ಬೆಂಗಳೂರಿನಲ್ಲಿ ಬ್ರಾಂಡೆಡ್ ಬಟ್ಟೆಗಳನ್ನು ನಕಲು ಮಾಡಿ ಮಾರಾಟ ಮಾಡುತ್ತಿದ್ದ ಜಾಲವನ್ನ ಸಿಸಿಬಿ ಅಧಿಕಾರಿಗಳು ಬೇಧಿಸಿದ್ದಾರೆ.
ನೈಕಿ, ಪೂಮಾ, ಟಾಮಿ ಹೈಪೈಯರ್, ಅಂಡರ್ ಆರ್ಮೋರಾ, ಅಡಿಡಾಸ್, ಝರ ಕಂಪನಿ ಬಟ್ಟೆಗಳನ್ನಾ ನಖಲು ಮಾಡಿ ಮಾರಾಟ ಮಾಡುವ ಮೂಲಕ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ ಜಾಲವು ಬಟ್ಟೆಗಳನ್ನ ದಾಸ್ತಾನು ಮಾಡಿದ್ದ ಸ್ಥಳದ ಮೇಲೆ ಸಿಸಿಬಿ ಆರ್ಥಿಕ ಅಪರಾಧ ದಳದ ಅಧಿಕಾರಿಗಳು ದಾಳಿ ನಡೆಸಿ 1.30 ಕೋಟಿ ರುಪಾಯಿ ಮೌಲ್ಯದ ಬಟ್ಟೆಗಳು ಹಾಗು ಓರ್ವ ವ್ಯಕ್ತಿಯನ್ನ ವಶಕ್ಕೆ ಪಡೆದಿದ್ದಾರೆ.