ಬೆಂಗಳೂರಿನ ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಬಳಿ ಸರಣಿ ಅಪಘಾತವಾಗಿದೆ. ಬಸ್ ಹಿಂದಿಕ್ಕಲು ಹೋಗಿ ಆಟೋ ಅಪ್ಪಚ್ಚಿಯಾಗಿದೆ. ಕೆಎಸ್ಆರ್ಟಿಸಿ ಬಸ್ ಮತ್ತು ಆಟೋ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಪರಿಣಾಮ ಇಬ್ಬರು ಚಾಲಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಒಂದಲ್ಲಾ ಒಂದು ರಸ್ತೆ ಅಪಘಾತಗಳು ನಡೆಯುತ್ತಲೇ ಇವೆ. ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಬಳಿ ಆಟೋ ಚಾಲಕ ಕೆಎಸ್ಆರ್ಟಿಸಿ ಬಸ್ನ ಹಿಂದಿಕ್ಕಲು ಹೋಗಿ ಈಗೊಂದು ಸರಣಿ ಅಪಘಾತ ಸಂಭವಿಸಿದೆ. ಡಿವೈಡರ್ ಹಾಗೂ ಬಸ್ ಮಧ್ಯೆ ಸಿಲುಕಿದ ಆಟೋ ಸಂಪೂರ್ಣ ಜಖಂಗೊಂಡಿದ್ದು, ಬಸ್ನ ಮುಂಭಾಗವೂ ನಜ್ಜುಗುಜ್ಜಾಗಿದೆ. ಈ ಮಧ್ಯೆ ಒಂದು ಕಾರಿನ ಹಿಂಭಾಗವೂ ಕೂಡ ಛಿದ್ರಗೊಂಡಿದ್ದು, ಇದರ ಜೊತೆಗೆ ಖಾಸಗಿ ಬಸ್ಸಿಗೂ ಕೂಡ ಹಾನಿಯುಂಟಾಗಿದೆ.
ಇಬ್ಬರೂ ಚಾಲಕರಿಗೂ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಜ್ಞಾನಭಾರತಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಿನ್ನೆ ಈ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ. ಡಿವೈಡರ್ಗೆ ಗುದ್ದಿ ಬಸ್ ಆಚೆಗೆ ಬರುವಷ್ಟು ಭೀಕರ ಅಪಘಾತ ನಡೆದಿದ್ದು ಒಳಗಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.