ಮೇಷ ರಾಶಿ: ವಕೀಲ ವೃತ್ತಿಯವರಿಗೆ ಉತ್ತಮ ಆದಾಯ ಬರಲಿದೆ. ದೈಹಿಕ ವ್ಯಾಯಾಮ ತರಬೇತುದಾರರಿಗೆ ನಷ್ಟವಾಗಲಿದೆ. ಅಮ್ಮನವರಿಗೆ ಪುಷ್ಪಾರ್ಚನೆ ಮಾಡಿಸಿ ಶುಭವಾಗುತ್ತದೆ. ಶುಭಸಂಖ್ಯೆ: 3
ವೃಷಭ ರಾಶಿ: ಸಿನಿಮಾ ಕಲಾವಿದರಿಗೆ ತುಂಬ ಸಂತೋಷ ತರುವ ದಿವಸ ಇದಾಗಿದೆ. ಅಪರಾಧಿ ಮನೋಭಾವನೆ ಕಾಡಲಿದೆ ನಿಮಗೆ. ನಿವೇಶನ ಖರೀದಿಗೆ ನಿರ್ಧಾರ ಮಾಡುವಿರಿ. ಶುಭಸಂಖ್ಯೆ: 8
ಮಿಥುನ ರಾಶಿ: ಆಧ್ಯಾತ್ಮಿಕ ಗುರುಗಳಿಗೆ ಶುಭದಾಯಕ ದಿನವಾಗಿದೆ ಇಂದು. ರಾಜಕಾರಣಿಗಳಿಗೆ ಅಪಘಾತ ಸಾಧ್ಯತೆ ಇದೆ ಎಚ್ಚರಿಕೆ ಅಗತ್ಯ. ಸಾರಿಗೆ ವ್ಯವಹಾರದಲ್ಲಿ ಆತಂಕ ಕಾಡಲಿದೆ ಎಚ್ಚರಿಕೆ ಅಗತ್ಯ. ಶುಭಸಂಖ್ಯೆ: 1
ಕಟಕ ರಾಶಿ: ವಿವಾಹಾಕಾಂಕ್ಷಿಗಳಿಗೆ ಶುಭ ಸುದ್ದಿ ಕೇಳುವಿರಿ. ವಾಹನದಿಂದ ತೊಂದರೆ ಆಗಬಹುದು. ಪತ್ನಿಯ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು. ಆಮದು ರಫ್ತು ವ್ಯವಹಾರದಲ್ಲಿ ಲಾಭ ನಿರೀಕ್ಷಿಸಬಹುದು. ಶುಭಸಂಖ್ಯೆ: 6
ಸಿಂಹ ರಾಶಿ: ವಿವಾಹ ಕಾರ್ಯ ಮುಂದೂಡಿಕೆ ಆಗುವ ಸಾಧ್ಯತೆ ಇದೆ. ಜಿಮ್ ತರಬೇತಿದಾರರಿಗೆ ಅನಿರೀಕ್ಷಿತ ಆದಾಯ ಬರಬಹುದು. ಸರ್ಕಾರಿ ನೌಕರರಿಗೆ ಬಡ್ತಿ ಸಿಗುವ ಅವಕಾಶವಿದೆ. ಶುಭಸಂಖ್ಯೆ: 4
ಕನ್ಯಾ ರಾಶಿ: ಅತಿಯಾದ ಕೋಪ ಇಂದು ಬೇಡ. ವಿನಯದಿಂದ ವರ್ತಿಸಿದರೆ ಇಂದು ಲಾಭ ಪಡೆಯಬಹುದು. ಸದಾ ಕ್ರಿಯಾಶೀಲರಾಗಿರಿ ಲಾಭಗಳಿಸಿ. ಆನೈನ್ ಖರೀದಿಯಲ್ಲಿ ವಂಚನೆಯಾದೀತು ಎಚ್ಚರ. ಶುಭಸಂಖ್ಯೆ: 6
ತುಲಾ ರಾಶಿ: ಶತ್ರುಗಳ ಪರಾಜಯವಾಗುವುದು. ಗಾರ್ಮೆಂಟ್ಸ್ ವ್ಯಾಪಾರದಲ್ಲಿ ಲಾಭ ಗಳಿಕೆ ಸಾಧ್ಯತೆ. ಹಳೆಯ ಸಾಲ ಮರುಪಾವತಿಗೆ ಇಂದು ಶುಭ ದಿನ. ಬ್ಯಾಂಕ್ನಲ್ಲಿ ಇಂದು ಸಾಲ ಸಿಗಲಿದೆ. ಶುಭಸಂಖ್ಯೆ: 2
ವೃಶ್ಚಿಕ ರಾಶಿ: ಸ್ಪರ್ಧಾತ್ಮಕ ಪರೀಕ್ಷೆ ವಿದ್ಯಾರ್ಥಿಗಳಿಗೆ ಉನ್ನತ ಅಧ್ಯಯನಕ್ಕಾಗಿ ಪ್ರವಾಸ ಯೋಗ ಕೂಡಿ ಬರಬಹುದು, ತಾಂತ್ರಿಕ ವಿದ್ಯಾರ್ಥಿಗಳಿಗೆ ಉನ್ನತ ಸ್ಥಾನ ಸಿಗುತ್ತದೆ. ಆದಾಯಕ್ಕೆ ತಕ್ಕ ಖರ್ಚು ಇರಲಿದೆ. ಶುಭಸಂಖ್ಯೆ: 6
ಧನುಸ್ಸು ರಾಶಿ: ಕೆಲಸದ ನಿರೀಕ್ಷೆಯಲ್ಲಿ ಇರುವವರಿಗೆ ಇಂದು ಉದ್ಯೋಗ ಲಭಿಸುವುದು. ವಧು-ವರಾನ್ವೇಷಣ ಕೇಂದ್ರದವರಿಗೆ ಆದಾಯ ನಿರೀಕ್ಷೆ. ಕೀರ್ತಿ ಪ್ರತಿಷ್ಠೆಗಳು ಇಂದು ನಿಮಗೆ ಹೆಚ್ಚುತ್ತವೆ. ಶುಭಸಂಖ್ಯೆ: 4
ಮಕರ ರಾಶಿ: ಆಹಾರ ಪದಾರ್ಥಗಳ ವ್ಯಾಪಾರದಲ್ಲಿ ಹಾಗೂ ಚಿಲ್ಲರೆ ವ್ಯಾಪಾರದಲ್ಲಿ ಉತ್ತಮ ಆದಾಯ ಸಿಗಲಿದೆ. ವಾಹನ ಮಾರಾಟದಲ್ಲಿ ಮಂದಗತಿ ಇರುತ್ತದೆ. ಸಂಗಾತಿಗೆ ಆರೋಗ್ಯ ಸಮಸ್ಯೆ ಕಾಡಬಹುದು. ಶುಭಸಂಖ್ಯೆ: 2
ಕುಂಬ ರಾಶಿ: ಕೃಷಿಕರಿಗೆ ಯಂತ್ರೋಪಕರಣಗಳ ಖರೀದಿಯಲ್ಲಿ ನಷ್ಟವಾಗುತ್ತದೆ. ವಿದ್ಯಾರ್ಥಿಗಳಿಗೆ ಯಶಸ್ಸು ಲಭಿಸುವುದು. ಕೆಲಸಗಳ ಬಗ್ಗೆ ಹೆಚ್ಚಿನ ಗಮನ ತೀರ ಅಗತ್ಯವಿದೆ. ರೈತರಿಗೆ ಇಂದು ಅಲ್ಪ ಲಾಭ. ಶುಭಸಂಖ್ಯೆ: 3
ಮೀನ ರಾಶಿ: ಕೋರ್ಟು ಕಚೇರಿ ಕೆಲಸಗಳು ಸ್ಥಗಿತವಾಗುವುದು. ಹಿಡಿದ ಕಾರ್ಯದಲ್ಲಿ ಧೈರ್ಯದಿಂದ ಮುನ್ನುಗಿದರೆ ಯಶಸ್ಸು. ನನೆಗುದಿಗೆ ಬಿದ್ದ ಕೆಲಸಕ್ಕೆ ಮರುಚಾಲನೆ ಸಿಗಲಿದೆ. ಶುಭಸಂಖ್ಯೆ:9