ಹಿಂದು ಧರ್ಮದ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಮುಸ್ಲಿಂ ಧರ್ಮಕ್ಕೆ ಮತಾಂತರವಾಗು, ಇಲ್ಲಾ ನಿನ್ನನ್ನು ಓಡಿಸಿಕೊಂಡು ಹೋಗಿ ಮದುವೆ ಮಾಡಿಕೊಳ್ಳುತ್ತೇನೆ ಎಂದು ಲೈಂಗಿಕ ದೌರ್ಜನ್ಯ ಎಸಗಿ ಹಾಗೂ ಮತಾಂತರಕ್ಕೆ ಯತ್ನಿಸಿದ ಇಬ್ಬರು ಆರೋಪಿಗಳ ವಿರುದ್ಧ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದ ಮೆಹಬೂಬಅಲಿ ಬಾಬುಸಾಬ್ ನದಾಫ್ (28) ಹಾಗೂ ಈತನ ಸ್ನೇಹಿತ ಸೋಯೆಲಸಾಬ ಖಾಸೀಮಸಾಬ ಮೆಳ್ಳಳ್ಳಿ (20) ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣದ 1ನೇ ಆರೋಪಿ ಮೆಹಬೂಬ ಅಲಿ ಎಂಬುವನು 16 ವರ್ಷದ ಅಪ್ರಾಪ್ತಳು ಕಾಲೇಜ್ ಗೆ ಹೋಗುವಾಗ, ಬರುವಾಗ ದಾರಿಯಲ್ಲಿ ಅಡ್ಡಗಟ್ಟಿ ನಿಂತು “ನೀನು ಮುಸ್ಲಿಮಳಾಗು, ನಿನ್ನನ್ನು ಓಡಿಸಿಕೊಂಡು ಹೋಗಿ ಮದುವೆ ಮಾಡಿಕೊಂಡು ಬೇರೆ ಊರಲ್ಲಿ ಇಟ್ಟುಕೊಳ್ಳುತ್ತೇನೆ’ ಎಂದು ಪೀಡಿಸುತ್ತಿದ್ದ.
ಅಲ್ಲದೆ ಸ್ನೇಹಿತ ಸೋಯೆಲ ಸಾಬನನ್ನು ಕರೆದುಕೊಂಡು ಬಂದ ಮೆಹಬೂಬ ಅಲಿ, ಕಾಲೇಜ್ ಗೆ ಹೋಗುತ್ತಿದ್ದ ಅಪ್ರಾಪ್ತಳನ್ನು ತಡೆದು ಆಟೋರಿಕ್ಷಾದಲ್ಲಿ ಹತ್ತು ಇಲ್ಲವಾದರೆ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿ ಆಕೆಯನ್ನು ಅಪಹರಿಸಿಕೊಂಡು ಹೋಗಿದ್ದಾನೆ. ಇದನ್ನು ಗಮನಿಸಿದ ಶ್ರೀರಾಮ ಸೇನೆ ಕಾರ್ಯಕರ್ತರು ಇಬ್ಬರನ್ನೂ ಠಾಣೆಗೆ ಕರೆತಂದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೋಲೀಸರು ಆರೋಪಗಳನ್ನು ವಶಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗಳ ವಿರುದ್ಧ ಪೋಕ್ಸೋ, ಅಪಹರಣ, ಮತಾಂತರಕ್ಕೆ ಯತ್ನ ಸೇರಿ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಾಗಿದೆ.