ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ಮತ್ತು ನಿವೇದಿತಾಗೌಡ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಡಿವೋರ್ಸ್ ಪಡೆಯಲು ಕೋರ್ಟ್ ಮೊರೆ ಹೋಗಿರುವ ಬಿಗ್ಬಾಸ್ ನ ಕ್ಯೂಟ್ ಕಫಲ್ ನ್ಯಾಯಾಧೀಶರ ಮುಂದೆ ಡಿವೋರ್ಸ್ ಗೆ ಒಪ್ಫಿಗೆ ಸೂಚಿಸಿದೆ. ಡಿವೋರ್ಸ್ ಅರ್ಜಿಗೆ ಇಬ್ಬರು ಒಪ್ಪಿಗೆ ನೀಡಿ ಪತ್ರಕ್ಕೆ ಸಹಿ ಮಾಡಿದ್ದು, ನ್ಯಾಯಾಧೀಶರು ಆದೇಶ ಕಾಯ್ದಿರಿಸಿದ್ದಾರೆ. ಶಾಂತಿನಗರದ 2ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದಿಂದ ಆದೇಶ ಹೊರಬೀಳಲಿದೆ.