ಸಮೀಪದೃಷ್ಟಿ ಎಂಬುದು ಜಾಗತಿಕ ಸಾಂಕ್ರಾಮಿಕ ರೋಗವಾಗಿ ಕಾಣಿಸಿಕೊಳ್ಳುತ್ತಿದ್ದು, 2050ನೇ ಇಸವಿಯ ಹೊತ್ತಿಗೆ ವಿಶ್ವದ ಶೇಕಡಾ 50ರಷ್ಟು ಜನಸಂಖ್ಯೆಯ ಮೇಲೆ ಇದರ ಪರಿಣಾಮ ಆಗಬಹುದು ಎಂದು ಅಂದಾಜಿಸಲಾಗಿದೆ. ಭಾರತದಲ್ಲಿಯಂತೂ ನಿರ್ದಿಷ್ಟವಾಗಿ ಮಕ್ಕಳಲ್ಲಿ ಈ ಸಮಸ್ಯೆಯು ಕಾಣಿಸಿಕೊಳ್ಳುವುದು ಆತಂಕಕ್ಕೆ ಕಾರಣವಾಗಿದೆ. ಕೋವಿಡ್ ನಂತರದಲ್ಲಿಯಂತೂ ಎಂಟು ವರ್ಷದೊಳಗಿನ ಮಕ್ಕಳಲ್ಲಿ ಈ ಸಮೀಪ ದೃಷ್ಟಿ ಸಮಸ್ಯೆ ಜಾಸ್ತಿಯಾಗಿದೆ. ತುರ್ತಾಗಿ ಜಾಗೃತಿ ಮೂಡಿಸುವುದು ಮತ್ತು ಮುಂಜಾಗ್ರತಾ ಕ್ರಮಗಳು ಎಷ್ಟು ಅಗತ್ಯ ಎಂಬುದನ್ನು ಈ ಟ್ರೆಂಡ್ ತೋರಿಸುತ್ತದೆ.
ಮಕ್ಕಳಲ್ಲಿ ಸಮೀಪದೃಷ್ಟಿಗೆ ಕಾರಣ ಆಗುತ್ತಿರುವ ಅಪಾಯಕಾರಿ ಅಂಶವೆಂದರೆ, ವಂಶವಾಹಿ, ಹೆಚ್ಚಿದಂಥ ಹತ್ತಿರದ ಚಟುವಟಿಕೆಗಳು, ಹೊರಾಂಗಣ ಆಟದಲ್ಲಿ ಕಡಿಮೆಯಾಗಿರುವುದು, ಸ್ಕ್ರೀನ್ ಗಳನ್ನು ನೋಡುವುದರಲ್ಲೇ ಹೆಚ್ಚಿನ ಸಮಯ ಕಳೆಯುವುದು ಹಾಗೂ ಪೌಷ್ಟಿಕಾಂಶಗಳ ಕೊರತೆ ಇವೆಲ್ಲವೂ ಆಗಿವೆ. ಇದನ್ನು ಆರಂಭದ ವಯಸ್ಸಿನಲ್ಲಿಯೇ ಗುರುತಿಸಿ, ನಿರ್ವಹಿಸದಿದ್ದಲ್ಲಿ ಗಂಭೀರವಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹೆಚ್ಚಿನ ಸಮೀಪ ದೃಷ್ಟಿ ಸಮಸ್ಯೆಯು ಕಣ್ಣಿನ ಪೊರೆ, ರೆಟಿನಲ್ ಬೇರ್ಪಡುವಿಕೆ ಮತ್ತು ಗ್ಲುಕೋಮಾಗೆ ಕೂಡ ಕಾರಣವಾಗಬಹುದು. ಆರಂಭದಲ್ಲೇ ಸಮಸ್ಯೆಯನ್ನು ಕಂಡುಹಿಡಿಯುವುದು ಮತ್ತು ನಿಯಂತ್ರಣ ಕಾರ್ಯತಂತ್ರವು ಮಕ್ಕಳ ದೃಷ್ಟಿಯನ್ನು ಕಾಪಾಡಿಕೊಳ್ಳುವುದು, ಶಾಲೆಯಲ್ಲಿ ವಿಶ್ವಾಸದಿಂದ ಇರುವುದು, ಕ್ರೀಡೆ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದಕ್ಕೆ ಅವರನ್ನು ಸಕ್ರಿಯಗೊಳಿಸುತ್ತದೆ.
ರಾಷ್ಟ್ರೀಯ ಸಮೀಪ ದೃಷ್ಟಿ ಸಪ್ತಾಹದಲ್ಲಿ (ನವೆಂಬರ್ 14-20, 2024), ನಾರಾಯಣ ನೇತ್ರಾಲಯದಿಂದ ಜಾಗೃತಿ ಅಭಿಯಾನದಲ್ಲಿ ತೊಡಗಿಕೊಳ್ಳಲಾಗುತ್ತಿದೆ. ಅದು “ಸ್ಪಿನ್ ದ ವ್ಹೀಲ್” ಎಂಬ ಆಟ ಮತ್ತು ಸೂಪರ್ ಹೀರೋ ಥೀಮ್ ಒಳಗೊಂಡ ಇತರರಿಗೆ ಸಹಾಯ ಮಾಡುವ ಮೂಲಕವಾಗಿದೆ. ಇದರಲ್ಲಿ ಸಮೀಪದೃಷ್ಟಿ ತಡೆಗೆ ಸಂಬಂಧಿಸಿದಂತೆ ಸಂದೇಶ ಸಾರಲಾಗುತ್ತದೆ. ಈ ಅಭಿಯಾನದಲ್ಲಿ ಬಹಳ ಮುಖ್ಯವಾಗಿ ಸರಳ ಮತ್ತು ಪರಿಣಾಮಕಾರಿ ಅಭ್ಯಾಸಗಳ ಬಗ್ಗೆ ಒತ್ತಿ ಹೇಳಲಾಗುತ್ತದೆ. ಹೊರಾಂಗಣದಲ್ಲಿ ಆಟವಾಡುವುದು, ಸ್ಕ್ರೀನ್ ನೋಡುವ ಸಮಯ ಕಡಿಮೆ ಮಾಡುವುದು, ಆರೋಗ್ಯಪೂರ್ಣ ಆಹಾರ ಸೇವನೆ ಮಾಡುವುದು ಮತ್ತು ನಿಯಮಿತವಾಗಿ ಕಣ್ಣಿನ ಚೆಕ್ ಅಪ್ ಮಾಡಿಸುವುದಾಗಿದೆ. ಸೂಪರ್ ಹೀರೋಗಳು ಎಂದು ಜನರ ಮಧ್ಯೆ ಗುರುತಿಸಿಕೊಂಡವರನ್ನು ಪ್ರಚಾರ ರಾಯಭಾರಿಗಳನ್ನಾಗಿ ಆರಿಸಿ, ಅವರ ಮೂಲಕವಾಗಿ ಮಕ್ಕಳ ಲಕ್ಷ್ಯವನ್ನು ಸೆಳೆದು, ಸಕಾರಾತ್ಮಕ ಬದಲಾವಣೆಗೆ ಪ್ರೋತ್ಸಾಹಿಸಲಾಗುತ್ತದೆ, ಆರೋಗ್ಯಪೂರ್ಣ ಕಣ್ಣಿನ ಸುರಕ್ಷೆಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಅವರನ್ನು ಉತ್ತೇಜಿಸಲಾಗುತ್ತದೆ.
ಸಮೀಪದೃಷ್ಟಿ ಕ್ಲಿನಿಕ್, ಅತ್ಯಾಧುನಿಕ ಸಂಶೋಧನೆ ಮತ್ತು ಸಮೀಪದೃಷ್ಟಿ ನಿಯಂತ್ರಣ ತಂತ್ರಗಳೊಂದಿಗೆ ಸಮೀಪದೃಷ್ಟಿಯ ವಿರುದ್ಧ ಹೋರಾಡುವಲ್ಲಿ ನಾರಾಯಣ ನೇತ್ರಾಲಯವು ಮುಂಚೂಣಿಯಲ್ಲಿದೆ. ಕರ್ನಾಟಕದಲ್ಲಿಯೇ ಇದು ಮೊದಲ ಸಮೀಪ ದೃಷ್ಟಿದೋಷದ ಕ್ಲಿನಿಕ್ ಆಗಿ, ಸಮೀಪದೃಷ್ಟಿ ಮಾಸ್ಟರ್ ಅಳವಡಿಸಲಾಯಿತು- ಇದು ಬಯೋಮೆಟ್ರಿಕ್ ಅಳತೆ ಪಡೆಯುವುದಕ್ಕೆ ಸಹಾಯ ಮಾಡುತ್ತದೆ. ಇದರಿಂದಾಗಿ ಮಕ್ಕಳಿಗೆ ಹದಿನೆಂಟು ವರ್ಷ ತುಂಬುವ ತನಕ ಸಮೀಪ ದೃಷ್ಟಿಯ ಬೆಳವಣಿಗೆ ಹೇಗಾಗಬಹುದು ಎಂಬುದನ್ನು ಅಂದಾಜಿಸುವುದಕ್ಕೆ ಸಹಾಯ ಆಗುತ್ತದೆ. ಇದು ಅಂಥ ಮಕ್ಕಳಲ್ಲಿನ ತಂದೆ- ತಾಯಿಗಳುಗೆ ಶೈಕ್ಷಣಿಕ ಸಾಧನದಂತೆಯೂ ಸೇವೆ ನೀಡುತ್ತದೆ. ಅದರ ಆರ್ಟಿಫಿಷಿಯಲ್ ಆಧಾರಿತವಾದ ಪ್ರಶ್ನೋತ್ತರ ಸಾಫ್ಟ್ ವೇರ್ ಮೂಲಕವಾಗಿ ಆಯಾ ವ್ಯಕ್ತಿಯ ಜೀವನಶೈಲಿಗೆ ತಕ್ಕಂತೆ ಶಿಫಾರಸುಗಳನ್ನು ಮಾಡುತ್ತದೆ.
ಒಂದು ವೇಳೆ ಯಾವುದೇ ಮಧ್ಯಪ್ರವೇಶ ಇಲ್ಲದಿದ್ದಲ್ಲಿ ಸಮೀಪದೃಷ್ಟಿಯ ಹರಡುವಿಕೆಯು ತೀವ್ರವಾಗಿ ಏರುವ ನಿರೀಕ್ಷೆಯಿದೆ. ಪೋಷಕರು, ಶಿಕ್ಷಕರು ಮತ್ತು ಶಾಲೆಗಳ ಸಹಯೋಗದಿಂದ ಹೆಚ್ಚಿನ ಅರಿವು ಮತ್ತು ಬೆಂಬಲದೊಂದಿಗೆ ಸಮೀಪದೃಷ್ಟಿ ತಡೆಗಟ್ಟುವಿಕೆಯನ್ನು ಸಮುದಾಯದ ಪ್ರಯತ್ನವಾಗಿ ಮಾಡಲು ನಾರಾಯಣ ನೇತ್ರಾಲಯವು ಬದ್ಧವಾಗಿದೆ. ಮಕ್ಕಳು ಕನ್ನಡಕದ ಅಗತ್ಯವಿಲ್ಲದೇ ಬೆಳೆಯುವ ಮತ್ತು ಆರೋಗ್ಯಕರ ದೃಷ್ಟಿಯನ್ನು ಆನಂದಿಸುವ ಭವಿಷ್ಯ ನಾರಾಯಣ ನೇತ್ರಾಲಯದ ಗುರಿಯಾಗಿದೆ.