ಬೆಂಗಳೂರು: ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಕಂಡ ಕಂಡಲ್ಲಿ ಲೂಟಿ ಮಾಡ್ತಿದೆ ಅಂತ ಮಾಜಿ ಸಚಿವ ಅಶ್ವಥ್ ನಾರಾಯಣ್ ವಾಗ್ದಾಳಿ ನಡೆಸಿದ್ದಾರೆ. ವಾಲ್ಮೀಕಿ ನಿಗಮದ ಹಣವನ್ನ ವರ್ಗಾವಣೆ ಮಾಡಿ ನುಂಗಿದ್ದಾರೆ, ಇದು ಮನಿ ಲಾಂಡ್ರಿಂಗ್ ಆಕ್ಟ್ ಅಡಿಯಲ್ಲಿ ಬರುತ್ತೆ ಹಾಗೂ ಎನ್ಫೋರ್ಸ್ ಡಿಪಾರ್ಟ್ಮೆಂಟ್ ಅಡಿಯಲ್ಲಿ ಬರುತ್ರೆ. ಜೊತೆಗೆ ಸರ್ಕಾರ ಕೂಡ ಹಣ ಲೂಟಿ ಆಗಿರೋ ಬಗ್ಗೆ ಒಪ್ಪಿಕೊಂಡು ಹಣ ವಾಪಸ್ ಪಡೆಯೋದಾಗಿ ಹೇಳಿದೆ. ವಾಲ್ಮೀಕಿ ನಿಗಮದ ಹಣದ ಕುಣಿಕೆ ಎಲ್ಲರ ಕುತ್ತಿಗೆಗೆ ಹೋಗಿದ್ದು ಈಗಾಗಲೇ ಸಚಿವರೇ ಅರೆಸ್ಟ್ ಆಗಿದ್ದಾರೆ. ರಾಜ್ಯದಲ್ಲಿ ಹಣದ ಲೂಟಿ ಹೊಡೆದು ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟ ನೀರು ಕುಡಿಯುತ್ತಿದೆ. ಕಾಂಗ್ರೆಸ್ ಲೂಟಿ ಹೊಡೆದಿರೋ ಹಣ ವಾಪಸ್ ಬರಬೇಕು, ಲೂಟಿ ಮಾಡಿದವರಿಗೆ ಶಿಕ್ಷೆ ಆಗಬೇಕು, ತಪ್ಪಿತಸ್ಥರ ಬಂಧನ ಆಗಬೇಕು ಎಂದು ಮಾಜಿ ಸಚಿವ ಅಶ್ವಥ್ ನಾರಾಯಣ್ ವಾಗ್ದಾಳಿ ನಡೆಸಿದ್ದಾರೆ