ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಮಾಂಡ್ ಸೆಂಟರ್ಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. 6 ವಿಮಾನಗಳಲ್ಲಿ 12 ಜನ ಬಾಂಬರ್ಗಳು ಇರುವುದಾಗಿ ಅಪರಿಚತರು ಮೆಸೇಜ್ ಮಾಡಿದ್ದಾರೆ.
ಅನಾಮಧೇಯ ಟ್ವಿಟರ್ ಖಾತೆಯಿಂದ ಈ ಸಂದೇಶ ಮಾಡಲಾಗಿದೆ. ಇಂಡಿಗೋದ IX233, IX 375, IX 481, IX 383, IX 549, IX 399 ಎನ್ನುವ 6 ವಿಮಾನಗಳಲ್ಲಿ ಬಾಂಬರ್ಗಳು ಇರುವುದಾಗಿ ಬೆದರಿಕೆ ಹಾಕಲಾಗಿದೆ. ಅಲ್ಲದೇ ಒಂದೊಂದು ವಿಮಾನಗಳಲ್ಲಿ ಇಬ್ಬರು ಇರುವಂತೆ ಒಟ್ಟು 12 ಮಂದಿ ಬಾಂಬರ್ಗಳು ಇರುವುದಾಗಿ ಎಕ್ಸ್ ಅಕೌಂಟ್ ಮೂಲಕ ಆಗಂತುಕರು ಮೆಸೇಜ್ ಮಾಡಿದ್ದಾರೆ.
ಮಂಗಳೂರು- ದುಬೈ, ತಿರುವನಂತಪುರಂ- ಮಸ್ಕಟ್ ಸೇರಿದಂತೆ ಭಾರತದ ವಿವಿಧ ಏರ್ಪೋರ್ಟ್ಗಳಿಂದ ತೆರಳುವ ವಿಮಾನಗಳು. ಕಳೆದ ಒಂದು ವಾರದಿಂದ ಕೆಂಪೇಗೌಡ ಏರ್ಪೋರ್ಟ್ಗೆ ಇದು 2ನೇ ಬಾರಿಗೆ ಹುಸಿ ಬಾಂಬ್ ಸಂದೇಶ ಬಂದಿದೆ. ಈ ಹಿನ್ನೆಲೆಯಲ್ಲಿ ಏರ್ಪೋರ್ಟ್ ಅಧಿಕಾರಿಗಳು ಹಾಗೂ ಭದ್ರತಾ ಪಡೆಯಿಂದಲೂ ಹೈಅಲರ್ಟ್ ಮಾಡಲಾಗಿದೆ.