ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಿಲಿಕಾನ್ ಸಿಟಿ ಜನರಿಗೆ ಒಂದು ಗುಡ್ನ್ಯೂಸ್ ನೀಡಿದೆ. ಈವರೆಗೆ ಇ-ಖಾತೆ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಎಂಬ ನಿಯಮ ಮಾಡಿತ್ತು. ಈಗ ಈ ನಿರ್ಧಾರದಿಂದ ಹಿಂದೆ ಸರಿದಿರುವ ಪಾಲಿಕೆ, ಆಧಾರ್ ಕಾರ್ಡ್ ಇಲ್ಲದೆಯೂ ಇ-ಖಾತೆಗೆ ಅರ್ಜಿ ಸಲ್ಲಿಸಲು ಬಿಬಿಎಂಪಿ ಅವಕಾಶ ನೀಡಿದೆ.
ಪಾಲಿಕೆ ಇದುವರೆಗೆ ಇ -ಖಾತೆ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಮಾಡಿತ್ತು. ಆ ಸಮಯದಲ್ಲಿ ಅರ್ಜಿದಾರರು ಆಧಾರ್ ಕಾರ್ಡ್ ಕೆವೈಸಿ, ಓಟಿಪಿ ಸೇರಿದಂತೆ ಇತರೆ ತಾಂತ್ರಿಕ ಸಮಸ್ಯೆ ಎದುರಿಸುತ್ತಿದ್ದರು. ಹೀಗಾಗಿ ಪಾಲಿಕೆ ಈ ನಿರ್ಧಾರದಿಂದ ಹಿಂದೆ ಸರಿದಿದೆ. ಆಧಾರ್ ಕಾರ್ಡ್ ಇಲ್ಲದೆಯೂ ಇ ಖಾತೆಗೆ ಅರ್ಜಿ ಸಲ್ಲಿಸಲು ಪಾಲಿಕೆ ಅವಕಾಶ ಕೊಟ್ಟಿದೆ.
ಆಧಾರ್ ಬದಲಿಗೆ ಪಾಸ್ಪೋರ್ಟ್, ವೋಟರ್ ಐಡಿ ಸೇರಿ ಇತರೆ ದಾಖಲೆ ನೀಡಲು ಪಾಲಿಕೆ ಹೇಳಿದೆ. ಈ ಮೂಲಕ ಈಗ ಉಂಟಾಗುತ್ತಿರುವ ಕೆವೈಸಿ, ಓಟಿಪಿ ಸಮಸ್ಯೆ ಬಗೆಹರಿಯುವ ನಿರೀಕ್ಷೆ ಇದೆ. ಅಧಿಕೃತ ವೆಬ್ಸೈಟ್ www.bbmpeaasthi.Karnataka.gov.in ನಲ್ಲಿ ಇ -ಖಾತೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಇಲ್ಲವಾದರೆ ಗ್ರಾಹಕರು ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ- ಖಾತೆ ಪಡೆಯಬಹುದು.