- ರಾಜ್ಯದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ
- ಆಟೋ ಪ್ರಯಾಣದ ಕನಿಷ್ಠ ದರ ಹೆಚ್ಚಿಸಲು ಅಗ್ರಹ
ರಾಜ್ಯದಲ್ಲಿ ಬೆಲೆ ಏರಿಕೆಯ ಬಿಸಿ ಈಗಾಗಲೇ ಸಾರ್ವಜನಿಕರಿಗೆ ತಟ್ಟಿದೆ. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗಿದೆ. ಹಾಗೆ ಹಾಲಿನ ದರ 2ರೂ. ಜಾಸ್ತಿ ಆಗಿದೆ. ಇದರಿಂದಾಗಿ ಸಾಮಾನ್ಯ ಜನರು ತತ್ತರಿಸಿ ಹೋಗಿದ್ದಾರೆ. ಇದರ ಬೆನ್ನಲೇ ಆಟೋ ಚಾಲಕರು ಆಟೋ ಪ್ರಯಾಣದ ಕನಿಷ್ಠ ದರ ಹೆಚ್ಚಿಸಲು ಸರ್ಕಾರಕ್ಕೆ ಅಗ್ರಹಿಸಿದೆ.
ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್, 2021 ರಿಂದ ಪ್ರಯಾಣದ ದರ ಹೆಚ್ಚಿಸಿಲ್ಲ. ಹೀಗಾಗಿ ದರ ಹೆಚ್ಚಿಸಬೇಕು ಎಂದಿದ್ದಾರೆ. ಸದ್ಯ ಕನಿಷ್ಠ ದರ ( 2 ಕಿ.ಮೀ ) 30 ರೂಪಾಯಿ ಇದ್ದು, ಅದನ್ನು 40 ರೂ ವರೆಗೂ ಹೆಚ್ಚಿಸಬೇಕು. 2 ಕಿ. ಮೀ ನಂತರದ ಪ್ರಯಾಣದ ದರವನ್ನು ಕಿ. ಮೀ ಗೆ 15 ರೂ ಇದ್ದು, ಅದನ್ನು 20ಕ್ಕೆ ಹೆಚ್ಚಿಸಲು ಅಗ್ರಹಿಸಿದ್ದಾರೆ.
ಆಟೋ ದರ ಕೂಡ ಜಾಸ್ತಿ ಆಗಿದ್ದು, ಪೆಟ್ರೋಲ್ ಹಾಗೂ ಗ್ಯಾಸ್ ನ ದರ ಸಹ ಏರಿಕೆ ಆಗಿದೆ. ಇದರಿಂದ ಆಟೋ ಪ್ರಯಾಣದ ದರ ಹೆಚ್ಚಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ