ಹೊಂದಾಣಿಕೆ ರಾಜಕಾರಣದಿಂದ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳಿಗೂ ನಷ್ಟ, ರಾಜ್ಯದ ಬೊಕ್ಕಸಕ್ಕೂ ನಷ್ಟವಾಗುತ್ತದೆ ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧವೇ ಎಂಎಲ್ಸಿ ಸಿ.ಟಿ.ರವಿ ಕೆಂಡ ಕಾರಿದ್ದಾರೆ. ಈ ಹೊಂದಾಣಿಕೆ ಪಾಲಿಟಿಕ್ಸ್ಗೆ ಫುಲ್ ಸ್ಟಾಪ್ ಇಡಬೇಕು, ಈ ಹೊಂದಾಣಿಕೆ ರಾಜಕಾರಣದಿಂದಲೇ ನನಗೆ ಟಿಕೆಟ್ ಕೈ ತಪ್ಪಿತು. ಪಕ್ಷಕ್ಕಾಗಿ, ಸಿದ್ಧಾಂತಕ್ಕಾಗಿ ದುಡಿದವರಿಗೆ ಅನ್ಯಾಯವಾಗಿದೆ. ನನ್ನ ವಿರುದ್ಧವೇ ಪಿತೂರಿ, ಷಡ್ಯಂತ್ರ ಮಾಡಿದ್ರು ಎಂದು ಸ್ವಪಕ್ಷಿಯರ ವಿರುದ್ಧವೇ ಎಂಎಲ್ಸಿ ಸಿ.ಟಿ.ರವಿ ಬ್ಲಾಸ್ಟ್ ಆಗಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಸಿ.ಟಿ.ರವಿ, ನನ್ನ ವಿರುದ್ಧ ಯಾರು, ಏನೇನೂ ಮಾಡಿದ್ದಾರೆ ಅಂತ ಗೊತ್ತಿದೆ, ಕಾಲ ಬರಲಿ ಎಲ್ಲದ್ದಕ್ಕೂ ಉತ್ತರ ಕೊಡುತ್ತೇನೆ ಎಂದು ಬಿಜೆಪಿ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.