ಬೆಂಗಳೂರಿನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಯುವತಿಯೊಬ್ಬಳು ತನ್ನ ಬಾಯ್ಫ್ರೆಂಡ್ ತನ್ನನ್ನು ಮತ್ತು ತಾನಿದ್ದ ಊರನ್ನು ಬಿಟ್ಟು ಹೋಗಬಾರದೆಂದು ಯುವಕನನ್ನು ತಡೆಯಲು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆ ಮಾಡಿ ಬಾಂಬ್ ಇದೆ ಎಂದು ಹೇಳಿದ್ದಾಳೆ. ಪುಣೆಯ 29 ವರ್ಷದ ಇಂದ್ರ ರಾಜ್ವರ್ ಎಂಬ ಯುವತಿಯೊಬ್ಬಳು ತನ್ನ ಬಾಯ್ಫ್ರೆಂಡ್ ಆದ ಮಿರ್ ರಜಾ ಮೆಹದಿ ತನ್ನನ್ನು ಹಾಗೂ ಯುವತಿ ಇದ್ದ ಊರನ್ನು ಬಿಟ್ಟು ಹೋಗುವುದನ್ನು ತಪ್ಪಿಸಲು ಯುವಕನ ಬ್ಯಾಗ್ನಲ್ಲಿ ಬಾಂಬ್ ಇದೆ ಎಂದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆ ಮಾಡಿ ಹೇಳಿದ್ದಾಳೆ. ಆಕೆಯ ಸ್ನೇಹಿತ ಊರು ಬಿಟ್ಟು ಹೋಗುವುದನ್ನು ತಪ್ಪಿಸುವ ಉದ್ದೇಶ ಆಕೆದ್ದಾಗಿತ್ತು. ಆದರೆ ಅದು ಉಲ್ಟಾ ಹೊಡೆದಿದೆ. ಹುಸಿ ಬಾಂಬ್ ಕರೆ ಮಾಡಿದ ಕಾರಣ ಆಕೆ ಈಗ ಕಾನೂನು ಸುಳಿಗೆ ಸಿಲುಕಿದ್ದು, ಆಕೆಯ ವಿರುದ್ಧ ಪ್ರಕರಣ ದಾಖಲಾಗಿದೆ. ಜೂನ್ 26 ರಂದು ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಾರ್ವಜನಿಕ ಕಿರುಕುಳಕ್ಕೆ ಕಾರಣವಾಗುವ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಎಫ್ಐಆರ್ ದಾಖಲಿಸಲಾಗಿದೆ.