ಬೆಂಗಳೂರು: ಮುಖ್ಯ ಪೈಪ್ಲೈನ್ನ ನೀರು ನಿರುಗಡೆ ಕಾಮಗಾರಿ ಹಿನ್ನೆಲೆ ಬೆಂಗಳೂರಿನ ವಿವಿಧೆಡೆ ಜನವರಿ 23 ರಿಂದ 24 ರಂದು ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಈ ಬಗ್ಗೆ ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಜಲಮಂಡಳಿ 4ನೇ ಹಂತ, 2ನೇ ಹಂತದ ಹೆಗ್ಗನಹಳ್ಳಿಯಿಂದ ಜಿಕೆವಿಕೆ ಕಡೆಗೆ ಸಾಗುವ ಕೊಳವೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ಹಿನ್ನೆಲೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಈ ಕಾರಣದಿಂದ ಎರಡು ದಿನಗಳ ಕಾಲ ಇಡೀ ದಿನ ನೀರು ಪೂರೈಕೆ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜನವರಿ 23ರ ಬೆಳಗ್ಗೆ 5ರಿಂದ ಜನವರಿ 24 ರ ಬೆಳಗ್ಗೆ 5ರವರೆಗೆ 24 ಗಂಟೆ ನೀರು ಸ್ಥಗಿತ ಆಗಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ನೀರು ಶೇಖರಣೆ ಮಾಡಿಟ್ಟುಕೊಳ್ಳುವಂತೆ ಜಲಮಂಡಳಿ ಮನವಿ ಮಾಡಿದೆ.
ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿರುವ ಪ್ರದೇಶಗಳು
ಆರ್.ಆರ್. ನಗರ, ಐಡಿಯಲ್ ಹೋಮ್ಸ್, ಕೆಂಚೇನಹಳ್ಳಿ, ಹಲಗೆ ವಡೇರನಹಳ್ಳಿ, ಕೋಡಿಪಾಳ್ಯ, ಚನ್ನಸಂದ್ರ, ಕೆಂಗೇರಿ, ಕೆಂಗೇರಿ ಉಪನಗರ, ನಾಗದೇವನಹಳ್ಳಿ, ಮರಿಯಪ್ಪನ ಪಾಳ್ಯ. ನಾಗರಭಾವಿ, ಎಸ್.ಎಂ.ವಿ ಲೇಔಟ್ – 1 ರಿಂದ 9 ನೇ ಬ್ಲಾಕ್, ಮಲ್ಲತಹಳ್ಳಿ, ಕೊಟ್ಟಿಗೆಪಾಳ್ಯ, ಹೇರೋಹಳ್ಳಿ, ಹೆಗ್ಗನಹಳ್ಳಿ, ಸುಂಕದಕಟ್ಟೆ, ರಾಜಗೋಪಾಲನಗರ, ಲಕ್ಷ್ಮಿ ದೇವಿನಗರ, ಲೆಗ್ಗೇರೆ, ಪೀಣ್ಯ ಕೈಗಾರಿಕಾ ಪ್ರದೇಶ, ಪೀಣ್ಯ.
ಟಿ.ದಾಸರಹಳ್ಳಿ, ನೆಲಗದರನಹಳ್ಳಿ, ಹೆಚ್.ಎಂ.ಟಿ ಲೇಔಟ್, ಬಗಲಗುಂಟೆ, ಎಂ.ಇ.ಐ ಲೇಔಟ್, ಅಬ್ಬಿಗೇರೆ, ಬ್ಯಾಟರಾಯನಪುರ, ಅಮೃತಹಳ್ಳಿ, ಜಕ್ಕೂರು, ಕಾಫಿ ಬೋರ್ಡ್ ಲೇಔಟ್. ಕೆಂಪಾಪುರ, ಯಲಹಂಕ ಓಲ್ಡ್ ಅ್ಯಂಡ್ ನ್ಯೂ ಟೌನ್, ಕೋಗಿಲು, ವಿದ್ಯಾರಣ್ಯಪುರ, ಸಿಂಗಾಪುರ, ಜಾಲಹಳ್ಳಿ, ಬಿ.ಇ.ಎಲ್ ರಸ್ತೆ, ಮುತ್ಯಾಲನಗರ, ಜೆ.,ಪಿ ಪಾರ್ಕ್, ದಾಸರಹಳ್ಳಿ.
ರಾಚೇನಹಳ್ಳಿ, ಮಹಾಲಕ್ಷ್ಮಿ ಲೇಔಟ್, ಸುಬ್ರಮಣ್ಯನಗರ, ಗಾಯತ್ರಿನಗರ, ಜಿ.ಸಿ.ನಗರ, ಕುರುಬರಹಳ್ಳಿ, ನಂದಿನಿ ಲೇಔಟ್, ಪ್ರಕಾಶನಗರ, ಗೊರುಗುಂಟೆಪಾಳ್ಯ, ಕಾಮಾಕ್ಷಿಪಾಳ್ಯ, ಬಸವೇಶ್ವನಗರ, ಶಿವನಹಳ್ಳಿ, ಮಂಜುನಾಥನಗರ, ಶಂಕರಮಠ, ಶಂಕರನಗರ, ಕಮಲಾನಗರ, ಶಕ್ತಿಗಣಪತಿನಗರ, ವಿಜಯನಗರ, ಆರ್.ಪಿ.ಸಿ ಲೇಔಟ್, ಚೋಳರಪಾಳ್ಯ, ಹಂಪಿನಗರ, ಸಣ್ಣಕ್ಕಿಬಯಲು, ಅಗ್ರಹಾರ ದಾಸರಹಳ್ಳಿ, ರಾಜಾಜಿನಗರ 6ನೇ ಬ್ಲಾಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಇರಲಿದೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc