ಸನಾತನ ಹಿಂದೂ ಧರ್ಮದ ಸಪ್ತ ಚಿರಂಜೀವಿಗಳಲ್ಲಿ ಹನುಮಂತನು ಸಹ ಒಬ್ಬ. ಸೀತಾದೇವಿಯಿಂದ ಅಮರತ್ವದ ವರವನ್ನು ಪಡೆದ ನಂತರ ಹನುಮಂತನು ತನ್ನ ಪವಿತ್ರ ಸ್ಥಳವನ್ನು ಆಯ್ಕೆ ಮಾಡಿಕೊಂಡನು. ಹನುಮಂತನು ಈ ಭೂಮಿಯಲ್ಲಿ ಎಲ್ಲಿ ವಾಸಿಸುತ್ತಾನೆ ಎಂಬುವುದನ್ನು ಹನುಮಾನ್ ಚಾಲೀಸಾದಲ್ಲಿ ಬರುವ ‘ಸಂಕಟ ಕಟ್ ಮಿತೆ ಸಬ್ ಪಿರಾ, ಜೋ ಸುಮಿರೆ ಹನುಮತ್ ಬಲ್ಬೀರಾ’ ಸಾಲುಗಳು ಹೇಳುತ್ತೆ. ಹನುಮಂತನನ್ನು ಸ್ಮರಿಸುವುದರಿಂದ ಜೀವನ ಎಲ್ಲ ತೊಂದರೆಗಳು ಪರಿಹಾರವಾಗುತ್ತವೆ ಎಂದು ಹೇಳಲಾಗುತ್ತದೆ. ಹನುಮಂತನನ್ನ ಕಲಿಯುಗದ ಅತ್ಯಂತ ಪರಿಪೂರ್ಣ ದೇವರು ಅಂತ ಕರೆಯಲಾಗುತ್ತದೆ. ಭಗವಾನ್ ರಾಮ ಮತ್ತು ಸೀತಾದೇವಿಯ ಸೇವೆಯಲ್ಲಿದ್ದ ಹನುಮಂತನು ಅವರಿಂದ ಅಮರತ್ವದ ವರವನ್ನು ಪಡೆದನು ಎಂದು ನಂಬಲಾಗಿದೆ. ಇವತ್ತಿಗೂ ಕೂಡ ಹನುಮಂತನು ಭೂಮಿಯ ಮೇಲೆ ವಾಸಿಸಿದ್ದಾನೆ ಎಂದು ಹೇಳಲಾಗುತ್ತದೆ.
ಎಲ್ಲಿ ವಾಸವಾಗಿದ್ದಾನೆ ನಮ್ಮ ಭಜರಂಗಿ ?
ಸನಾತನ ಧರ್ಮದ ನಂಬಿಕೆಯ ಪ್ರಕಾರ ಸೀತಾದೇವಿಯಿಂದ ಅಮರತ್ವದ ವರವನ್ನು ಪಡೆದ ನಂತರ ಪವನ ಪುತ್ರನು ಭೂಮಿಯ ಮೇಲಿನ ಪವಿತ್ರ ಸ್ಥಳವನ್ನು ತನ್ನ ನಿವಾಸವನ್ನಾಗಿ ಆರಿಸಿಕೊಂಡನು. ಶ್ರೀಮದ್ ಭಗವದ್ ಪುರಾಣದ ಪ್ರಕಾರ ಈ ಸ್ಥಳವು ಗಂದಮಾನದ ಪರ್ವತವಾಗಿದೆ. ಈ ಪರ್ವತವು ಕೈಲಾಸ ಪರ್ವತದ ಉತ್ತರ ದಿಕ್ಕಿನಲ್ಲಿದೆ. ಈ ಸ್ಥಳದಲ್ಲಿ ಮಹರ್ಷಿ ಕಶ್ಯಪ ತಪಸ್ಸು ಮಾಡಿದ್ದರು ಎಂದು ಹೇಳಲಾಗುತ್ತದೆ.