ಆಯುಷ್ಮಾನ್ ಭಾರತ್ ಪಿಎಂ ಜನ್ ಆರೋಗ್ಯ ಯೋಜನೆಯನ್ನು ಸರ್ಕಾರ 70 ವರ್ಷ ವಯಸ್ಸು ದಾಟಿದ ಎಲ್ಲಾ ವ್ಯಕ್ತಿಗಳಿಗೂ ವಿಸ್ತರಿಸಿದೆ. ಈ ಸ್ಕೀಮ್ನಲ್ಲಿ ಹಿರಿಯ ನಾಗರಿಕರಿಗೆ ವರ್ಷಕ್ಕೆ 5 ಲಕ್ಷ ರೂವರೆಗೆ ಇನ್ಷೂರೆನ್ಸ್ ಕವರೇಜ್ ಸಿಗುತ್ತದೆ. ವೃದ್ಧರು ಈ ಯೋಜನೆಗೆ ನೊಂದಾಯಿಸುವುದು ಬಹಳ ಸುಲಭ. ಹಿರಿಯ ನಾಗರಿಕರಿಗೆ ಆಧಾರ್ ಕಾರ್ಡ್, ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಇದ್ದರೆ ಸಾಕು ಆನ್ಲೈನ್ನಲ್ಲಿ ಯೋಜನೆಗೆ ರಿಜಿಸ್ಟರ್ ಮಾಡಬಹುದು.
- ನ್ಯಾಷನಲ್ ಹೆಲ್ತ್ ಅಥಾರಿಟಿಯ ಅಧಿಕೃತ ವೆಬ್ಸೈಟ್ ಅಥವಾ ಆಯುಷ್ಮಾನ್ ಆ್ಯಪ್ನಲ್ಲಿ ಹಿರಿಯ ನಾಗರಿಕರು ಆಯುಷ್ಮಾನ್ ಕಾರ್ಡ್ಗೆ ಅರ್ಜಿ ಸಲ್ಲಿಸಬಹುದು.
- ಪೋರ್ಟಲ್ಗೆ ಹೋಗಿ ನಿಮ್ಮ ಫೋನ್ ನಂಬರ್ ನಮೂದಿಸಬೇಕು. ಕ್ಯಾಪ್ಚಾ ಮತ್ತು ಒಟಿಪಿ ಹಾಕಿ ಲಾಗಿನ್ ಆಗಬೇಕು.
- ಮುಖ್ಯಪುಟದಲ್ಲಿ ಹಿರಿಯ ನಾಗರಿಕರಿಗೆ ಎನ್ರೋಲ್ಮೆಂಟ್ ಮಾಡುವ ಬ್ಯಾನರ್ ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ನಿಮ್ಮ ರಾಜ್ಯ, ಜಿಲ್ಲೆ ಮತ್ತು ಆಧಾರ್ ನಂಬರ್ ಮಾಹಿತಿಯನ್ನು ಭರ್ತಿ ಮಾಡಿ.
- ಆಧಾರ್ ಒಟಿಪಿ ಒದಗಿಸಿ ಕೆವೈಸಿ ವೆರಿಫಿಕೇಶನ್ ಮಾಡಿ.
- ಇತ್ತೀಚಿನ ಭಾವಚಿತ್ರವನ್ನು ಅಪ್ಲೋಡ್ ಮಾಡಿ.
- ಅನುಮೋದನೆಯಾದ ಬಳಿಕ ಕೇವಲ 15 ನಿಮಿಷದಲ್ಲಿ ಆಯುಷ್ಮಾನ್ ವಯ ವಂದನ ಕಾರ್ಡ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಮೊಬೈಲ್ ಆ್ಯಪ್ ಮೂಲಕ ಕಾರ್ಡ್ ಡೌನ್ಲೋಡ್ ಮಾಡುವ ವಿಧಾನ:
- ಆಯುಷ್ಮಾನ್ ಆ್ಯಪ್ ಅನ್ನು ನಿಮ್ಮ ಮೊಬೈಲ್ಗೆ ಡೌನ್ಲೋಡ್ ಮಾಡಿ.
- ಮೊಬೈಲ್ ನಂಬರ್ ನಮೂದಿಸಿ, ಕ್ಯಾಪ್ಚಾ ಮತ್ತು ಒಟಿಪಿ ಹಾಕಿ ಬೆನಿಫಿಶಿಯರಿಯಾಗಿ ಲಾಗಿನ್ ಆಗಿ.
- ಆಧಾರ್ ಮಾಹಿತಿ ಒದಗಿಸಿ.
- ಇತ್ತೀಚಿನ ಫೋಟೋ ಅಪ್ಲೋಡ್ ಮಾಡಿ.
- ನಿಮ್ಮ (ಫಲಾನುಭವಿ) ಹಾಗು ಕುಟುಂಬದ ಇತರ ಸದಸ್ಯರ ವಿವರಗಳನ್ನು ತುಂಬಿರಿ. ಬಳಿಕ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿ.
- ನೊಂದಣಿ ಯಶಸ್ವಿಯಾದ ಬಳಿಕ ಆಯುಷ್ಮಾನ್ ವಯ ವಂದನ ಕಾರ್ಡ್ ಅನ್ನು ಡೌನ್ಲೋಡ್ ಮಾಡಿ.
ವಯೋವೃದ್ಧರಿಗೆ ಖಾಸಗಿಯಾಗಿ ಇನ್ಷೂರೆನ್ಸ್ ಕವರೇಜ್ ಹೊಂದಿದ್ದರೂ ಆಯುಷ್ಮಾನ್ ಕಾರ್ಡ್ ಅನ್ನು ಉಪಯೋಗಿಸಬಹುದು. ಈ ಸ್ಕೀಮ್ನಲ್ಲಿ ಸರ್ಕಾರಿ ಆಸ್ಪತ್ರೆಗಳು ಮಾತ್ರವಲ್ಲ ಹಲವು ಖಾಸಗಿ ಆಸ್ಪತ್ರೆಗಳೂ ಎನ್ಲಿಸ್ಟ್ ಆಗಿವೆ. ಯಾವ ಆಸ್ಪತ್ರೆಯಲ್ಲಾದರೂ ಕ್ಯಾಷ್ಲೆಸ್ ಆಗಿ ಚಿಕಿತ್ಸೆ ಪಡೆಯಬಹುದು.