ಪ್ರಧಾನಿ ನರೇಂದ್ರ ಮೋದಿ 40 ವರ್ಷಗಳ ಬಳಿಕ ಆಸ್ಟ್ರಿಯಾಗೆ ತೆರಳಿದ್ದು ಅಲ್ಲಿ ಅವರಿಗೆ ಭವ್ಯ ಸ್ವಾಗತ ದೊರೆತಿದೆ. ಭಾರತ ಮೂಲದ ಕಲಾವಿದರೊಬ್ಬರು ವಂದೇ ಮಾತರಂ ಗಾಯನದ ಮೂಲಕ ಮೋದಿಯವರಿಗೆ ಸ್ವಾಗತ ಕೋರಿದ್ದಾರೆ.
ರಷ್ಯಾ ಪ್ರವಾಸದ ಬಳಿಕ ಪ್ರಧಾನಿ ನರೇಂದ್ರ ಮೋದಿ ಇದೀಗ ಐರೋಪ್ಯ ರಾಷ್ಟ್ರ ಆಸ್ಟ್ರಿಯಾ ತಲುಪಿದ್ದಾರೆ. ವಿಮಾನದಿಂದ ಇಳಿದ ತಕ್ಷಣ ಅವರಿಗೆ ಭವ್ಯ ಸ್ವಾಗತ ದೊರೆತಿದೆ. ಮೋದಿಯನ್ನು ಸ್ವಾಗತಿಸಲು ಆಸ್ಟ್ರಿಯಾದ ವಿದೇಶಾಂಗ ಸಚಿವ ಅಲೆಕ್ಸಾಂಡರ್ ಶಾಲೆನ್ಬರ್ಗ್ ಸ್ವತಃ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.
ವಿಯೆನ್ನಾದಲ್ಲಿ ಆಸ್ಟ್ರೀಯಾದ ಕಲಾವಿದರು ಪ್ರಧಾನಿಯವರನ್ನು ಸ್ವಾಗತಿಸಿ ‘ವಂದೇ ಮಾತರಂ’ ಗೀತೆ ಮೂಲಕ ಸ್ವಾಗತಿಸಿದರು. ಈ ಆಸ್ಟ್ರಿಯನ್ ಆರ್ಕೆಸ್ಟ್ರಾ ತಂಡದ ಅದ್ಭುತ ಪ್ರಸ್ತುತಿಯ ವೀಡಿಯೊವನ್ನು ಪ್ರಧಾನಿ ಮೋದಿ ತಮ್ಮ ಎಕ್ಸ್ ಹ್ಯಾಂಡಲ್ನಲ್ಲಿ ಹಂಚಿಕೊಂಡಿದ್ದಾರೆ.