ತುಲಾ ರಾಶಿ: ಹೂಡಿಕೆ ವ್ಯವಹಾರಕ್ಕೆ ಹೊಸ ಪಾಲುದಾರರು ಸಿಕ್ಕಿ ಯಶಸ್ಸು ಲಭಿಸುತ್ತದೆ. ಷೇರು ವ್ಯವಹಾರದಲ್ಲಿ ಲಾಭವಾಗುವುದು. ಕಿರುಚಿತ್ರ ತಂತ್ರಜ್ಞರಿಗೆ ವಿಶೇಷ ಅವಕಾಶ ಸಿಗುತ್ತದೆ. ಶುಭಸಂಖ್ಯೆ:6
ವೃಶ್ಚಿಕ ರಾಶಿ: ಪಿತ್ರಾರ್ಜಿತ ಆಸ್ತಿಗಾಗಿ ವಾಗ್ವಾದ ಮಾಡುವಿರಿ. ಕೋರ್ಟ್ ಕೆಲಸದಲ್ಲಿ ವಿಳಂಬವಾಗುತ್ತದೆ. ಕಾರ್ಖಾನೆ ಮಾಲೀಕರಿಗೆ ಅಶುಭ ಸುದ್ದಿಯೊಂದು ಆಘಾತ ಉಂಟು ಮಾಡುತ್ತದೆ. ರಿಯಲ್ ಎಸ್ಟೇಟ್ನಲ್ಲಿ ಲಾಭವಿದೆ. ಶುಭಸಂಖ್ಯೆ:3
ಧನಸ್ಸು ರಾಶಿ: ಸಹೋದ್ಯೋಗಿಗಳಿಂದ ಸಹಾಯ ಸಿಗುತ್ತದೆ. ಸಂಗಾತಿಯೊಂದಿಗೆ ಕಲಹವಾಗಿ ಮನಸ್ಸಿಗೆ ಬೇಸರ. ಕಷ್ಟಜೀವಿಗಳಿಗೆ ಧನ ಲಾಭವಾಗುವುದು. ಆನೈನ್ ವ್ಯವಹಾರದಲ್ಲಿ ಮೋಸ ಹೋಗುವಿರಿ. ಶುಭಸಂಖ್ಯೆ: 9
ಮಕರ ರಾಶಿ: ಕುಟುಂಬದಲ್ಲಿ ಆತಂಕ ಕಾಣಿಸೀತು ಎಚ್ಚರ. ಶಸ್ತ್ರ ಚಿಕಿತ್ಸೆ ಸಾಧ್ಯತೆ ಇದೆ. ಭೂ ಖರೀದಿ ಮಾಡುವಲ್ಲಿ ವಿವಾದವಾಗಲಿದೆ. ಉದ್ಯೋಗ ಬದಲಾವಣೆ ಸಾಧ್ಯತೆ ಇದೆ, ಆದರೆ ಒಳ್ಳೆ ಉದ್ಯೋಗ ಸಿಗುತ್ತದೆ. ಶುಭಸಂಖ್ಯೆ:1
ಕುಂಭ ರಾಶಿ: ಅವಿವಾಹಿತರಿಗೆ ಶುಭ ಸುದ್ದಿ ಸಿಗುತ್ತದೆ. ನವದಂಪತಿಗೆ ತೊಂದರೆಯಾಗುತ್ತದೆ, ಆಟೋ ಚಾಲಕರಿಗೆ ವಿಶೇಷ ದಿನ, ಒಳ್ಳೆ ಲಾಭ ಸಿಗುತ್ತದೆ. ಸಗಟು ವ್ಯಾಪಾರದಲ್ಲಿ ಮೋಸವಾದೀತು. ಶುಭಸಂಖ್ಯೆ: 7
ಮೀನ ರಾಶಿ: ಕುಟುಂಬದ ಸಮಸ್ಯೆಗಳಿಂದ ನಿದ್ರಾಭಂಗ ವಾಗುತ್ತದೆ. ಅಪರಿಚಿತರಿಂದ ಮೋಸ ಹೋಗುವಿರಿ, ಎಚ್ಚರ. ಅಮೂಲ್ಯ ವಸ್ತು ಖರೀದಿಸುವಿರಿ, ಆದರೆ ಕಾಗೆ ಬಂಗಾರಕ್ಕಾಗಿ ಅಪರಂಜಿ ಚಿನ್ನವನ್ನ ಕೈ ಬಿಟ್ಟಿದ್ದೀರಿ. ಶುಭಸಂಖ್ಯೆ:3