ಮೇಷ ರಾಶಿ: ಪದವಿ ಪ್ರಾಪ್ತಿಯಲ್ಲಿ ಅಡೆತಡೆಯಾಗಬಹುದು. ಹಿತಶತ್ರುಗಳ ಬಗ್ಗೆ ಎಚ್ಚರಿಕೆಯಿಂದ ಇದ್ದಷ್ಟು ಒಳ್ಳೆಯದು. ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ ವರ್ಗಾವಣೆಯಾಗುತ್ತದೆ. ಶುಭಸಂಖ್ಯೆ: 2
ವೃಷಭ ರಾಶಿ: ಸಂಗೀತಗಾರರಿಗೆ ವಿಶೇಷ ವೇದಿಕೆ ಇಂದು ಸಿಗುತ್ತದೆ. ಸಾರ್ವಜನಿಕವಾಗಿ ರಾಜಕಾರಣಿಗಳಿಗೆ ಹಿನ್ನಡೆಯಾಗಬಹುದು. ಅಧಿಕಾರಿಗಳಿಗೆ ಸಹವರ್ತಿಗಳಿಂದ ಮೋಸವಾಗುತ್ತದೆ. ಶುಭಸಂಖ್ಯೆ: 8
ಮಿಥುನ ರಾಶಿ: ಅರಣ್ಯ ಉತ್ಪನ್ನಗಳ ಮಾರಾಟದಲ್ಲಿ ಹೆಚ್ಚಿನ ಲಾಭ ನಿರೀಕ್ಷೆ. ಗೃಹ ಆರಂಭಕ್ಕೆ ಯೋಜನೆ ಸಿದ್ಧ ಮಾಡಿಕೊಳ್ಳಿ. ಉದ್ಯೋಗ ಪ್ರಾಪ್ತಿಯಲ್ಲಿ ವಿಳಂಬವಾಗಬಹುದು ಆದರೆ ಸಿಗುತ್ತದೆ. ಶುಭಸಂಖ್ಯೆ: 6
ಕಟಕ ರಾಶಿ: ನಿಮ್ಮ ಧೋರಣೆಯ ಬಗ್ಗೆ ಕುಟುಂಬದಲ್ಲಿ ವಿರೋಧ ವ್ಯಕ್ತವಾಗುತ್ತದೆ. ದೃಢ ನಿರ್ಧಾರ ಮಾಡುವಲ್ಲಿ ಗೊಂದಲ ಸೃಷ್ಟಿಯಾಗುತ್ತದೆ. ಖಿನ್ನತೆಗೆ ಜಾರುವ ಸಾಧ್ಯತೆ ಇದೆ, ಎಚ್ಚರ ಅಗತ್ಯ. ಶುಭಸಂಖ್ಯೆ: 1
ಸಿಂಹ ರಾಶಿ: ಚಿನ್ನ -ಬೆಳ್ಳಿ ವ್ಯಾಪಾರದಲ್ಲಿ ಇಂದು ಅಧಿಕ ಲಾಭ ನಿರೀಕ್ಷೆ. ಷೇರು ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆ ಅತ್ಯಗತ್ಯ. ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ, ಹುಷಾರಾಗಿರಿ. ವಿವಾಹ ಯೋಗ ಇದೆ. ಶುಭಸಂಖ್ಯೆ: 9
ಕನ್ಯಾ ರಾಶಿ: ಮನೆ ಖರೀದಿಗೆ ತೀರ್ಮಾನ ಮಾಡುವಿರಿ. ಹಳೇ ಸ್ನೇಹಿತನ ಭೇಟಿ. ಕುಟುಂಬ ಸಮೇತ ಯಾತ್ರೆ ಮಾಡುವಿರಿ. ದಿನದ ಅಂತ್ಯದಲ್ಲಿ ಆತ್ಮೀಯರ ವಿಯೋಗ ತೀವ್ರ ದುಃಖ ತರುತ್ತದೆ. ಶುಭಸಂಖ್ಯೆ: 2