- ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ
- ಜುಲೈ 1 ರಿಂದ ಮದ್ಯದ ಬೆಲೆ ಇಳಿಕೆ
ಬೆಂಗಳೂರಿನಲ್ಲಿ ಎಲ್ಲಾ ವಸ್ತುಗಳ ಬೆಲೆ ಏರಿಕೆಯ ಬಿಸಿ ತಟ್ಟಿದೆ. ತೈಲ ಹಾಗೂ ತರಕಾರಿಗಳ ಬೆಲೆ ದುಬಾರಿ ಇರುವುದು ನಮೆಲ್ಲರಿಗೂ ತಿಳಿದಿರುವ ವಿಷಯ. ಹಾಗೆ ಮದ್ಯದ ಬೆಲೆಯು ಸಹ ಏರಿಕೆಯಾಗಿತ್ತು. ಈಗ ಕರ್ನಾಟಕ ಸರ್ಕಾರ ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟಿದ್ದೆ. ಜುಲೈ 1 ರಿಂದ ಮದ್ಯದ ಬೆಲೆ ಅಗ್ಗವಾಗಿ ಸಿಗಲಿದೆ. ರಾಜ್ಯ ಸರ್ಕಾರ ಮದ್ಯದ ಮೇಲಿರುವ ಅಬಕಾರಿ ತೆರಿಗೆಯನ್ನು ಇಳಿಕೆ ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಆದಾಯವನ್ನು ಹೆಚ್ಚಿಸಿಕೊಳ್ಳಲು ಮದ್ಯದ ಮೇಲಿನ ಅಬಕಾರಿ ತೆರಿಗೆಯನ್ನು ಹೆಚ್ಚಿಸಿದರು. ಜುಲೈ 2023ರಲ್ಲಿ ಭಾರತೀಯ ನಿರ್ಮಿತ ಮದ್ಯದ ಮೇಲೆ 20% ಅಬಕಾರಿ ತೆರಿಗೆಯನ್ನು ಹೆಚ್ಚಿಸಿದ್ದರು. ಇನ್ನು ಜನವರಿ 2024ರಲ್ಲಿ ಬಿಯರ್ ಮೇಲಿನ ಅಬಕಾರಿ ತೆರಿಗೆಯನ್ನು ಹೆಚ್ಚಿಸಿ ಆದೇಶ ಹೊರಡಿಸಿತ್ತು.
ನೆರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಮದ್ಯದ ದರ ಹೆಚ್ಚಿದೆ. ಹಾಗಾಗಿ ಗಡಿ ಭಾಗದ ಸಾರ್ವಜನಿಕರು ಅಕ್ರಮವಾಗಿ ನೆರೆ ರಾಜ್ಯಗಳಿಂದ ಮದ್ಯ ಮಾರಾಟ ಹಾಗೂ ಖರೀದಿಸುತ್ತಿದ್ದಾರೆ. ಇದರಿಂದಾಗಿ ರಾಜ್ಯದ ವರಮಾನದಲ್ಲಿ ಖೋತಾ ಆಗಿದ್ದು, ಅಬಕಾರಿ ತೆರಿಗೆಯಲ್ಲಿ ನಷ್ಟ ಉಂಟಾಗುತ್ತಿದೆ. ಹೀಗಾಗಿ ಮದ್ಯದ ದರ ಇಳಿಸಲು ಕರ್ನಾಟಕ ಅಬಕಾರಿ ನಿಯಮಗಳು-1968 ಕ್ಕೆ ತಿದ್ದುಪಡಿ ತರಲು ಮಂಗಳವಾರ ಸರಕಾರ ಕರಡು ಅಧಿಸೂಚನೆ ಹೊರಡಿಸಿದೆ.
ಇನ್ನು ಪ್ರತಿ ಲೀಟರ್ ಮದ್ಯದ ಬೆಲೆ ಎಷ್ಟು ಇಳಿಕೆಯಾಗಲಿದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಮದ್ಯದ ದರ ಕಮ್ಮಿಯಾಗುವುದಂತು ನಿಶ್ಚಿಚಿತ, ಜುಲೈ 1 ರಿಂದ ಬೆಲೆ ಇಳಿಕೆಯಾಗುವುದು. ಈ ಕುರಿತು ಮದ್ಯಪ್ರಿಯರಿಗೆ ಸಂತಸ ನೀಡಿದೆ.