ಭಾನುವಾರ ಡಿಸಿಎಂ ಡಿ. ಕೆ ಶಿವಕುಮಾರ್ ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಸಭೆಯಲ್ಲಿ ಡಿ.ಕೆ ಶಿವಕುಮಾರ್ ಮಾತನಾಡಿದ್ದು, 15 ದಿನಗಳ ಕಾಲ ಗಡುವುದು ನೀಡಿ ಅಷ್ಟರೊಳಗೆ ಇರುವ ಎಲ್ಲಾ ಕೆಲಸಗಳನ್ನು ಬಿಟ್ಟು ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಬೇಕು. ಮಾಡದೇ ಇದ್ದರೆ ಸಂಬಂಧಪಟ್ಟವರ ಮೇಲೆ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳುತ್ತೇವೆ. ಯಾರ್ಯಾರು ಸಸ್ಪೆಂಡ್ ಆಗುತ್ತಾರೋ ಗೊತ್ತಿಲ್ಲ’ ಎಂದು ಹೇಳಿದ್ದರು.
ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪ್ರತಿಕ್ರಿಯೆ ನೀಡಿದ್ದಾರೆ. ಒಂದು ವಾರ್ಡ್ನಲ್ಲಿಯೇ 1663 ಗುಂಡಿಗಳು ಇದ್ದು, ಮುಖ್ಯ ರಸ್ತೆಗಳಲ್ಲಿಯೇ 280 ಗುಂಡಿಗಳಿವೆ. ಸುಮಾರು 2000 ಗುಂಡಿಗಳಿರುವುದು ನಮಗೆ ಸಾರ್ವಜನಿಕರು ಕಳಿಸುವ ಆಪ್ನಿಂದ ತಿಳಿದು ಬಂದಿದೆ. ಇನ್ನು ಹಲವಾರು ಗುಂಡಿಗಳು ರಿಪೋರ್ಟ್ ಆಗಿಲ್ಲ. ಅದರ ಮೇಲೂ ಗಮನ ಹರಿಸಿ ಕಾರ್ಯ ನಿರ್ವಹಿಸುತ್ತೇವೆ. ಇನ್ನು ಒಂದೇ ವಾರದಲ್ಲಿ 2000 ಗುಂಡಿಗಳನ್ನು ಮುಚ್ಚುವ ಕೆಲಸ ಮಾಡ್ತಿವಿ. ಪ್ರತಿ ವ್ಯಾಪ್ತಿಯ ವಲಯ ಆಯುಕ್ತರು ಖುದ್ದು ಭೇಟಿ ನೀಡಿ ಅವರ ಮೇಲುಸ್ತುವಾರಿಯಲ್ಲಿ ಗುಂಡಿಗಳನ್ನು ಮುಚ್ಚಲಿದ್ದಾರೆ. ಗುಂಡಿಗಳನ್ನು ಮುಚ್ಚದಿದ್ದರೆ ಅಧಿಕಾರಿಗಳು ಸಸ್ಪೆಂಡ್ ಆಗ್ತಾರೆ ಎಂದು ತುಷಾರ್ ಗಿರಿನಾಥ್ ಹೇಳಿದ್ದಾರೆ.