ತುಲಾ: ಹೆಚ್ಚು ಮಾತು ಇತರರಿಗೆ ಕಿರಿಕಿರಿ ಉಂಟು ಮಾಡುತ್ತದೆ. ವಸ್ತುವನ್ನು ಕಳೆದುಕೊಳ್ಳುವಿರಿ. ಸಂಗಾತಿಯನ್ನು ದೂರ ಮಾಡಿಕೊಂಡು ಮನೆಯಲ್ಲಿ ಕಷ್ಟವಾದೀತು. ಅಗತ್ಯತೆಗೆ ಅನುಸಾರವಾಗಿ ಕಾರ್ಯ ವಿಭಾಗಿಸಿ. ನಿಮ್ಮನ್ನ ಗುರಿಯಾಗಿಸಿಕೊಂಡು ಸಹೋದ್ಯೋಗಿಗಳು ಕೆಲಸ ಮಾಡುವರು. ನಿಮ್ಮ ಪಾಲಾದ ಭೂಮಿಯು ತಪ್ಪಿ ಹೋಗಬಹುದು.
ವೃಶ್ಚಿಕ: ಸ್ನೇಹಿತರ ಸಹಾಯದಿಂದ ಬಲ ಬರುವುದು. ದೂರದ ಬಂಧುಗಳಾದರೂ ಸಹಾಯವು ಸಿಗಬಹುದು. ದಿನದ ಆರಂಭವು ಬಹಳ ಉತ್ಸಾಹದಿಂದ ಇರುತ್ತದೆ. ಆಸ್ತಿಯ ಖರೀದಿಗೆ ಎರಡು ಮನಸ್ಸು. ಪುಣ್ಯಸ್ಥಳಗಳ ದರ್ಶನದಿಂದ ನೆಮ್ಮದಿ ಸಿಗುವುದು. ನಿಮ್ಮ ಚುರುಕುತನಕ್ಕೆ ಅಚ್ಚರಿ ವ್ಯಕ್ತವಾಗುತ್ತದೆ. ಹೆಚ್ಚಿನ ಜವಾಬ್ದಾರಿ.
ಧನು: ಉದ್ಯೋಗದ ಸ್ಥಳ ಬದಲಾವಣೆ. ಮನೆಯ ಸ್ಥಳವನ್ನು ಬದಲಾವಣೆ. ಬೇರೆ ಕಾರ್ಯಗಳಿಂದ ಹಣವು ಕೈ ಸೇರುವುದು. ಉತ್ಸಾಹಕ್ಕೆ ತೊಂದರೆ ಆಗುವ ಕಡೆ ನೀವು ಇರಬಾರದು. ನಿಮ್ಮ ಕೆಲಸವನ್ನು ಬಿಟ್ಟು ಬೇರೆಯವರ ಕಾರ್ಯದ ಕಡೆ ಗಮನ. ಉದ್ಯೋಗದಲ್ಲಿ ಅಧಿಕ ಲಾಭಕ್ಕಾಗಿ ಶ್ರಮಿರಿಸಿದರೂ ಕಷ್ಟ.
ಮಕರ: ಕೈತಪ್ಪಿ ಹೋದ ಸ್ಥಾನವನ್ನು ಪುನಃ ಪಡೆದುಕೊಳ್ಳುವಿರಿ. ಯಾರಿಗೂ ಸಾಲ ಕೊಡುವುದು ಬೇಡ. ಹಿರಿಯರ ಎದುರು ವಿನಯವಿರಲಿ. ದೇವತಾಕಾರ್ಯಗಳಲ್ಲಿ ಶ್ರದ್ಧೆಯಿಂದ ಭಾಗವಹಿಸುವಿರಿ. ಕಛೇರಿಯಲ್ಲಿ ಅಧಿಕಾರಿಗಳು ಕೆಲಸಕ್ಕೆ ಸಂಬಂಧಿಸಿದಂತೆ ವಾಗ್ವಾದ ಮಾಡಬಹುದು. ಮಕ್ಕಳ ವಿಚಾರದಲ್ಲಿ ದುರ್ಬಲರಾಗುವಿರಿ.
ಕುಂಭ: ಅನ್ಯಸ್ಥಳದಲ್ಲಿ ನಿಮ್ಮ ವಾಸ. ಸುಖವಾದ ಭೋಜನ. ಕೋಪದಲ್ಲಿ ಏನನ್ನಾದರೂ ಹೇಳುವ ಮುನ್ನ ಎಚ್ಚರ. ದೂರದೃಷ್ಟಿಯಿಂದ ಬರುವ ತೊಂದರೆಯನ್ನು ಸರಿಮಾಡಿಕೊಳ್ಳಿ. ಭವಿಷ್ಯದ ಬಗ್ಗೆ ಅಸ್ಪಷ್ಟವಾದ ಚಿಂತೆ ಬೇಡ. ಯಂತ್ರ ವ್ಯಾಪಾರಿಗಳಿಗೆ ಲಾಭದ ದಿನ. ಉತ್ಸಾಹವು ಎಷ್ಟೇ ಇದ್ದರೂ ನೆಮ್ಮದಿಯ ಮನಸ್ಸಿನಿಂದ ನಿರ್ಧಾರಿಸಿ.
ಮೀನ: ಹಿರಿಯರ ಸೇವೆ ಮಾಡಿ. ಅಧಿಕಾರ ಪ್ರಾಪ್ತಿಗೆ ಹೆಚ್ಚಿನ ಓಡಾಟ. ಹೇಳಿದ ಸಮಯಕ್ಕೆ ಕೆಲಸವನ್ನು ಮಾಡಿಕೊಡಲಾಗುವುದು. ನಿಮ್ಮ ಪ್ರಗತಿಗೆ ಶತ್ರುಗಳ ಅಡ್ಡಗಾಲು. ಬೇಸರದಿಂದ ಹೊರಬರಲು ಮಾರ್ಗವನ್ನು ಹುಡುಕಿಕೊಳ್ಳುವಿರಿ. ಕೆಟ್ಟ ಆಲೋಚನೆಗಳನ್ನು ತಲೆಯಿಂದ ತೆಗೆಯಿರಿ.