು ಬೇಡ. ನೀವು ಕೆಲಸವನ್ನು ಕಳೆದುಕೊಂಡಿರುವುದು ದಾಯಾದಿಗಳಿಗೆ ಸಂತೋಷದ ಸಮಾಚಾರವಾಗಲಿದೆ. ಸಣ್ಣ ಸಣ್ಣ ಖರ್ಚುಗಳೇ ಕಷ್ಟವಾದೀತು. ಅಧಿಕ ಖರ್ಚಿನ್ನು ಇಂದು ಮಾಡಬೇಕಾಗಿಬರಬಹುದು. ಯಾರಿಗೂ ಹೊರೆಯಾಗದಂತೆ ನಿಮಗೆ ಇರಬೇಕು ಎಂದು ಅನ್ನಿಸಬಹುದು. ನಿಮ್ಮ ದುರಭ್ಯಾಸವು ಇತರರಿಗೂ ತಿಳಿಯಬಹುದು. ಭವಿಷ್ಯದಲ್ಲಿ ಬರಬಹುದಾದ ತೊಂದರೆಗಳನ್ನು ನೀವು ಊಹಿಸಿಕೊಂಡು ಚಿಂತೆಪಡುವಿರಿ. ಸಂಗಾತಿಯಿಂದ ನಿಮಗೆ ಸಿಗಬೇಕಾದುದನ್ನು ಪಡೆಯುವಿರಿ. ಸಿಕ್ಕಿದ್ದನ್ನು ಜೋಪಾನ ಮಾಡಿಕೊಳ್ಳಿ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳಲೂಬಹುದು. ಸುಮ್ಮನೇ ಇರುವುದು ನಿಮಗೆ ಇಂದು ಪ್ರಿಯವಾದೀತು. ಹೂಡಿಕೆಯಿಂದ ಹಣವನ್ನು ಕಳೆದುಕೊಳ್ಳುವಿರಿ. ಹೆಚ್ಚು ಮಾತನಾಡುವ ಉದ್ಯೋಗಕ್ಕೆ ಸೇರಿಕೊಳ್ಳುವಿರಿ.
ಮಿಥುನ ರಾಶಿ : ಮನಸ್ಸು ಯಾವುದೋ ಕಾರಣಕ್ಕೆ ಭಾರವಾಗಬಹುದು. ಅನ್ಯರಿಂದ ಅಸಾಧ್ಯ ಎನಿಸಿದ ಕಾರ್ಯವನ್ನು ಮಾಡಲು ನೀವು ಧೈರ್ಯವನ್ನು ಬಿಡಲಾರಿರಿ. ಕೋಪವು ನಿಮ್ಮ ಸಹಜತೆಯಾದರೂ ಅದರಿಂದ ಹೊರಬರುವ ತಂತ್ರವನ್ನು ತಿಳಿದುಕೊಳ್ಳಬೇಕು. ನಿಮ್ಮ ಯೋಜನೆಗಳು ವಾಸ್ತವಕ್ಕೆ ಹತ್ತಿರವಿರಲಿ. ಹೆಚ್ಚಿನ ವಿವರಗಳನ್ನು ಅನುಭವಿಗಳ, ತಿಲಕಿದವರಿಂದ ಪಡೆಯಿರಿ. ವಿವಾಹ ಸಮಾರಂಭಕ್ಕೆ ಹೋಗುವಿರಿ. ಪ್ರಭಾವೀ ವ್ಯಕ್ತಿಗಳ ಭೇಟಿಯು ನಿಮ್ಮ ಉತ್ಸಾಹವನ್ನು ಹೆಚ್ಚಿಸಬಹುದು. ಸಂಗಾತಿಯ ಒಳ್ಳೆಯ ಕೆಲಸಗಳು ನಿಮಗೆ ಇಷ್ಟವಾಗದು. ಕೆಲಸವನ್ನು ಏಕಾಗ್ರತೆಯಿಂದ ಮಾಡುವಿರಿ. ನಿಮ್ಮದೇ ಆದ ಮಿತ್ರರ ವೃಂದವನ್ನು ಕಟ್ಟಿಕೊಳ್ಳುವಿರಿ. ಸಹೋದರರ ನಡುವೆ ದ್ವೇಷವು ಉಂಟಾಗಬಹುದು. ಯಾರ ಪ್ರಶಂಸೆಗೂ ಕಾಯದೇ ಚೆನ್ನಾಗಿ ಕರ್ತವ್ಯವನ್ನು ಮಾಡುವಿರಿ. ಕಛೇರಿಯಲ್ಲಿ ಕೆಲವು ಬದಲಾವಣೆ ನಿಮಗೆ ಕಷ್ಟವಾದೀತು.
ಕಟಕ ರಾಶಿ : ಯಶಸ್ಸಿಗಾಗಿ ಏನನ್ನೂ ಮಾಡದೇ ಕರ್ತವ್ಯ ದೃಷ್ಟಿಯಿಂದ ಮಾಡಿದಾಗ ಯಶಸ್ಸನ್ನು ನಿಮ್ಮನ್ನು ಬಂದು ಸೇರುವುದು. ನಿಮ್ಮ ಪ್ರಾಮಾಣಿಕತೆಯನ್ನು ತೋರಿಸುವ ಅವಶ್ಯಕತೆ ಇಲ್ಲ. ಉತ್ತಮ ಭೂಮಿಯ ಲಾಭವಾಗಲಿದೆ. ಅಪಾಯದಿಂದ ಹೊರಬರಲಿದ್ದೀರಿ. ಧನವ್ಯಯವನ್ನು ನಿಮ್ಮ ಜಾಣತನದಿಂದ ತಪ್ಪಿಸಿಕೊಳ್ಳುವಿರಿ. ಅಪರಿಚಿತರಿಗೆ ಇಂದು ಸಹಾಯವನ್ನು ಮಾಡುವಿರಿ. ಕೋಪದ ನಿಯಂತ್ರಣವನ್ನು ಮಾಡಲು ಕಷ್ಟವಾದೀತು. ಸಂಸಾರದಲ್ಲಿ ನಿರಾಸಕ್ತಿಯು ಇರಲಿದೆ. ನಿಮ್ಮ ಸಣ್ಣತನವೇ ದೊಡ್ಡ ಲಾಭಕ್ಕೆ ತೊಂದರೆಯಾಗುವುದು. ಕ್ಷಮೆಯನ್ನು ಕೇಳಿದರೆ ನಿರಾಕರಿಸುವುದು ಬೇಡ. ಸೌಲಭ್ಯಗಳಿಂದ ನೀವು ಆಲಸ್ಯವನ್ನು ಬೆಳೆಸಿಕೊಳ್ಳುವಿರಿ. ಮಕ್ಕಳ ಪ್ರೀತಿಯನ್ನು ಸಂಪಾದಿಸುವಿರಿ. ಅನಗತ್ಯ ಖರೀದಿಯನ್ನು ಮಾಡುವಿರಿ. ಕಾರ್ಯದ ನೈರಂತರ್ಯದಿಂದ ಅದ್ಭುತವನ್ನು ಸಾಧಿಸಲು ಸಾಧ್ಯ. ಅಸಂಬದ್ಧ ವಿಚಾರಕ್ಕೆ ಮಧ್ಯ ಪ್ರವೇಶ ಸಲ್ಲದು.
ಸಿಂಹ ರಾಶಿ : ಬಂಧುಗಳ ಕಾರಣದಿಂದ ಇಂದಿನ ಕಾರ್ಯದಲ್ಲಿ ತೊಡಕುಗಳು ಕಾಣಿಸಿಕೊಳ್ಳುವುದು. ಕಾರ್ಯದ ಸ್ಥಳದಲ್ಲಿ ಪ್ರತಿಯೊಬ್ಬರೂ ನಿಮ್ಮ ಕೆಲಸವನ್ನು ಪ್ರಶಂಸಿಸುವರು. ಅಸಾಧ್ಯವನ್ನು ಸಾಧಿಸುವ ಛಲವಿರಲಿದೆ. ಉದ್ಯಮದಲ್ಲಿ ಹಿನ್ನಡೆಯಾಗುವ ಸಂಭವವು ನಿಮಗೆ ಮೊದಲೇ ಗೊತ್ತಾಗಲಿದೆ. ಎಷ್ಟೇ ಪ್ರಯತ್ನಿಸಿದರೂ ಹಳೆಯ ನೆನಪುಗಳಿಗೆ ಕಡಿವಾಣ ಹಾಕಲಾಗದು. ನಿರಪೇಕ್ಷ ವಿಚಾರವನ್ನು ಪ್ರಸ್ತಾಪಿಸಿಕೊಂಡು ಕಾಲಹರಣ ಮಾಡುವಿರಿ. ತಾಯಿಯ ವಿಚಾರದಲ್ಲಿ ನೀವು ಇಂದು ಕೋಪಗೊಳ್ಳಬಹುದು. ಇಂದು ನೀವು ಹೊಸ ತಂಡವನ್ನು ಕಟ್ಟಿಕೊಳ್ಳುವಿರಿ. ಪಾಲುದಾರಿಕೆಯಲ್ಲಿ ನಿಮಗೆ ಅಸಮಾಧಾನ ಇರಲಿದೆ. ನಿಮ್ಮ ಮಕ್ಕಳಿಂದ ಸೋಲನ್ನು ಒಪ್ಪಿಕೊಳ್ಳುವುದೇ ಸೂಕ್ತ. ಸಭ್ಯತೆಯನ್ನು ಇಟ್ಟುಕೊಂಡು ಇಂದಿನ ವ್ಯವಹಾರವನ್ನು ಮಾಡಿರಿ. ನೀವು ನಿಮ್ಮ ಸ್ಥಾನಕ್ಕಾಗಿ ಇನ್ನೊಬ್ಬರನ್ನು ದೂಷಿಸುವಿರಿ. ಹಳೆಯ ವಸ್ತುಗಳೇ ನಿಮಗೆ ಪ್ರಿಯವಾಗಬಹುದು. ಕೃತಜ್ಞತೆಯನ್ನು ಇಟ್ಟುಕೊಳ್ಳುವುದು ಕಷ್ಟವಾದೀತು. ನಿಮ್ಮ ಅನಿರೀಕ್ಷಿತ ನಡೆಯು ಶತ್ರುಗಳಿಗೆ ಭಯ ಹುಟ್ಟಿಸೀತು.
ಕನ್ಯಾ ರಾಶಿ : ಸಾಲವನ್ನು ಇನ್ನೊಬ್ಬರಿಗಾಗಿ ಮಾಡಬೇಕಾದೀತು. ನಿಮ್ಮ ಸಂಕಷ್ಟಕ್ಕೆ ಯಾರನ್ನೋ ದೂರುತ್ತ ಇರುವುದು ಸರಿಯಲ್ಲ. ಹಣದ ಹರಿವು ಇಂದು ಸ್ವಲ್ಪ ಕಡಿಮೆಯಾಗಲಿದೆ. ಆಪ್ತರನ್ನು ಕಳೆದುಕೊಂಡು ದುಃಖಿಸುವಿರಿ. ನಿಮ್ಮ ಕಳವಳವು ಮಿತ್ರರಿಗೆ ಗೊತ್ತಾಗುವುದು. ಕಲಾವಿದರು ದೂರಪ್ರಯಾಣವನ್ನು ಮಾಡುವಿರಿ. ನಿದ್ರೆಯು ಕಡಿಮೆಯಾಗಿ ಕೆಲಸದಲ್ಲಿ ಉತ್ಸಾಹ ಕಡಿಮೆ ಇರಲಿದೆ. ಪ್ರೇಮಿಯ ಜೊತೆ ಈ ದಿನವನ್ನು ಕಳೆಯುವಿರಿ. ಸ್ತ್ರೀಸಂಬಂಧದ ವಿಷಯದಲ್ಲಿ ನಿಮ್ಮನ್ನು ವಿಚಾರಿಸಬಹುದು. ಯಂತ್ರಗಳ ಮಾರಾಟವನ್ನು ನೀವು ಕಡಿಮೆಮಾಡುವಿರಿ. ಅಪರಿಚಿತ ಪ್ರದೇಶದಲ್ಲಿ ಅನಿರೀಕ್ಷಿತವಾಗಿ ಮಿತ್ರನ ಭೇಟಿಯಾಗುವುದು. ಉದ್ಯೋಗದಲ್ಲಿ ನಿಶ್ಚಲತೆ ಕಾಣಿಸದು. ಸಂಗಾತಿಯ ಭಾವನೆಗೆ ಬೆಲೆ ಕೊಟ್ಟು ಸಂತೋಷಪಡಿಸುವಿರಿ. ವೈವಾಹಿಕ ಸಂಬಂಧವನ್ನು ಸರಿಯಾಗಿ ಇಟ್ಟುಕೊಳ್ಳುವುದು ಕಷ್ಟವಾಗಬಹುದು. ನಿಮ್ಮ ಸಂಪತ್ತು ಮತ್ತಾವುದೋ ರೂಪದಲ್ಲಿ ಬಂದು ಸೇರುತ್ತದೆ ಎಂಬ ನಂಬಿಕೆ ಇರಲಿದೆ. ಸಮೀಪದಲ್ಲಿ ಇರುವವರನ್ನು ಕೆಲಸಕ್ಕೆ ಬಳಸಿಕೊಳ್ಳುವಿರಿ.
ತುಲಾ ರಾಶಿ : ಇಂದು ನೀವು ಹೊರಟ ಕಾರ್ಯದಿಂದ ಅರ್ಧಕ್ಕೆ ಬರಬೇಕಾದೀತು. ಇಂದು ಮೇಲಧಿಕಾರಿಗಳಿಂದ ಹಲವು ರೀತಿಯ ಒತ್ತಡವನ್ನು ನೀವು ಅನುಭವಿಸುವಿರಿ. ಸ್ಥಿರಾಸ್ತಿಯಿಂದ ನಿಮಗೆ ಸಾಲವು ದೊರೆಯಬಹುದು. ಹೊಸ ಸಂಬಂಧವನ್ನು ಮಾಡಿಕೊಳ್ಳುವಿರಿ. ನಿರಂತರ ಕೆಲಸವು ನಿಮಗೆ ಇಂದು ಇಷ್ಟವಾಗಲಿದೆ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು. ಮಾತುಗಳಲ್ಲಿ ಇರುವ ಕೋಪವು ನಿಮಗೆ ಕಾಣಿಸುವುದು. ವಾಹನದ ದುರಸ್ತಿಯಿಂದ ಖರ್ಚಾಗಲಿದೆ. ಗೃಹನಿರ್ಮಾಣದ ಭೂಮಿಯ ವಿಚಾರದಲ್ಲಿ ದೂರನ್ನು ದಾಖಲಿಸಬಹುದು. ಅವಕಾಶಗಳು ಇಲ್ಲದೇ ನೀವು ಇಂದು ಅಸಮಾಧಾನದಿಂದ ಇರುವಿರಿ. ಕೂಡಿಟ್ಟ ಹಣವನ್ನು ಬೇರೆ ಉದ್ದೇಶಕ್ಕೆ ಬಳಸುವಿರಿ. ಮಾರಾಟದಿಂದ ನಿಮಗೆ ಅಲ್ಪ ಲಾಭವಾಗಲಿದೆ. ಹಳೆಯ ಘಟನೆಗಳು ನಿಮ್ಮನ್ನು ಕಾಡಬಹುದು. ಆತಂಕದಿಂದ ನೀವು ಮುಕ್ತರಾಗಲು ಬಯಸುವಿರಿ. ಸಮಯ ಇಂದು ಬೇಗನೆ ಕಳೆದಂತೆ ಅನ್ನಿಸಬಹುದು.
ವೃಶ್ಚಿಕ ರಾಶಿ : ಹಣಕ್ಕಿಂತ ಆರೋಗ್ಯ ಮುಖ್ಯವಾದ ಕಾರಣ ಅಂತಹ ಸನ್ನಿವೇಶವನ್ನು ನೀವು ಅರ್ಥಮಾಡಿಕೊಳ್ಳಬೇಕು. ನಿಮ್ಮ ಕಠಿಣ ಪರಿಶ್ರಮವು ಕೆಲಸಕ್ಕೆ ಬಾರದು. ಯುಕ್ತಿಯಿಂದ ನಿರ್ವಹಿಸುವ ಚಾಣಾಕ್ಷತೆ ಬೇಕು. ಸರ್ಕಾರದಿಂದ ಸೌಲಭ್ಯವನ್ನು ನೀವು ನಿರೀಕ್ಷಿಸುತ್ತಿರುವಿರಿ. ಯಶಸ್ಸನ್ನು ಒಡೆಯುವ ಹಂಬಲವು ಅಧಿಕವಾಗುವುದು. ನೌಕರರಿಂದ ಕೆಲಸವಾಗುತ್ತಿಲ್ಲ ಎಂಬ ಬೇಸರ ಬರುವುದು. ಅವಶ್ಯಕತೆಗೆ ಅನುಸಾರವಾಗಿ ಮುಂದುವರಿಯಿರಿ. ಸ್ನೇಹಿತರಿಗೆ ಸಾಲವಾಗಿ ಹಣವನ್ನು ಕೊಡುವಿರಿ. ಸಾಮಾಜಿಕ ತಾಣದಲ್ಲಿ ನಿಮಗೆ ಸ್ತ್ರೀಯ ಜೊತೆ ಪ್ರೇಮವು ಉಂಟಾಗಬಹುದು. ಹೊಸ ಬಾಳಿನ ಕಡೆ ಮನಸ್ಸು ಹರಿಯುವುದು. ಸಮಯವನ್ನು ವ್ಯರ್ಥ ಮಾಡದೇ ಅಧಿಕಸಂಪಾದನೆಯನ್ನು ಮಾಡುವಿರಿ. ಮನೆಯಲ್ಲಿ ಒಂಟಿಯಾಗಿದ್ದು ನಿಮಗೆ ಭಯವು ಉಂಟಾಗಬಹುದು. ಕೆಲಸದಲ್ಲಿ ಆಸಕ್ತಿಯ ಕೊರತೆ ಕಾಣಿಸುವುದು. ಉದ್ಯಮದಲ್ಲಿ ಹಿನ್ನಡೆಯಾಗುವುದು ನಿಮಗೆ ಮೊದಲೇ ಗೊತ್ತಿದ್ದೂ ಪ್ರಯತ್ನಿಸುವಿರಿ. ವಹಿಸಿಕೊಂಡ ಕಾರ್ಯವನ್ನು ಸಮಯಕ್ಕೆ ಮುಗಿಸಿ.
ಧನು ರಾಶಿ : ನಿಮ್ಮನ್ನು ಅಗೌರವದಿಂದ ಕಾಣುವವರ ಮೇಲೆ ಕೋಪ ಬರುವುದು. ಇಂದು ನಿಮ್ಮ ಮನೆಯ ದುರಸ್ತಿಯ ಕಡೆ ಯೋಚಿಸುಬಿರಿ. ಸಂಗಾತಿಯನ್ನು ನೀವು ಅವಮಾನಸಲಿದ್ದೀರಿ. ಇದರಿಂದ ನಿಮಗೆ ಮುಂದೆ ತೊಂದರೆಯಾಗಬಹುದು. ಅತಿಥಿ ಸತ್ಕಾರವು ನಿಮಗೆ ಸಂತೋಷ ಕೊಡುವುದು. ಆರ್ಥಿಕಸ್ಥಿತಿಯು ನಿಮಗೆ ಸಮಾಧಾನವನ್ನು ಕೊಡುವುದು. ಕುಟುಂಬದಲ್ಲಿ ಐಕಮತ್ಯವಿರಲಿ. ಆತ್ಮೀಯರ ಜೊತೆ ನಿಮ್ಮ ಸಂಬಂಧವು ಚೆನ್ನಾಗಿರಲಿದೆ. ವೃತ್ತಿಯಲ್ಲಿ ಬಂದ ಮಾತಿನಿಂದ ನೀವು ಉದ್ವೇಗಗೊಳ್ಳುವಿರಿ. ನಿಮ್ಮ ದೃಷ್ಟಿಯನ್ನು ಬದಲಿಸಿಕೊಳ್ಳುವುದು ಉತ್ತಮ. ನಿಮ್ಮ ಕುರಿತು ತಂದೆ ತಾಯಿಯರು ಚಿಂತಿಸುವರು. ಭೂಮಿಯನ್ನು ವಶ ಮಾಡಿಕೊಳ್ಳಲು ಪ್ರಭಾವಿಗಳ ಸಂಗವನ್ನು ಮಾಡಬೇಕಾದೀತು. ಭೂಮಿಯ ಪ್ರಕರಣವು ನಿಮ್ಮನ್ನು ಚಿಂತೆಗೀಡುಮಾಡೀತು. ನೌಕರರ ಮೇಲೆ ಕಿಡಿಕಾರುವಿರಿ. ಸಂಶೋಧನಾ ವಿಚಾರದಲ್ಲಿ ಆಸಕ್ತಿಯು ಹೆಚ್ಚಾಗುವುದು. ಯಾರ ಯೋಗ್ಯತೆಯನ್ನೂ ಅಳೆಯಲು ಸಾಧ್ಯವಾಗದು. ಅಪಾಯಯಕ್ಕೆ ಸಿಕ್ಕಿಕೊಳ್ಳುವ ಸಂಭವವಿತ್ತು. ಜಾಣತನ ಇಂದು ನಿಮ್ಮ ಉಪಯೋಗಕ್ಕೆ ಬಾರದು.
ಮಕರ ರಾಶಿ : ಒಳ್ಳೆಯ ವ್ಯವಸ್ಥೆಯನ್ನು ಇಟ್ಟುಕೊಂಡು ಸರಿಯಾದ ಸೇವೆ ಕೊಡಲು ಕಷ್ಟವಾಗಬಹುದು. ನಿಮ್ಮ ಪ್ರಮುಖ ದಾಖಲೆಗಳನ್ನು ಯಾರಿಗೂ ಹಸ್ತಾಂತರಿಸುವುದು ಬೇಡ. ಸ್ನೇಹಿರಿಂದ ನಿಮಗೆ ಬಹುಮಾನ ಸಿಗಲಿದೆ. ಸಮಾಜಮುಖೀ ಕೆಲಸದಿಂದ ನಿಮಗೆ ಗೌರವವು ಸಿಗಲಿದೆ. ಮಕ್ಕಳ ಯಶಸ್ಸಿನಿಂದ ಪೋಷಕರಿಗೆ ಸಂತಸವಾಗಲಿದೆ. ವಾಹನ ಚಲಿಸುವಾಗ ಜಾಗರೂಕತೆ ಮುಖ್ಯವಾಗಲಿದೆ. ಶತ್ರುಗಳು ವ್ಯವಹಾರದಲ್ಲಿ ಮಧ್ಯವರ್ತಿಗಳಾಗಿ ಇರುವರು. ಮೋಸದ ಜಾಲಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ನೀವು ನಿಮ್ಮ ಬಗ್ಗೆ ಜನರ ಅಭಿಪ್ರಾಯವನ್ನು ಪಡೆಯಲು ಇಚ್ಛಿಸುವಿರಿ. ವಿದೇಶದಲ್ಲಿ ಇದ್ದರೆ ನಿಮಗೆ ಸಂಕಷ್ಟವು ಬರಬಹುದು. ಉತ್ತಮ ಆಹಾರವನ್ನು ಪಡೆಯಲು ಯತ್ನಿಸಿ. ಪೂಜಾಯೋಗ್ಯರಿಗೆ ಆತಿಥ್ಯವನ್ನು ನೀಡಿ. ಕೆಲವು ಉದ್ಯಮದ ರಿಸ್ಕ್ ನ್ನು ತೆಗೆದುಕೊಳ್ಳಬೇಕಾಗುವುದು. ಸ್ನೇಹಿತರ ಸಹಕಾರದಿಂದ ಸ್ಥಿರಾಸ್ತಿಯನ್ನು ಖರೀದಿಸುವಿರಿ. ಪ್ರೀತಿಯಲ್ಲಿ ನಿಮಗೆ ಮೋಸವಾಗುವುದು. ಉದ್ಯಮಕ್ಕೆ ಬೇಕಾದ ವಿವರಗಳನ್ನು ಅನುಭವಿಗಳಿಂದ ಪಡೆಯಿರಿ.
ಕುಂಭ ರಾಶಿ : ಒಂದಾದ ಮೇಲೆ ಒಂದರಂತೆ ಒತ್ತಡ ಕಾಣಿಸಿಕೊಳ್ಳುವುದು. ಇಂದು ಯಾವುದನ್ನೂ ಅತಿಯಾಗಿ ಹಚ್ಚಿಕೊಳ್ಳದೇ ಕಾರ್ಯತತ್ಪರರಾಗುವಿರಿ. ಆಡಿದ ಮಾತಿಗೆ ಕ್ಷಮೆಯನ್ನು ಕೇಳಬೇಕಾದೀತು. ವಿವಾಹದ ಮಾತುಕತೆಗಳು ಬಿರುಸಿನಿಂದ ನಡೆಯಲಿದೆ. ನಿಮ್ಮ ಸುರಕ್ಷತೆಯಲ್ಲಿ ನೀವಿರುವುದು ಉತ್ತಮ. ಪತ್ನಿಯ ಬಗ್ಗೆ ನಿಮಗೆ ಗೌರವವು ಕಡಿಮೆ ಆಗಬಹುದು. ಇನ್ನೊಬ್ಬರ ನೋವಿಗೆ ಸ್ಪಂದಿಸಲು ಹೋಗಿ ಸಿಕ್ಕಿಬೀಳಬೇಕಾದೀತು. ನಿಮ್ಮ ವಿಚಾರವನ್ನು ಮುಚ್ಚಿಡಲು ಪ್ರಯತ್ನಿಸುವಿರಿ. ಕೋಪಕ್ಕೆ ಕಾರಣವನ್ನು ನೀವು ವ್ಯಕ್ತಿಪಡಿಸಲು ಇಚ್ಛಿಸುವುದಿಲ್ಲ. ಸಂಪತ್ತಾಗಿ ಅನ್ಯ ವೃತ್ತಿಯನ್ನು ಆಶ್ರಯಿಸಬೇಕಾದೀತು. ಹೂಡಿಕೆಯನ್ನು ಅಲ್ಪ ಮೊತ್ತದಲ್ಲಿ ಮಾಡಿ. ನಿಮ್ಮನ್ನು ನೀವೇ ರೂಪಿಸಿಕೊಳ್ಳುವ ಅನಿವಾರ್ಯತೆ ಬರಬಹುದು. ಅತಿಥಿಗಳ ಆಗಮನವಾಗಲಿದೆ. ನಿರುದ್ಯೋಗದ ಸ್ಥಿತಿಯು ದಾಯಾದಿಗಳಿಗೆ ಸಂತಸವಗುವುದು. ಬಾಂಧವ್ಯ ಗಟ್ಟಿಯಾಗುವ ತನಕ ಕಾಯಬೇಕು.
ಮೀನ ರಾಶಿ : ನಿಮ್ಮಸಾಮಾಜಿಕ ಕಾರ್ಯಗಳಿಗೆ ಉತ್ತಮ ಜನಸ್ಪಂದ ಸಿಗಬಹುದು. ನೀವು ಉದ್ಯಮಿಗಳ ಜೊತೆ ಹೊಸ ಯೋಜನೆಯನ್ನು ಪಡೆಯುವ ತವಕದಲ್ಲಿ ಇರುವಿರಿ. ಸರ್ಕಾರದ ಕೆಲಸವಾಗದೇ ಅಧಿಕ ಓಡಾಟವಾದೀತು. ಆರ್ಥಿಕ ನೆರವನ್ನು ನೀವು ಬಯಸುವಿರಿ. ಸಮಾಧಾನ ಚಿತ್ತದಿಂದ ನಿಮ್ಮ ಸಮಸ್ಯೆಗಳನ್ನು ಸರಿ ಮಾಡಿಕೊಳ್ಳುವಿರಿ. ವೈವಾಹಿಕ ಜೀವನವು ಹಿರಿಯರ ಮಾರ್ಗದರ್ಶನದಲ್ಲಿ ಆಗುವುದು. ಮಕ್ಕಳಿಗೆ ಸಂಪತ್ತನ್ನು ಹಂಚುವ ಯೋಚನೆ ಇರಲಿದೆ. ನಿಮ್ಮ ಸ್ವಭಾವದಿಂದ ದಾಂಪತ್ಯದಲ್ಲಿ ಕೆಲವು ಮಾತುಗಳು ಕೇಳಿಬರಬಹುದು. ಅನಗತ್ಯ ವಿಚಾರವನ್ನು ಪ್ರಸ್ತಾಪಿಸಿ ವಿವಾದವಾಗುವಂತೆ ಮಾಡುವಿರಿ. ನಿಮ್ಮ ಆದಾಯವು ಅಧಿಕವಾಗಿದ್ದು ನಿಮಗೆ ಸಂತೋಷವನ್ನು ಕೊಡುವ ವಿಚಾರವು ಇದಾಗಿದೆ. ನೀವು ಯಾವುದನ್ನೂ ಪರೀಕ್ಷಿಸದೇ ಒಪ್ಪಿಕೊಳ್ಳುವುದು ಬೇಡ. ಶಿಸ್ತಿಗೆ ಹೆಚ್ಚು ಒತ್ತನ್ನು ಇಂದು ಕೊಡುವಿರಿ. ಇದು ಸಹೋದ್ಯೋಗಿಗಳಿಗೆ ಕಿರಿಕಿರಿಯಾದೀತು. ವಿದ್ಯಾರ್ಥಿಗಳಿಗೆ ಓದಲು ಸಮಯವನ್ನು ಇಂದು ಹೊಂದಿಕೆಯಾಗದು. ಇಂದು ನಿಮಗೆ ಗೊತ್ತಿಲ್ಲದೇ ದುಷ್ಟರ ಸಹವಾಸ ಸಿಗಬಹುದು.