- ಸಂಜನಾ ಗಲ್ರಾನಿ ಹಾಗೂ ಶಿವಪ್ರಕಾಶ್ ಚಿಪ್ಪಿಗೆ ಬಿಗ್ ರಿಲೀಫ್
- FIR ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ಸಂಜನಾ, ಶಿವಪ್ರಕಾಶ್
- FIR ರದ್ದುಗೊಳಿಸಿ ಅದೇಶಿಸಿದ ಹೈಕೋರ್ಟ್ ಏಕಸದಸ್ಯ ಪೀಠ
ಡ್ರಗ್ಸ್ ಪ್ರಕರಣದಲ್ಲಿ ಸ್ಯಾಂಡಲ್ವುಡ್ ನಟಿ ಸಂಜನಾ ಗಲ್ರಾನಿ ಹಾಗೂ ಶಿವಪ್ರಕಾಶ್ ಚಿಪ್ಪಿಗೆ ಬಿಗ್ ರಿಲೀಫ್ ನೀಡಿದೆ. ಇಬ್ಬರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಅನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಇದ್ರಿಂದ ನಡಿ ಸಂಜನಾ ಗಲ್ರಾನಿ ಹಾಗೂ ನಿರ್ಮಾಪಕ ಶಿವಪ್ರಕಾಶ್ ಚಿಪ್ಪಿಗೆ ರಿಲೀಫ್ ಸಿಕ್ಕಿದಂತಾಗಿದೆ.
ಮಾದಕ ವಸ್ತು ಜಾಲದ ಜತೆ ನಂಟು ಹೊಂದಿದ್ದಾರೆ ಎಂಬ ಆರೋಪದಲ್ಲಿ 2020ರ ಸೆಪ್ಟೆಂಬರ್ನಲ್ಲಿ ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ, ನಿರ್ಮಾಪಕ ಶಿವಪ್ರಕಾಶ್ ಸೇರಿದಂತೆ ಹಲವರ ಬಂಧನವಾಗಿತ್ತು. ಜೈಲು ಸೇರಿದ್ದ ಸಂಜನಾಗೆ ಅನಾರೋಗ್ಯ ಹಿನ್ನೆಲೆ ಡಿಸೆಂಬರ್ನಲ್ಲಿ ಜಾಮೀನು ಸಿಕ್ಕಿತ್ತು. ಬಳಿಕ ಎಫ್ಐಆರ್ ರದ್ದು ಕೋರಿ ಸಂಜನಾ ಹಾಗೂ ಶಿವಪ್ರಕಾಶ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆ ಅರ್ಜಿಯನ್ನು ಜೂನ್ 20 ರಂದು ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್ ಏಕಸದಸ್ಯ ಪೀಠ ಎಫ್ಐಆರ್ ರದ್ದುಗೊಳಿಸಿ ಆದೇಶಿಸಿದೆ.