ಏರ್ ಶೋ ಪ್ರದರ್ಶನಕ್ಕೆ ದಿನಗಣನೆ ಶುರುವಾಗಿದ್ದು, ಸಿಟಿ ಜನರು ಕಾತುದರಿಂದ ಕಾಯ್ತಿದ್ದಾರೆ. ಇದರ ಮಧ್ಯ ಬಿಬಿಎಂಪಿಯೂ ಏರೋ ಶೋಗೆ ಸಿದ್ದತೆ ನಡೆಸಿದೆ. ಮಾಂಸ ಮಾರಾಟ, ಕ್ರೈನ್ ಬಳಕೆ ನಿಷೇಧ ಮಾಡಿದೆ.
ಫೆ.10 ರಿಂದ 14 ರವರೆಗೂ ನಗರದ ಯಲಹಂಕ ಏರ್ಬೇಸ್ನಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಆಯೋಜಿಸಲಾಗಿದೆ. ಇಂತಹ ಹೈವೋಲ್ಟೇಜ್ ಕಾರ್ಯಕ್ರಮದಲ್ಲಿ ಯಾರಿಗೂ ಸಮಸ್ಯೆಯಾಗದಂತೆ ಬಿಬಿಎಂಪಿ ಕೂಡ ಎಚ್ಚರ ವಹಿಸುತ್ತಿದೆ. 50 ಕ್ಕೂ ಹೆಚ್ಚಿನ ಬೇರೆ ದೇಶಗಳಿಂದ ಸಾವಿರಾರು ಪ್ರತಿನಿಧಿಗಳು ಈ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೀಗಿರುವಾಗ ಸಣ್ಣ ಅಜಾಗರೂಕತೆಯೂ ಆಗಬಾರದು ಅಂತ ಬಿಬಿಎಂಪಿ ತುಸು ಎಚ್ಚರಿಕೆ ವಹಿಸಿದೆ. ಬೀದಿ ಬದಿಯಲ್ಲಿರೋ ಮಾಂಸಾಹಾರ ಅಂಗಡಿಗಳನ್ನು ಹಾಗೂ ಮಾಂಸ ಮಾರಾಟವನ್ನು ಜನವರಿ 23 ರಿಂದ ಫೆಬ್ರವರಿ 17 ರವರೆಗೆ ಮಾಂಸ ಮಾರಾಟವನ್ನು ನಿಷೇಧ ಮಾಡಲಾಗಿದೆ. ವೈಮಾನಿಕ ಪ್ರದರ್ಶನ ವೇಳೆ ಮಾಂಸ ತ್ಯಾಜ್ಯ ತಿನ್ನುವುದಕ್ಕೆ ಹದ್ದು ಸೇರಿದಂತೆ ಅನೇಕ ಪಕ್ಷಿಗಳು ಅಗಮಿಸುತ್ತೆ ಇದರಿಂದ ಏರ್ ಶೋ ಗೆ ತೊಂದ್ರೆ ಅಗಬಹುದು. ಈ ಹಿನ್ನೆಲೆ ಮಾಂಸ ಮಾರಾಟವನ್ನು ಯಲಹಂಕ ವಾಯು ನೆಲೆಯ 13 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧ ಹೇರಲಾಗಿದೆ.
ಇನ್ನು ಯಲಹಂಕ ಏರ್ಬೇಸ್ನಿಂದ ಕೇವಲ ಕಿಲೋಮೀಟರ್ಗಳ ಹತ್ತಿರದಲ್ಲಿರೋ ಮಿಟ್ಟಗಾನಹಳ್ಳಿ ಡಂಪಿಂಗ್ ಯಾರ್ಡ್ ಅನ್ನೂ ಬಂದ್ ಮಾಡಿದೆ. ಕಸ ಡಂಪ್ ಮಾಡೋದ್ರಿಂದ ಪಕ್ಷಿ ಹಾಗೂ ಹದ್ದುಗಳ ಹಾರಾಟ ಹೆಚ್ಚಾಗ್ತಿವೆ. ಇದರಿಂದಾಗಿ ಉಕ್ಕಿನ ಹಕ್ಕಿಗಳ ಹಾರಾಟಕ್ಕೂ ಸಮಸ್ಯೆಯಾಗುತ್ತೆ ಅನ್ನೋ ಕಾರಣದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಏರ್ ಶೋ ನಡೆಯುವ ವಾಯು ನೆಲೆಯ 13 ಕಿ.ಮೀ ವ್ಯಾಪ್ತಿಯಲ್ಲಿ ಫೆಬ್ರವರಿ ಒಂದರಿಂದ 14 ರವರೆಗೆ ಬೃಹತ್ ಕಟ್ಟಡ ಕಟ್ಟುವಾಗ ಬಳಕೆ ಮಾಡುವ ಕ್ರೈನ್ ಬಳಸದಂತೆ ಅದೇಶ ಮಾಡಲಾಗಿದೆ. ಕ್ರೈನ್ ಬಳಕೆ ಯಿಂದ ವೈಮಾನಿಕ ಪ್ರದರ್ಶನಕ್ಕೆ ಧಕ್ಕೆ ಉಂಟಗೂವ ಸಾಧ್ಯತೆ ಇದೆ ಅಂತ ಬೃಹತ್ ಕಟ್ಟಡ ಕಾಮಗಾರಿಗಳ ನಿರ್ಮಾಣಕ್ಕೆ ನಿಷೇಧ ಹೇರಲಾಗಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ನಡಿತ್ತಿರೋ ವೈಮಾನಿಕ ಪ್ರದರ್ಶನಕ್ಕೆ ಯಾವುದೇ ರೀತಿಯ ದಕ್ಕೆ ಅಗಬರದು ಅಂತ ಬಿಬಿಎಂಪಿ ಸಿದ್ದತೆ ನಡೆಸಿದ್ದು, ಚಾಚುತಪ್ಪದೆ ನಿಗಮ ಪಾಲಿಸಿ ಎಂದು ಖಡಕ್ ಸೂಚನೆ ನೀಡಿದೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc