- ಕೆಮ್ಮು ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವ್ಯಕ್ತಿ
- ಗಂಟಲಿನ ಒಳಭಾಗದಲ್ಲಿ ಕೂದಲು ಬೆಳೆದಿರುವುದು ಪರೀಕ್ಷೆಯಿಂದ ಕಂಡು ಬಂದಿದೆ
- ಶಸ್ತ್ರ ಚಿಕಿತ್ಸೆಯ ಮೂಲಕ ಹೊರ ತೆಗೆದ ವೈದ್ಯರು
ಧೂಮಪಾನದಿಂದ ಆರೋಗ್ಯಕ್ಕೆ ಡೇಂಜರ್ ಅಂತ ಎಲ್ಲರಿಗೂ ಗೊತ್ತೆ ಇದೆ. ಆದರೆ ಇದೇ ಧೂಮಪಾನ ಚಟ ವಿಚಿತ್ರ ರೋಗವನ್ನ ತಂದ್ದೊಡಿದ್ರೆ.? ಹೌದು ಇಂತದೊಂದು ವಿಲಕ್ಷಣ ಘಟನೆಯೂ ಆಸ್ಟ್ರೀಯಾ ದೇಶದಲ್ಲಿ ನಡೆದಿದೆ. ಆಸ್ಟ್ರಿಯಾದಲ್ಲಿ 55 ವರ್ಷದ ಓರ್ವ ವ್ಯಕ್ತಿ 1990 ರಿಂದ ಸಿಗರೇಟ್ ಸೇದುವ ಅಭ್ಯಾಸ ಹೊಂದಿದ್ದರು. 2007ರಲ್ಲಿ ನಿರಂತರ ಕೆಮ್ಮು ಹಾಗೂ ಉಸಿರಾಟದ ತೊಂದರೆ ಉಂಟಾಗಿ ವೈದ್ಯರನ್ನು ಭೇಟಿ ಮಾಡಿದ್ದರು. ವೈದ್ಯರು ಪರಿಶೀಲನೆ ಮಾಡಿದಾಗ ಗಂಟಲಿನ ಒಳಭಾಗದಲ್ಲಿ ಅನೇಕ ಸಣ್ಣಪುಟ್ಟ ಕಪ್ಪು ಕೂದಲುಗಳು ಬೆಳೆದಿರುವುದು ಪರೀಕ್ಷೆ ವೇಳೆ ಕಂಡು ಬಂದಿದೆ. ಇದನ್ನು ನೋಡಿ ವೈದ್ಯರು ಬೆಚ್ಚಿಬಿದ್ದಿದ್ದಾರೆ. ರೋಗಿಗೆ ಔಷಧಿ ನೀಡಿದರೂ ಪ್ರಯೋಜನ ಆಗಲಿಲ್ಲ. ಬಳಿಕ ಶಸ್ತ್ರ ಚಿಕಿತ್ಸೆಯ ಮೂಲಕ ತೆಗೆದಿದ್ದಾರೆ.
ಇದಾದ ನಂತರವೂ ರೋಗಿಯ ಕುತ್ತಿಗೆಯಲ್ಲಿ 14 ವರ್ಷಗಳವರೆಗೂ ಕೂದಲು ಬೆಳೆಯುತ್ತಲೇ ಇತ್ತು . ಧೂಮಪಾನದಿಂದ ಗಂಟಲಿನಲ್ಲಿ ಊತ ಕಾಣಿಸಿಕೊಂಡಿದೆ. ಇದರಿಂದಾಗಿ ಜೀವಕೋಶಗಳು ಸಣ್ಣ ಕೂದಲುಗಳಾಗಿ ಪರಿವರ್ತನೆಯಾಗಿದೆ. ಈ ಕೂದಲು 6-9 ಇಂಚುಗಳವರೆಗೆ ಬೆಳೆಯುತ್ತದೆ. ಮತ್ತು ಕೆಲವೊಮ್ಮೆ ಬಾಯಿಯನ್ನು ತಲುಪಬಹುದು. ರೋಗಿ 2020ರಲ್ಲಿ ಧೂಮಪಾನ ತೊರೆದಿದ್ದು ಆತನಿಗೆ ಎಂಡೋಸ್ಕೋಪಿಕ್ ಪ್ಲಾಸ್ಮಾ ಎಂಬ ಚಿಕಿತ್ಸೆಯನ್ನು ಪ್ರಾರಂಭಿಸಲಾಯಿತು. ಈ ಚಿಕಿತ್ಸೆಯಲ್ಲಿ ಕೂದಲು ಬೆಳೆಯುವ ಮಾರ್ಗ ಮುಚ್ಚಲಾಗುತ್ತದೆ. ಸತತ ಚಿಕಿತ್ಸೆಯ ಫಲವಾಗಿ ಈ ವ್ಯಕ್ತಿ ಸಮಸ್ಯೆಯಿಂದ ಮುಕ್ತನಾಗಿದ್ದಾನೆ. ಧೂಮಪಾನ ಮನುಷ್ಯನ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಅನ್ನೋದನ್ನ ಘಟನೆ ಮತ್ತೊಮ್ಮೆ ಸಾಕ್ಷಿಯಾಗಿದೆ.