- ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡ್ತಿದ್ದ ನಾಲ್ವರನ್ನು ಬಂಧಿಸಿದ ಪೊಲೀಸರು
- ವಿದ್ಯಾರ್ಥಿಗಳು ಇರುತ್ತಿದ್ದ ಮನೆಗೆ ಸಿಬಿಐ ಅಧಿಕಾರಿಗಳೆಂದು ದಾಳಿ ಮಾಡ್ತಿದ್ದ ಆರೋಪಿಗಳು
- ಅನುಮಾನಗೊಂಡು ಪೊಲೀಸ್ ಠಾಣೆಗೆ ದೂರು ನೀಡಿದ ವಿದ್ಯಾರ್ಥಿಗಳು
ಬೆಂಗಳೂರು: ಸಿಬಿಐ ಪೊಲೀಸರೆಂದು ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಕೇರಳ ಮೂಲದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿಗಳಿದ್ದ ಮನೆಗೆ ಸಿಬಿಐ ಅಧಿಕಾರಿಗೆಳೆಂದು ದಾಳಿ ಮಾಡಿದ್ದು, ಈ ವೇಳೆ ಅವರೇ ತಂದಿದ್ದ ಗಾಂಜಾವನ್ನು ವಿದ್ಯಾರ್ಥಿಗಳ ಕೈಯಲ್ಲಿ ಇಟ್ಟು ವಿಡಿಯೊ ಮಾಡಿಕೊಂಡು ಲಾಟಿಯಿಂದ ಹಲ್ಲೆ ಮಾಡಿದ್ದರು.
ಆರೋಪಿಗಳ ನಡವಳಿಕೆಯಿಂದ ಅನುಮಾನಗೊಂಡ ಯುವಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ತನಿಖೆ ನಡೆಸಿದ ಸೋಲದೇವನಹಳ್ಳಿ ಪೊಲೀಸರು ಕೇರಳ ಮೂಲದ ನಾಲ್ವರನ್ನು ಬಂಧಿಸಿದ್ದಾರೆ. ಅನಂತಕೃಷ್ಣ(23), ಪ್ರಮೋದ (42), ಆದರ್ಶ್(22) ಮತ್ತು ದೀಪಕ್ ಆರ್ ಚಂದ್ರ (37) ಬಂಧಿತ ಆರೋಪಿಗಳಾಗಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಹಲವು ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.