ತುಲಾ ರಾಶಿ: ರಕ್ತದೊತ್ತಡದ ಸಮಸ್ಯೆ ಕಾಣಿಸಬಹುದು. ನಿರ್ಧಾರಗಳ ಬದಲಾವಣೆಯಿಂದ ಕೆಲಸಗಳಲ್ಲಿ ಹಿನ್ನಡೆಯಾಗಬಹುದು. ಆತ್ಮವಿಶ್ವಾಸದ ಕೊರತೆ ಇಂದು ಕಾಡುತ್ತದೆ. ಶುಭಸಂಖ್ಯೆ: 4
ವೃಶ್ಚಿಕ ರಾಶಿ: ಆದಾಯಕ್ಕೆ ತಕ್ಕಂತೆ ವೆಚ್ಚ ಮಾಡುವುದು ಜಾಣತನ. ದಾಂಪತ್ಯದಲ್ಲಿ ಸಾಮರಸ್ಯ ಕಾಣಬಹುದು. ಕಲಾವಿದರಿಗೆ ಪರಿಶ್ರಮದ ಅಗತ್ಯವಿದೆ ಇಂದು. ಶುಭಸಂಖ್ಯೆ:3
ಧನುಸ್ಸು ರಾಶಿ: ಬಟ್ಟೆ ಮತ್ತು ಮಕ್ಕಳ ಆಟಿಕೆಗಳ ವ್ಯವಹಾರದಲ್ಲಿ ಅಧಿಕ ಲಾಭ. ಪತ್ರಕರ್ತರು, ಬರಹಗಾರರರಿಗೆ ಸೋಲು-ಗೆಲುವು ಸಮಾನವಾಗಿರುತ್ತದೆ. ಧನ ಲಾಭ ಕಾಣಬಹುದು. ಶುಭಸಂಖ್ಯೆ:2
ಮಕರ ರಾಶಿ: ಇಂದು ಕೃಷಿಕರಿಗೆ ಶುಭದಾಯಕ ದಿನ. ವಿದೇಶದಲ್ಲಿರುವ ಬಂಧುಗಳಿಂದ ಅಶುಭ ಸುದ್ದಿ ಬಂದು ಬೇಸರ ಆಗಬಹುದು. ಸಾಲದಿಂದ ಮುಕ್ತಿ ಸಿಗಲಿದೆ. ಅದಾಯದಲ್ಲಿ ಹೆಚ್ಚಿನ ಲಾಭದ ನಿರೀಕ್ಷೆ. ಶುಭಸಂಖ್ಯೆ:6
ಕುಂಭ ರಾಶಿ: ದೇವತಾ ಕಾರ್ಯಗಳಲ್ಲಿ ಭಾಗಿಯಾಗುವಿರಿ. ವಸ್ತ್ರ ವ್ಯಾಪಾರದಲ್ಲಿ ಶುಭಫಲ. ಲೇವಾದೇವಿ ವ್ಯವಹಾರದಲ್ಲಿ ಆದಾಯದಷ್ಟೇ ಖರ್ಚು ಇರುತ್ತದೆ ಎಚ್ಚರ. ಶುಭಸಂಖ್ಯೆ:1
ಮೀನ ರಾಶಿ: ಮಕ್ಕಳಿಗೆ ನೌಕರಿಯಲ್ಲಿ ಬಡ್ತಿ ಸಿಗುತ್ತದೆ. ಶಿಕ್ಷಕರಿಗೆ ಶುಭ ದಿನ. ಸಂಬಂಧಗಳಲ್ಲಿ ಬಿರುಕು ಮೂಡಬಹುದು. ಸಿಮೆಂಟ್, ಮರಳು ವ್ಯಾಪಾರದಲ್ಲಿ ಹೆಚ್ಚು ಲಾಭದ ನಿರೀಕ್ಷೆ. ಶುಭಸಂಖ್ಯೆ: 2